ರಾಜ್ಯಪಾಲರನ್ನು ವಾಪಾಸ್ ಕರೆಸಿಕೊಳ್ಳಿ ಪತ್ರ ಚಳುವಳಿಗೆ ಸಚಿವ ತಂಗಡಗಿ ಚಾಲನೆ
ಕೊಪ್ಪಳ: ರಾಜ್ಯದ ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋತ್ ಅವರು ಪಕ್ಷಪಾತ ಮಾಡುತ್ತಿದ್ದು, ಅವರು ತಮ್ಮ ಪೂರ್ವಾಶ್ರಮದ ಪಕ್ಷ ಮತ್ತು ತಮಗೆ ಅಂತಹ ಹುದ್ದೆ ಕೊಟ್ಟ ಬಿಜೆಪಿ ಪಕ್ಷದ ಬಗ್ಗೆ ಒಲವು ಇಟ್ಟುಕೊಂಡಿದ್ದಾರೆ ಆದ್ದರಿಂದ ಕೂಡಲೇ ಅವರನ್ನು ವಾಪಾಸ್ ಕರೆಸಿಕೊಳ್ಳಿ ಎಂಬ ಪತ್ರ ಚಳುವಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್. ತಂಗಡಗಿ ಅವರು ಚಾಲನೆ ನೀಡಿದರು.ನಗರದಲ್ಲಿ ರಾಜ್ಯಪಾಲರ ವಿರುದ್ಧ ನಡೆದ ಪ್ರತಿಭಟನೆ ನಂತರ ಕಾಂಗ್ರೆಸ್ ಮುಖಂಡರಾದ ಜ್ಯೋತಿ ಎಂ. ಗೊಂಡಬಾಳ ಅವರು ಆರಂಭಿಸಿರುವ ಸದರಿ ಪತ್ರ ಚಳುವಳಿಗೆ ಚಾಲನೆ…
