ಬೆಳಗಾವಿ: ಡಾಕ್ಟರ್ ಮನೆಯಲ್ಲಿ 1.2 ಕೋಟಿ ರೂ ಮೌಲ್ಯದ ಚಿನ್ನ ಕಳವು; ಇಬ್ಬರ ಬಂಧನ!
ಬೆಳಗಾವಿ: ನಗರದ ವೃದ್ಧ ವೈದ್ಯ ದಂಪತಿಯ ಮನೆಯಿಂದ 1.2 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಆರೋಪಿಗಳನ್ನು ರಾಹುಲ್ ಸತೀಶ್ ಕಾಂಬ್ಳೆ ಮತ್ತು ಬಾಬಾಸಾಬ್ ಈರಪ್ಪ ಕಟಗೇರಿ ಎಂದು ಗುರುತಿಸಲಾಗಿದೆ. ಪೊಲೀಸರು 52.5 ಲಕ್ಷ ರೂ. ಮೌಲ್ಯದ 350 ಗ್ರಾಂ ಚಿನ್ನಾಭರಣಗಳು ಮತ್ತು ಬ್ಯಾಂಕ್ ಖಾತೆಯಲ್ಲಿ ಠೇವಣಿ ಇಟ್ಟಿದ್ದ 22.8 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದು, ಒಟ್ಟು 75.3 ಲಕ್ಷ ರೂ. ವಸೂಲಿ ಮಾಡಲಾಗಿದೆ ಎಂದು ಅಧಿಕಾರಿಗಳು ಶನಿವಾರ…
