ಬೋಟ್‌ನಲ್ಲಿ ಮಿತಿಗಿಂತ ಹೆಚ್ಚಿನ ಪ್ರವಾಸಿಗರನ್ನು ತುಂಬಿ ಪ್ರಯಾಣ ಬೆಳೆಸಿದ ಕಾರಣ ಬೋಟ್ ಮುಳುಗಡೆ
ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ಬೋಟ್‌ನಲ್ಲಿ ಮಿತಿಗಿಂತ ಹೆಚ್ಚಿನ ಪ್ರವಾಸಿಗರನ್ನು ತುಂಬಿ ಪ್ರಯಾಣ ಬೆಳೆಸಿದ ಕಾರಣ ಬೋಟ್ ಮುಳುಗಡೆ ಆಗಿರುವ ಘಟೆನೆ ನಡೆದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದರು. ಈ ವೇಳೆ ಪ್ರವಾಸಿಗರನ್ನು ಹೊತ್ತೋಯ್ದ ಬೋಟ್ ಮುಳುಗಡೆಯಾಗಿ, ಬೋಟಿನಲ್ಲಿದ್ದ 40ಮಂದಿ ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬೋಟ್ ಮುಡಂಗಿಯ ಗಣೇಶ್ ಎಂಬುವವರಿಗೆ ಸೇರಿದ್ದಾಗಿದೆ. ಘಟನೆ ನಡೆಯುತ್ತಿದ್ದಂತೆ ಕರಾವಳಿ ಕಾವಲು ಪಡೆ ಸಿಬ್ಬಂದಿ ಮತ್ತು ಸ್ಥಳೀಯ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಎಲ್ಲರನ್ನು ರಕ್ಷಣೆ ಮಾಡಿದ್ದಾರೆ.
