Prashanth Angadi

ಬಸಿಡೋಣಿ ಗ್ರಾಮದಲ್ಲಿ ರೈತರ ಹೊಲಕ್ಕೆ ಹೋಗಲು ಸಾರ್ವಜನಿಕ ರಸ್ತೆ ಹಾಗೂ ಆಟದ ಮೈದಾನ, ಕಲ್ಯಾಣ ಮಂಟಪ, ಬಡವರಿಗೆ ನಿವೇಶನ ಮಾಡಿಕೊಡಬೇಕೆಂದು ಮನವಿ

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಬಸಿಡೋಣಿ ಗ್ರಾಮದ ಸ.ನಂ. 664 ರಲ್ಲಿ 150ಎ ಕರ್ನಾಟಕ ಸರ್ಕಾರ ಅಂತ ಇದ್ದು ಈ ಜಾಗವನ್ನು ಹದ್ದುಬಸ್ತಿ ಮಾಡಿ ಸಾರ್ವಜನಿಕ ರಸ್ತೆ ಹಾಗೂ ಆಟದ ಮೈದಾನ, ಕಲ್ಯಾಣ ಮಂಟಪ, ಬಡವರಿಗೆ ನಿವೇಶನ ಮಾಡಿಕೊಡಬೇಕೆಂದು ಸವದತ್ತಿ ತಹಶೀಲ್ದಾರ್ ಇವರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಸಮಾಜಸೇವಕರಾದ ಬಸವರಾಜ ಕಲ್ಲಪ್ಪ ಕಟಕೋಳ ವಕೀಲರು, ಪ್ರಶಾಂತ ಶಿವಪ್ಪ ಅಂಗಡಿ, ಬಸಪ್ಪ. ಪ.ಕಟಬಿ ಪತ್ರಪ್ಪ ಕಟಬಿ ಇದ್ದರು .

Read More

ವಿಶ್ವ ವೈದ್ಯ ದಿನದ ಪ್ರಯುಕ್ತ ವೈದ್ಯರಾದ ಡಾ. ವೆಂಕಟೇಶ ಹೆಬ್ಬಳ್ಳಿ ರವರಿಗೆ ಸನ್ಮಾನ.

ರಾಮದುರ್ಗ ಪಟ್ಟಣದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಭಕ್ತ ಮಂಡಳಿ ರಾಮದುರ್ಗ ವತಿಯಿಂದ ಪ್ರತಿ ಮಂಗಳವಾರ ಸಾಯಂಕಾಲ 8 ಗಂಟೆಗೆ ನಗರದ ತೇರಬಜಾರದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಹನುಮಾನ್ ಚಾಲೀಸಾ ಪಠಣ ಮಾಡುತ್ತಿದ್ದು, ನೆನ್ನೆ ಮಂಗಳವಾರ ದಿನಾಂಕ 01/07/2025 ರಂದು ವಿಶ್ವ ವೈದ್ಯ ದಿನದ ಪ್ರಯುಕ್ತ ನಗರದ ಖ್ಯಾತ ವೈದ್ಯರಾದ ಶ್ರೀಯುತ ಡಾ. ವೆಂಕಟೇಶ ಹೆಬ್ಬಳ್ಳಿ ಇವರನ್ನು ಸತ್ಕರಿಸುವ ಮೂಲಕ ಸಮಾಜಕ್ಕೆ ವೈದ್ಯರು ಮಾಡುತ್ತಿರುವ ಸೇವೆಯನ್ನು ಸ್ಮರಿಸಿಕೊಳ್ಳಲಾಯಿತು. ಪುರಾಣಗಳಲ್ಲಿಯೇ ಹೇಳುವಂತೆ ವೈದ್ಯೋ ನಾರಾಯಣೋ ಹರಿಃ ಎಂಬಂತೆ ವೈದ್ಯನನ್ನು…

