ಡಾ. ಬಿ. ಆರ್ ಅಂಬೇಡ್ಕರ್ ರವರ ಚರಿತ್ರೆ.
ಡಾ ಬಿ. ಆರ್ ಅಂಬೇಡ್ಕರ್ ರವರು 14ನೇ ಏಪ್ರಿಲ್ 1891 ಮಧ್ಯಪ್ರದೇಶದ ಮಾಹೋ ಎಂಬ ಮಿಲಿಟರಿ ಕ್ಯಾಂಪ್ ನಲ್ಲಿ ಹುಟ್ಟಿದರು. ಅಂಬೇಡ್ಕರ್ ರವರು ಮೂಲತಃ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಖೇಡಾ ತಾಲ್ಲೂಕಿನ ಅಂಬೆವಾಡ ಗ್ರಾಮದವರು. ಇವರು ಮಹಾರಜಾತಿಯಲ್ಲಿ ಹುಟ್ಟಿದರು. ಈ ಜಾತಿಯವರು ಹೆಚ್ಚಿನ ಜನ ಬ್ರಿಟಿಷ್ ಸರ್ಕಾರದ ಮಿಲಿಟರಿ ಸೇವೆಯಲ್ಲಿ ಉದ್ಯೋಗಕ್ಕಾಗಿ ಸೇರುತ್ತಿದ್ದರು. ಇವರ ಅಜ್ಜ ಮಾಲೋಜಿ ಸಕ್ವಾಲ್, ಇವರು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಬೋಂಬೆ ಸೇನೆಯಲ್ಲಿ ಸೇರಿದರು, ಹವಾಲ್ದಾರರಾಗಿ ನಿವೃತ್ತಿ ಹೊಂದಿದ್ದರು. ಇವರು ಆ…
