ನಿರಾಣಿ ಕಾರ್ಖಾನೆ ಸಕ್ಕರೆ ಸಾಗಣೆಯಲ್ಲಿ ವಂಚಿಸಿದ್ದ ಆರೋಪಿಗಳ ಬಂಧನ; 11.50 ಲಕ್ಷ ಮೌಲ್ಯದ ವಸ್ತು ವಶ
ಬಾಗಲಕೋಟೆ ಜಿಲ್ಲೆಯ ಮುಧೋಳದ ನಿರಾಣಿ ಸಕ್ಕರೆ ಕಾರ್ಖಾನೆಯಿಂದ ಗುಜರಾತ್ನ ಅಹಮದಾಬಾದ್ಗೆ ಸಾಗಿಸಬೇಕಿದ್ದ ಸಕ್ಕರೆಯನ್ನು ಹಾದಿ ಮಧ್ಯದಲ್ಲೇ ಮಾರಾಟ ಮಾಡಿ ವಂಚಿಸಿದ್ದ ಪ್ರಕರಣವನ್ನು ಮುಧೋಳ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಸದ್ಯ ಪೊಲೀಸರು ಆರೋಪಿಗಳಿಂದ 9 ಲಕ್ಷ ರೂಪಾಯಿ ನಗದು ಹಾಗೂ ಕೃತ್ಯಕ್ಕೆ ಬಳಸಲಾದ ಕಾರನ್ನು ವಶಪಡಿಸಿಕೊಂಡಿದ್ದಾರೆ. 2025ರ ನವೆಂಬರ್ನಲ್ಲಿ ಮಹೇಶ ಪಾಟೀಲ್ ಎಂಬುವವರು ನೀಡಿದ್ದ ದೂರಿನನ್ವಯ ತನಿಖೆ ಕೈಗೊಂಡಿದ್ದ ವಿಶೇಷ ಪೊಲೀಸ್ ತಂಡವು, ಜನವರಿ 15ರಂದು ಜೀರಗಾಳ ಬೈಪಾಸ್ ಬಳಿ ಇಬ್ಬರು ಆರೋಪಿಗಳನ್ನು ಬಂಧಿಸಿದೆ. ಆರೋಪಿಗಳು 50 ಕೆ.ಜಿಯ…