Read More

ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಾ ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ, ತಾಲೂಕಾ ಆಡಳಿತ, ಕಾರ್ಮಿಕ ಇಲಾಖೆ, ಇವರುಗಳ ಸಹಯೋಗದಲ್ಲಿ ಜಿ.ಜಿ.ಚೋಪ್ರಾ ಸರ್ಕಾರಿ ಪಿ.ಯು.ಕಾಲೇಜಿನಲ್ಲಿ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಹವ್ಮಿುಕೊಳ್ಳಲಾಗಿತ್ತು. ಗೌರವಾನ್ವಿತ ಪ್ರಧಾನ ಹಿರಿಯ ಶ್ರೇಣಿ ಸಿವಿಲ್‍ ನ್ಯಾಯಾಧೀಶರು ಹಾಗೂ ತಾಲೂಕಾ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾದ ಶ್ರೀ. ಸಿದ್ದರಾಮ, ರವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮದ ಉದ್ಫಾಟನೆ ನೆರವೇರಿಸಿದರು. ನಂತರ ಮಾತನಾಡಿದ ಅವರು ಪ್ರಾಥಮಿಕ ಶಿಕ್ಷಣ,…

Read More

ರಾಮದುರ್ಗ ಪೊಲೀಸ್ ಠಾಣೆ ವತಿಯಿಂದ ಮೊಹರಂ ಹಬ್ಬದ ಪ್ರಯುಕ್ತ ಶಾಂತಿ ಸಭೆ

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಮಂಗಳವಾರ ಪೊಲೀಸ್ ಠಾಣೆ ವತಿಯಿಂದ ಮೊಹರಂ ಹಬ್ಬದ ಪ್ರಯುಕ್ತ ಶಾಂತಿ ಸಭೆ ಕಾರ್ಯಕ್ರಮ ಜರಗಿತು. ಈ ವೇಳೆ ಎಎಸ್ಐ ರವಿ ಎಂ ಯರಗಟ್ಟಿ ಮಾತನಾಡಿ ಹಿಂದೂ–ಮುಸ್ಲಿಮ್‌ ಸೌಹಾರ್ದಕ್ಕೆ ಹೆಸರಾಗಿರುವ ಮೊಹರಂ ಹಬ್ಬವನ್ನು ಎಲ್ಲರೂ ಶಾಂತಿಯುತವಾಗಿ ಆಚರಿಸಬೇಕು.ಪ್ರತಿವರ್ಷದಂತೆ ಈ ವರ್ಷವೂ ಸಹ ಮೊಹರಂ ಹಬ್ಬವನ್ನು ಕಾನೂನು ಸುವ್ಯವಸ್ಥೆ ಕಾಪಾಡುವ ಮೂಲಕ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಶಾಂತರೀತಿಯಲ್ಲಿ ಮೊಹರಂ ಆಚರಣೆ ಮಾಡುವಂತೆ ಜನತೆಗೆ ತಿಳಿಸಿದರು. ಈ ಸಂದರ್ಭದಲ್ಲಿ ಹಿಂದೂ–ಮುಸ್ಲಿಮ್‌…

Read More

ಮಹಾಂತೇಶ ನಗರದಲ್ಲಿ ಸಸಿ ನೆಡುವ ಮುಖಾಂತರ ವನಮಹೋತ್ಸವ ಕಾರ್ಯಕ್ರಮ

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಮಹಾಂತೇಶ ನಗರದಲ್ಲಿ ಜನಸಾಮಾನ್ಯರ ಹಿತರಕ್ಷಣಾ ಸಮಿತಿ, ವಲಯ ಅರಣ್ಯ ಇಲಾಖೆ ಹಾಗೂ ಪುರಸಭೆಯ ಸಂಯುಕ್ತ ಆಶ್ರಯದಲ್ಲಿ ರಾಮದುರ್ಗ ಪಟ್ಟಣದ ಮಹಾಂತೇಶನಗರ ಉದ್ಯಾನವನದಲ್ಲಿ ಸಸಿ ನೆಡುವ ಮುಖಾಂತರ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಈರಣ್ಣ ಗುಡದಾರಿ ಸಸಿಗೆ ನೀರುಣಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪ್ರತಿಯೊಬ್ಬರು ತಮ್ಮ ತಾಯಿಯ ಹೆಸರಿನಲ್ಲಿ ಮನೆಗೊಂದು ಸಸಿ ನೆಟ್ಟು ಪಾಲನೆ ಪೋಷಣೆ ಮಾಡಿದಲ್ಲಿ ಪರಿಸರ ಸಂರಕ್ಷಣೆಯ ಧೈಯ ಪಾಲಿಸಿದಂತಾಗುತ್ತದೆ ಎಂದು ಕರೆ…

