BREAKING NEWS

ಬುಡಾ ನೂತನ ಅಧ್ಯಕ್ಷ, ಶಾಸಕ ಆಸೀಫ್ ಸೇಠರನ್ನು ಅಭಿನಂದಿಸಿದ ಪಾಲಿಕೆ ಆಯುಕ್ತ ಕಾರ್ತಿಕ್ ಎಂ.

ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಗುರುವಾರ ಅಧಿಕಾರ ಸ್ವೀಕರಿಸಿದ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕಆಸಿಫ್ (ರಾಜು) ಸೇಠ್ ಅವರನ್ನು ಮಹಾನಗರ ಪಾಲಿಕೆ ಆಯುಕ್ತರು, ನಗರ ಸೆವಕರು, ಅಧಿಕಾರಿಗಳು ಅಭಿನಂದಿಸಿ ಶುಭಾಶಯ ಕೋರಿದರು.ನಗರದ ಬುಡಾ ಕಚೇರಿಯಲ್ಲಿ ನೂತನ ಅಧ್ಯಕ್ಷರನ್ನು ಭೇಟಿಯಾದ ಪಾಲಿಕೆ ಆಯುಕ್ತ ಕಾರ್ತಿಕ್ ಎಂ., ಕಂದಾಯ ವಿಭಾಗದ ಉಪ ಆಯುಕ್ತ ಡಾ. ಸಿದ್ದು ಹುಲ್ಲೋಳಿ, ಆಡಳಿತ ವಿಭಾಗದ ಉಪ ಆಯುಕ್ತ, ಉದಯಕುಮಾರ ಟಿ.ಬಿ.,ಅಭಿವೃದ್ಧಿ ವಿಭಾಗದ ಉಪ ಆಯುಕ್ತೆಲಕ್ಷ್ಮೀ ನಿಪ್ಪಾಣಿಕರ್,ವಲಯ ಆಯುಕ್ತ ಅನೀಲ ಬೋರ್ಗಾವಿ, ನಗರ ಸೇವಕರಾದ…

Read More

ಕಸಾಪ ರಾಜ್ಯಾಧ್ಯಕ್ಷರಾದರೆ ೭೫ರ ಸಮಾರಂಭ ಅರ್ಥಪೂರ್ಣ

ಬೆಂಗಳೂರು: ಜಾಣಗೆರೆಯವರ ೭೫ರ ಸಂಭ್ರಮಕ್ಕೆ ಅರ್ಥ ತುಂಬಬೇಕಾದರೆ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಅಗತ್ಯ ಕನ್ನಡದ ಅಸ್ಮಿತೆ, ಕನ್ನಡಿಗರ ಸ್ವಾಭಿಮಾನ ಮತ್ತು ಕನ್ನಡಪರ ಹೋರಾಟದ ಧ್ವನಿಯಾಗಿ ಹಲವು ದಶಕಗಳಿಂದ ತಮ್ಮದೇ ಆದ ಛಾಪು ಮೂಡಿಸಿರುವ ಜಾಣಗೆರೆ ವೆಂಕಟರಾಮಯ್ಯ ಅವರ ೭೫ನೇ ವರ್ಷದ ಅಭಿನಂದನಾ ಸಮಾರಂಭವು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಪಾರ ಅಭಿಮಾನಿಗಳು, ಕನ್ನಡಪರ ಹೋರಾಟಗಾರರು, ಸಾಹಿತಿಗಳು ಹಾಗೂ ವಿವಿದ ಕ್ಷೇತ್ರಗಳ ಗಣ್ಯರ ಸಮ್ಮುಖದಲ್ಲಿ ಆಗಸ್ಟ್ ೨೯ ರಂದು ನಡೆದಿದೆ. ರವೀಂದ್ರ ಕಲಾಕ್ಷೇತ್ರದಲ್ಲಿ ಜಾಣಗೆರೆಯವರ ಅಭಿನಂದನಾ ಕಾರ್ಯಕ್ರಮ ನಡೆದಿರುವುದು…

Read More

ವಾರದ ಪ್ರಾಥ೯ನೆ ವಚನ ವಿಶ್ಲೇಷನೆ ರಾಷ್ಟ್ರಿಯ ಭಕ್ತಿ ಗೀತೆಗಳು ಕಾಯ೯ಕ್ರಮ.

