ಶಾಸಕರ ಎಸ್.ಎಫ್.ಸಿ ವಿಶೇಷ ಅಭಿವೃದ್ಧಿ ಅನುದಾನದ 20.00 ಕೋಟಿ ರೂ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ವಿಧಾನಸಭೆ ಮುಖ್ಯ ಸಚೇತಕ ಅಶೋಕ್ ಪಟ್ಟಣ ಭೂಮಿ ಪೂಜೆ ನೆರವೇರಿಸಿದರು
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ 27 ವಾರ್ಡ್ ಗಳಿಗೆ ಸನ್ 2024-25 ನೇ ಸಾಲಿನಲ್ಲಿ ಶಾಸಕರ ಎಸ್.ಎಫ್.ಸಿ ವಿಶೇಷ ಅಭಿವೃದ್ಧಿ ಅನುದಾನದ 20.00 ಕೋಟಿ ರೂ ವೆಚ್ಚದ ವಿವಿಧ ಕಾಮಗಾರಿಗಳಿಗೆ ಸೋಮವಾರ ವಿಧಾನಸಭೆ ಮುಖ್ಯ ಸಚೇತಕ ಅಶೋಕ್ ಪಟ್ಟಣ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ರಾಮದುರ್ಗ ಪುರಸಭೆಯಲ್ಲಿ ಇದ್ದಂತಹ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು ಎನ್ನದೆ ಪಟ್ಟಣದ 27 ವಾರ್ಡುಗಳಿಗೆ ಅಭಿವೃದ್ಧಿ ತಾರತಮ್ಯ ಮಾಡದೆ ಎಲ್ಲ ವಾರ್ಡಗಳಿಗೆ ನಾವು ಕೆಲಸ ಹಾಕಿದ್ದೇವೆ…