Read More

ರಾಮದುರ್ಗ ಪುರಸಭೆ ವತಿಯಿಂದ ಬೀಡಾಡಿ ದನಗಳನ್ನು ಗೋ ಶಾಲೆಗೆ ಸೇರ್ಪಡೆ

ಬೆಳಗಾವಿ ಜಿಲ್ಲೆ ರಾಮದುರ್ಗಪಟ್ಟಣದ ತೇರ ಬಜಾರದಲ್ಲಿ ಹಲವು ವರ್ಷಗಳಿಂದ ಬಿಡಾಡಿ ದನಗಳು ಅಲ್ಲಲ್ಲಿ ಸಾರ್ವಜನಿಕರ, ವಯೋವೃದ್ಧರ, ಮಹಿಳೆಯರ ಮೇಲೆ ದಾಳಿ ಮಾಡಿದ ಪರಿಣಾಮ ರಾಮದುರ್ಗ ಪುರಸಭೆ ವತಿಯಿಂದ ಬೀಡಾಡಿ ದನಗಳನ್ನು ಗೋ ಶಾಲೆಗೆ ಸೇರ್ಪಡೆ ಮಾಡಲಾಯಿತು. ಕೆಲವು ವಾರಸುದಾರರು ಇಲ್ಲದ ದನಗಳು ಒಂದೆಡೆಯಾದರೆ, ಹಲವು ದನಗಳು ವಾರಸುದಾರರು ಇದ್ದರೂ ತಮ್ಮ ದನಗಳನ್ನು ಮನೆಯಲ್ಲಿ ಕಟ್ಟದೇ ಎಲ್ಲೆಂದರಲ್ಲಿ ಬಿಟ್ಟು ತಮಗೆ ಬೇಕಾದಾಗ ಅವುಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಬಿಡಾಡಿ ದನಗಳ ಹಾವಳಿಯಿಂದ ರಾತ್ರಿ ವೇಳೆಯಲ್ಲಿ ವಾಹನ ಸಂಚಾರಕ್ಕೂ ಸಮಸ್ಯೆ ಉಂಟಾಗುತ್ತಿತ್ತು….

Read More

ರಾಮದುರ್ಗ ಪೊಲೀಸ್ ಠಾಣೆ ವತಿಯಿಂದ ಮಾದಕ ದ್ರವ್ಯಗಳ ಜಾಗೃತಿ ಅಭಿಯಾನ

ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ರಾಮದುರ್ಗ ಪೊಲೀಸ್ ಠಾಣೆ ವತಿಯಿಂದ ಮಾದಕ ದ್ರವ್ಯಗಳ ಜಾಗೃತಿ ಅಭಿಯಾನವನ್ನು ಆಯೋಜಿಸಿತು. ಈ ಕಾರ್ಯಕ್ರಮವು ಸಾರ್ವಜನಿಕರಿಗೆ ಮಾದಕ ವ್ಯಸನದ ಅಪಾಯಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ಮಾದಕ ದ್ರವ್ಯ ಮುಕ್ತ ಸಮಾಜವನ್ನು ಉತ್ತೇಜಿಸುವ ಗುರಿಯನ್ನು ಹೊಂದಿತ್ತು. ಮಾದಕ ವಸ್ತುಗಳ ಬಗ್ಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಜಾಗೃತಿ ಮೂಡಿಸಲಾಯಿತು. ಮಾದಕ ವಸ್ತು ಸೇವನೆ, ಮಾರಾಟ ಮತ್ತು ಸಾಗಾಟ ಕಾನೂನು ಪ್ರಕಾರ…

Read More

ರಾಮದುರ್ಗದಲ್ಲಿ ಶೀಘ್ರ ರೈಲ್ವೆ ಮಾರ್ಗ ನಿರ್ಮಾಣ ಮಾಡಬೇಕೆಂದು ಪ್ರತಿಭಟನೆ

ಲೋಕಾಪೂರದಿಂದ ರಾಮದುರ್ಗ ಮುಖಾಂತರ ಧಾರವಾಡಕ್ಕೆ ಶೀಘ್ರ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳದೇ ಹೋದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಬೇಕಾಗುತ್ತದೆ ಎಂದು ಹೋರಾಟ ಸಮಿತಿಯ ಪದಾಧಿಕಾರಿಗಳು ತಹಶೀಲ್ದಾರ ಮುಖಾಂತರ ಉಭಯ ಸರಕಾರಗಳ ಮುಖ್ಯಸ್ಥರಿಗೆ ಮನವಿ ಸಲ್ಲಿಸಿದರು. ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಸೋಮವಾರ ತಹಶೀಲ್ದಾ‌ರ್ ಮೂಲಕ ಕೇಂದ್ರದ ರೈಲ್ವೆ ಸಚಿವ, ರಾಜ್ಯದ ರಾಜ್ಯಪಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರಿಗೆ ಮನವಿ ಸಲ್ಲಿಸಿದ ಹೋರಾಟಗಾರರು, ಕಳೆದ 20 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದರೂ ಈ…

