ಜಗದೀಶ್ ಶೆಟ್ಟರ್ ಕಾಂಗ್ರೆಸ್ಗೆ ಶೆಟರ್ ಹಾಕಿ ಬಿಜೆಪಿಗೆ ವಾಪಸ್ ಆಗಿದ್ಯಾಕೆ?
ಬೆಂಗಳೂರು, (ಜನವರಿ 25): ಎಂಟೇ ಎಂಟು ತಿಂಗಳು. ಎರಡು ವಿಚಾರಧಾರೆಗಳು. ಎರಡು ಪಕ್ಷಗಳು. ಅವಮಾನ-ಸಮ್ಮಾನ, ಸೋಲು-ಮುಜುಗರ ಏನೇನೆಲ್ಲ ನೋಡ್ಬಿಟ್ಟರು ಉತ್ತರ ಕರ್ನಾಟಕದ ಲಿಂಗಾಯತ ಪ್ರಭಾವಿ ನಾಯಕ ನಾಯಕ ಜಗದೀಶ್ ಶೆಟ್ಟರ್(Jagadish Shettar ). ಪಕ್ಷದ ರಾಜ್ಯಾಧ್ಯಕ್ಷ, 2 ಬಾರಿ ವಿಪಕ್ಷ ನಾಯಕ, ಸ್ಪೀಕರ್, ಮುಖ್ಯಮಂತ್ರಿ.. ಬಿಜೆಪಿಯಲ್ಲಿ ಸಿಗ್ಬೇಕಿದ್ದ ಎಲ್ಲ ಹುದ್ದೆಗಳನ್ನ ಶೆಟ್ಟರ್ ಅನುಭವಿಸಿದವರು. ಆದರೆ, 8 ತಿಂಗಳ ಹಿಂದೆ ಟಿಕೆಟ್ ಕೊಡದೆ ಸ್ವಾಭಿಮಾನಕ್ಕೆ ಧಕ್ಕೆಯಾಯ್ತು ಎಂದು ಬಿಜೆಪಿ ಗುಡ್ಬೈ ಹೇಳಿದ್ದ ಶೆಟ್ಟರ್ ಮತ್ತೆ ಕೇಸರಿ ಪಡೆಗೆ ಸೇರಿಕೊಂಡಿದ್ದಾರೆ….