ಬೆಳಗಾವಿ ವಚನ ಪಿತಾಮಹ ಡಾ ಫ. ಗು ಹಳಕಟ್ಟಿ ಲಿಂಗಾಯತ ಭವನ ಮಹಾಂತೇಶ ನಗರ ಬೆಳಗಾವಿಯಲ್ಲಿ. ದಿನಾಂಕ 23.08.2026 ರಂದು ವಾರದ ಪ್ರಾರ್ಥನೆ ಮತ್ತು ವಚನ ವಿಶ್ಲೇಷಣೆ. ರಾಷ್ಟೀಯಭಕ್ತಿಗೀತೆಗಳು ಕಾರ್ಯಕ್ರಮ ಜರಗಿತು. ಪ್ರಾರಂಭದಲ್ಲಿ. ಸಾಮೂಹಿಕ ಪ್ರಾರ್ಥನೆಯನ್ನು. ಶರಣೆ ಮಹಾದೇವಿ ಅರಳಿಯವರು. ನಡೆಸಿಕೊಟ್ಟರು. ಆನಂದ ಕರಕಿ, ಬಸವರಾಜ ಬಿಜ್ಜರಗಿ. ಶ್ರೀದೇವಿ ನರಗುಂದ, ಅಕ್ಕಮಹಾದೇವಿ ತೆಗ್ಗಿ,ಲಷ್ಮಿ ಜೇವಣಿ ದoಪತಿಗಳು,ಸುನಿಲ ಸಾಣಿಕೊಪ್ಪ,ಶರಣೆ ದೀಪಾ ಪಾಟೀಲ,ಸುರೇಶ ನರಗುಂದ,ಜ್ಯೋತಿ ಬದಾಮಿ,ಶಿವಕುಮಾರ ಪಾಟೀಲ,ಬಸಮ್ಮಾ ಮಠದ,ಮೀನಾಕ್ಷಿ ನಾಡಗೌಡರ,ಶೀವಲೀಲಾ ಗೌಡರ,ಶರಣ ಶರಣೆಯರು ವಚನ ವಿಶ್ಲೇಷಣೆ ರಾಷ್ಟ್ರೀಯ ಭಕ್ತಿಗೀತೆಗಳು ಹಾಡಿ…

Read More

ಬೀದಿ ಬದಿ ವ್ಯಾಪಾರಿಗಳು ಪಾಲಿಕೆ ಮಧ್ಯ ಸೌಹಾರ್ದತೆ ಅಗತ್ಯ : ಮೇಯರ್ ಪ್ರೀತಿ ಕಾಮಕರ್

ಬೆಳಗಾವಿ : ನಿಯಮಗಳನ್ನೂ ಪಾಲಿಸಿ ಸಾರ್ವಜನಿಕರ ಹಿತ ಕಾಪಾಡ ಬೇಕಾಗಿರುವುದರಿಂದಬೀದಿ ಬದಿ ವ್ಯಾಪಾರಿಗಳು ಪಾಲಿಕೆಗೆ ಸಹಕಾರ ನೀಡಿಸೌಹಾರ್ದತೆ ಕಾಪಾಡಿಕೊಳ್ಳಬೇಕೆಂದು ಮೇಯರ್ ಪ್ರೀತಿ ಕಾಮಕರ್ ಹೇಳಿದರು. ಮಂಗಳವಾರ ಮಹಾನಗರ ಪಾಲಿಕೆಯಲ್ಲಿ ನಡೆದ ತಾತ್ಕಾಲಿಕ ಪಟ್ಟಣ ಮಾರಾಟ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಸ್ತೆ ಪುಟ್ಪಾತ್ಗಳನ್ನು ಸಂಚಾರಕ್ಕಾಗಿ ಮುಕ್ತಗೊಳಿಸುವ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶವಿದೆ. ಈ ಹಿನ್ನೆಲೆಯಲ್ಲಿ ನಿಯಮವನ್ನೂ ಪಾಲಿಸಬೇಕು, ಬೀದಿಬದಿ ವ್ಯಾಪಾರಿಗಳ ಹಿತವನ್ನೂ ಕಾಪಾಡಬೇಕಾಗಿರುವುದರಿಂದ ನಗರ ಸೇವಕರು, ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರೊಂದಿಗೆ ಸಹಕಾರದಿಂದ…

Read More

ಕಟಕೋಳ ಸಮುದಾಯ ಆರೋಗ್ಯ ಸಹಕಾರಿ ದವಾಖಾನೆ ಸ್ಥಾಪಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಶಾಸಕರು, ಅಶೋಕ ಮ ಪಟ್ಟಣ ಅವರಿಗೆ ಮನವಿ ಸಲ್ಲಿಸಿದರು.

