ಜ.12,13 ರಂದು ಸಂಗೋಳ್ಳಿ ರಾಯಣ್ಣ ಉತ್ಸವ: ಶಾಸಕ ಮಹಾಂತೇಶ ಕೌಜಲಗಿ
ಬೆಳಗಾವಿ ಪ್ರತಿವರ್ಷದಂತೆ ಈ ಬಾರಿಯು ಜನವರಿ 12 ಹಾಗೂ 13 ರಂದು ಅದ್ಧೂರಿಯಾಗಿ ಸಂಗೊಳ್ಳಿ ರಾಯಣ್ಣನ ಉತ್ಸವವನ್ನು ಆಚರಿಸಲಾಗುವುದು ಎಂದು ರಾಜ್ಯ ಹಣಕಾಸು ಸಂಸ್ಥೆ ಅಧ್ಯಕ್ಷರು ಹಾಗೂ ಶಾಸಕರಾದ ಮಹಾಂತೇಶ ಕೌಜಲಗಿ ಅವರು ಹೇಳಿದರು. ಸಂಗೋಳ್ಳಿ ಗ್ರಾಮದ ಸ್ಮಾರಕ ಭವನದಲ್ಲಿ ಶುಕ್ರವಾರ ಜರುಗಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ-2026ರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಯಣ್ಣನ ಇತಿಹಾಸವನ್ನು ವಿಶ್ವಕ್ಕೆ ತಿಳಿಸುವ ಕಾರ್ಯವನ್ನು ಸರಕಾರದಿಂದ ಮಾಡಲಾಗುತ್ತಿದೆ. ಜನವರಿ 12 ಹಾಗೂ 13 ರಂದು ಎರಡು ದಿನಗಳ…
