19 ಗುರುಪೀಠಗಳು, ಒಂದೇ ಆಧ್ಯಾತ್ಮಿಕ ಯಾತ್ರೆ: ಹಿಂದುಳಿದ ಹಾಗೂ ಎಸ್ಸಿ–ಎಸ್ಟಿ ಸಮುದಾಯಗಳ ಸ್ವಾಮೀಜಿಗಳಿಗೆ ತಿರುಮಲ ದರ್ಶನ
ತಿರುಮಲ, ಸೆಪ್ಟೆಂಬರ್ 29: ಕರ್ನಾಟಕದ ವಿವಿಧ ಭಾಗಗಳ ಹಿಂದುಳಿದ ಹಾಗೂ ಎಸ್ಸಿ–ಎಸ್ಟಿ ಸಮುದಾಯಗಳನ್ನು ಪ್ರತಿನಿಧಿಸುವ 19 ಬ್ರಹ್ಮಚಾರಿ ಪೀಠಾಧೀಶರು ಮತ್ತು ಸ್ವಾಮೀಜಿಗಳು ತಿರುಮಲದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು. ವಿವಿಧ ಗುರುಪೀಠಗಳ ಆಧ್ಯಾತ್ಮಿಕ ನಾಯಕರನ್ನು ಒಂದೇ ಯಾತ್ರೆಯಲ್ಲಿ ಒಗ್ಗೂಡಿಸಿದ ಈ ಭೇಟಿ ಸಾಮಾಜಿಕ ಮತ್ತು ಆಧ್ಯಾತ್ಮಿಕವಾಗಿ ವಿಶೇಷ ಮಹತ್ವ ಪಡೆದುಕೊಂಡಿತು. ಈ ಯಾತ್ರೆಗೆ ಟಿಟಿಡಿ ಮಂಡಳಿ ಸದಸ್ಯ ಎಸ್. ನರೇಶ್ ಕುಮಾರ್ ವೈಯಕ್ತಿಕ ಆಸಕ್ತಿ ವಹಿಸಿ ಮುಂದಾಳತ್ವ ತೆಗೆದುಕೊಂಡಿದ್ದು, ಪೀಠಾಧೀಶರಿಗೆ ಗೌರವಪೂರ್ಣ ದರ್ಶನ ವ್ಯವಸ್ಥೆ ಕಲ್ಪಿಸುವಂತೆ…
