15 ವರ್ಷ ಕಳೆದರೂ ಇದುವರೆಗೂ ಪ್ರಾರಂಭವಾಗದ ಶಿರಸಂಗಿ ನವಲಗುಂದ್ ಟ್ರಸ್ಟ್ ನ ಕಲ್ಯಾಣ ಮಂಟಪ.
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದ ಹೊಸೂರು ಓಣಿಯಲ್ಲಿ ಶಿರಸಂಗಿ ನವಲಗುಂದ ಲಿಂಗರಾಜ ಟ್ರಸ್ಟ ನ ಕಲ್ಯಾಣ ಮಂಟಪ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಸುಮಾರು 15 ವರ್ಷ ಹಿಂದೆನೇ ಈ ಕಲ್ಯಾಣ ಮಂಟಪವನ್ನು ಬೆಳಗಾವಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಿರ್ಮಾಣವಾಗಿದ್ದು ಇದುವರೆಗೂ ಸಾರ್ವಜನಿಕರಿಗೆ ಅನುಕೂಲವಾಗದೆ ಹಾಳು ಬಿದ್ದ ಕಲ್ಯಾಣ ಮಂಟಪವಾಗಿದ್ದು ಕಲ್ಯಾಣ ಮಂಟಪದ ಕಿಟಕಿ ಹಾಗೂ ಬಾಗಿಲುಗಳು ಒಡೆದು ಹೋಗಿವೆ.ಮೇಲ್ಚಾವಣಿ ಕೂಡ ದುರಸ್ತಿಯಲ್ಲಿದೆ ಹಾಗೂ ಈ ಕಲ್ಯಾಣ ಮಂಟಪಕ್ಕೆ ಸರಿಯಾಗಿ ರಸ್ತೆ ಕೂಡ ಇಲ್ಲವೆಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ….
