ವಕ್ಪ್ ಆಸ್ತಿಯ ಪ್ರಕರಣಗಳನ್ನು ಒಂದು ತಿಂಗಳಲ್ಲಿ ಪರಿಹರಿಸಿ: ಸಚಿವ ಜಮೀರ ಅಹ್ಮದ
ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಅಧಿಕಾರಿಗಳೊಂದಿಗೆ ವಕ್ಪ ಮತ್ತು ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಜರುಗಿಸಿ, ಮಾತನಾಡಿದರು. ಧಾರವಾಡ ಜಿಲ್ಲೆಯಲ್ಲಿ 2453 ವಕ್ಫ ಆಸ್ತಿಗಳಿದ್ದು ಇವುಗಳಲ್ಲಿ 481 ಪ್ರಕರಣಗಳು ಮಾತ್ರ ವಿವಿಧ ಹಂತಗಳಲ್ಲಿ ಬಾಕಿ ಇವೆ. ಇವುಗಳನ್ನು ಬೇಗ ಪರಿಹರಿಸಬೇಕು. ಉಳಿದ ಜಿಲ್ಲೆಗಳಿಗೆ ಹೋಲಿಸಿದಾಗ ವಕ್ಪ ಆಸ್ತಿಗಳ ಸಮೀಕ್ಷೆ, ರಕ್ಷಣೆಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಉತ್ತಮ ಕೆಲಸವಾಗಿದೆ ಧಾರವಾಡ ಜಿಲ್ಲೆಯಲ್ಲಿ 604 ವಕ್ಪ ಸಂಸ್ಥೆಗಳಿಗೆ. 2453 ವಕ್ಪ ಆಸ್ತಿಗಳಿವೆ. ವಕ್ಪ…
