ರಾಮ ಮಂದಿರ ಉದ್ಘಾಟನೆ ದಿನ ತಮ್ಮ ತಮ್ಮ ಮನೆಗಳಲ್ಲಿ ದೀಪಾವಳಿಯಂತೆ ರಾಮಜ್ಯೋತಿ ಬೆಳೆಗಿಸಿ ಶ್ರೀರಾಮಚಂದ್ರನನ್ನು ಸ್ವಾಗತಿಸುವಂತೆ ಶಾಸಕ ರಮೇಶ ಜಾರಕಿಹೊಳಿ ತಿಳಿಸಿದರು.
ಗೋಕಾಕ: ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪಣೆ ಐತಿಹಾಸಿಕ ಮಹತ್ವದ ಸಮಾರಂಭವಾಗಿದ್ದು ಅಂದು ಎಲ್ಲರೂ ಪ್ರಧಾನಿ ನರೇಂದ್ರ ಮೋದಿಯವರು ತಿಳಿಸಿದಂತೆ ತಮ್ಮ ತಮ್ಮ ಮನೆಗಳಲ್ಲಿ ದೀಪಾವಳಿಯಂತೆ ರಾಮಜ್ಯೋತಿ ಬೆಳೆಗಿಸಿ ಶ್ರೀರಾಮಚಂದ್ರನನ್ನು ಸ್ವಾಗತಿಸುವಂತೆ ಶಾಸಕ ರಮೇಶ ಜಾರಕಿಹೊಳಿ ತಿಳಿಸಿದರು. ಮಂಗಳವಾರದ ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಸ್ವಚ್ಛತೀರ್ಥ ಅಭಿಯಾನ ಹಿನ್ನಲೆಯಲ್ಲಿ ಬಿಜೆಪಿ ನಗರ ಹಾಗೂ ಗ್ರಾಮೀಣ ಮಂಡಳಗಳಿಂದ ಹಮ್ಮಿಕೊಂಡ ನಗರದ ಶ್ರೀ ಲಕ್ಷ್ಮೀ ದೇವಿ ದೇವಸ್ಥಾನದ ಆವರಣದಲ್ಲಿ ದೇಗುಲಗಳ ಸ್ವಚ್ಛತೆಗೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಕಾರ್ಯಕರ್ತರು ಹಾಗೂ…