Read More

ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಒಲಂಪಿಕ್ ಓಟದ ರ‌್ಯಾಲಿಗೆ ವಿಧಾನ ಪರಿಷತ್ ಸದಸ್ಯ ಡಾ. ಕೆ. ಗೋವಿಂದರಾಜು ಚಾಲನೆ ನೀಡಿದರು.

ಬೆಳಗಾವಿ ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಒಲಿಂಪಿಕ್ ಸಂಸ್ಥೆ ಬೆಂಗಳೂರು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ರವಿವಾರ ನಗರದ ಕೋಟೆ ಆವರಣದಲ್ಲಿ “ಅಂತಾರಾಷ್ಟ್ರೀಯ ಒಲಿಂಪಿಕ್ ಡೇ ರನ್-2025” ಓಟದ ರ‌್ಯಾಲಿಗೆ ವಿಧಾನ ಪರಿಷತ್ ಸದಸ್ಯರು, ಕರ್ನಾಟಕ ಒಲಿಂಪಿಕ್ ಸಂಸ್ಥೆ ಹಾಗೂ ಫೀಬಾ ಏಷ್ಯಾ ಅಧ್ಯಕ್ಷರಾದ ಡಾ. ಕೆ. ಗೋವಿಂದರಾಜ್ ರಾಜು ಅವರು ಚಾಲನೆ ನೀಡಿ ಮಾತನಾಡಿದ ಅವರು ಅಂತಾರಾಷ್ಟ್ರೀಯ ಒಲಂಪಿಕ್ ಡೇ ಅಂಗವಾಗಿ ವಿಶ್ವದಾದ್ಯಂತ ಓಟವನ್ನು ಆಯೋಜಿಸಲಾಗಿದೆ. ಅದೇ ರೀತಿಯಲ್ಲಿ ಜಿಲ್ಲೆಯಲ್ಲಿ ಆಯೋಜಿಸಲಾಗಿರುವ ಓಟದಲ್ಲಿ…

Read More

ಕರ್ತವ್ಯ ಲೋಪ ಆರೋಪ : ಗುಡೇನಕಟ್ಟಿ ಪಿಡಿಓ ಅಮಾನತಿಗೆ ಸಚಿವ ಸಂತೋಷ ಲಾಡ್ ಸೂಚನೆ, ಜಿಲ್ಲಾ ಪಂಚಾಯತ ಸಿಇಓ ರಿಂದ ಅಮಾನತು ಆದೇಶ

ಹುಬ್ಬಳ್ಳಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸೂಚನೆ ಹಿನ್ನೆಲೆಯಲ್ಲಿ ಗುಡೇನಕಟ್ಟಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಡಿ.ಎಂ.ಕಾಲವಾಡ ಅವರನ್ನು ಅಮಾನತುಗೊಳಿಸಲಾಗಿದೆ. ಅವಳಿ ಮಕ್ಕಳ ಸಾವು ಪ್ರಕರಣದ ಹಿನ್ನೆಲೆಯಲ್ಲಿ ಸಚಿವ ಸಂತೋಷ ಲಾಡ್ ಅವರು ಇಂದು ಕುಂದಗೋಳ ತಾಲೂಕಿನ ಯರಿನಾರಾಯನಪುರ ಗ್ರಾಮಕ್ಕೆ ಭೇಟಿ ನೀಡಿದ್ದರು. ಸಾರ್ವಜನಿಕರ ಸುರಕ್ಷತೆಗೆ ಸರಿಯಾದ ಕ್ರಮಕೈಗೊಳ್ಳದ ಮತ್ತು ಗ್ರಾಮದ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸದೆ ಕರ್ತವ್ಯ ಲೋಪ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯ್ತಿ ಪಿ.ಡಿ.ಒ ರನ್ನತಕ್ಷಣವೇ ಅಮಾನತುಗೊಳಿಸಲು ಆದೇಶಿಸಿದ್ದರು. ದಿಂದ ಜಾರಿಗೆ…

Read More