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮದ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬಡವರು, ರೈತರು, ಕೂಲಿ ಕಾರ್ಮಿಕರು ಹಾಗೂ ಸಾಮಾನ್ಯ ಜನರು ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ದೂರದ ಆಸ್ಪತ್ರೆಗಳಿಗೆ ತೆರಳಬೇಕಾದ ಪರಿಸ್ಥಿತಿ ಇದೆ. ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಯಾಗುತ್ತಿದೆ.ಆದ್ದರಿಂದ ನಮ್ಮ ಪ್ರದೇಶದ ಜನರ ಆರೋಗ್ಯದ ಹಿತದೃಷ್ಟಿಯಿಂದ ಸಮುದಾಯ ಆರೋಗ್ಯ ಸಹಕಾರಿ ದವಾಖಾನೆಯನ್ನು ಸ್ಥಾಪಿಸಿ ಅಭಿವೃದ್ಧಿಪಡಿಸಿ, ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ವೈದ್ಯಕೀಯ ಸೇವೆ, ಔಷಧಿ, ಪ್ರಯೋಗಾಲಯ ಪರೀಕ್ಷೆ ಹಾಗೂ ಅಗತ್ಯ ಆರೋಗ್ಯ ಸೌಲಭ್ಯಗಳನ್ನು ಒದಗಿಸುವಂತೆದವಾಖಾನೆಯಲ್ಲಿ ಅಗತ್ಯವಿರುವ…

Read More

ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ

ಸವದತ್ತಿ ತಾಲೂಕಾ ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ ಯರಗಟ್ಟಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಸತ್ತಿಗೇರಿಯಲ್ಲಿ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಹವ್ಮಿುಕೊಳ್ಳಲಾಗಿತ್ತು. ಪ್ರಧಾನ ಹಿರಿಯ ಸಿವಿಲ್‍ ನ್ಯಾಯಾಧೀಶರು ಮತ್ತು ತಾಲೂಕಾ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾದ ಸಿದ್ದರಾಮ ರವರು ಸಸಿಗೆ ನೀರೆಯುವುದರ ಮೂಲಕ ಉದ್ಫಾಟನೆ ನೆರವೇರಿಸಿದರು. ನಂತರ ಮಾತನಾಡಿದ ಅವರು ಕಾನೂನು ಎಲ್ಲರಿಗೂ ಸಮಾನವಾಗಿದ್ದು ಕಾನೂನಿನ ಅಡಿಯಲ್ಲಿ ವ್ಯವಸ್ಥಿತವಾದ ಜೀವನ ನಡೆಸಿದರೆ ಮಾತ್ರ…

Read More

ರಾಮದುರ್ಗ ತಾಲೂಕಾ ಛಾಯಾಗ್ರಾಹಕರ ಮತ್ತು ವಿಡಿಯೋಗ್ರಾಫರ್ ಅಸೋಶಿಯೇಷನ್ 20ನೇ ವಾರ್ಷಿಕೋತ್ಸವ ಹಾಗೂ 187ನೇ ವಿಶ್ವ ಛಾಯಾಗ್ರಹನ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಅಶೋಕ ಮ. ಪಟ್ಟಣ ಉದ್ಘಾಟಿಸಿದರು.

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ತುರನೂರ ಗ್ರಾಮದ ವಿಶ್ವೇಶ್ವರಯ್ಯ ಕಲ್ಯಾಣ ಮಂಟಪದಲ್ಲಿ ರವಿವಾರರಂದು ರಾಮದುರ್ಗ ತಾಲೂಕಾ ಛಾಯಾಗ್ರಾಹಕರ ಮತ್ತು ವಿಡಿಯೋಗ್ರಾಫರ್ ಅಸೋಶಿಯೇಷನ್ 20ನೇ ವಾರ್ಷಿಕೋತ್ಸವ ಹಾಗೂ 187ನೇ ವಿಶ್ವ ಛಾಯಾಗ್ರಹನ ದಿನಾಚರಣೆ ಕಾರ್ಯಕ್ರಮವನ್ನು ಕರ್ನಾಟಕ ಸರಕಾರ ಮುಖ್ಯ ಸಚೇತಕರು, ಶಾಸಕರು ವಿಧಾನಸಭಾ ಕ್ಷೇತ್ರ ರಾಮದುರ್ಗ ಅಶೋಕ ಮ. ಪಟ್ಟಣ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು ಮೊಬೈಲ್ ಕ್ಯಾಮೆರಾ ಮತ್ತು ಎಐ (AI) ತಂತ್ರಜ್ಞಾನದಿಂದ ಫೋಟೋಗ್ರಾಫಿ ಅನ್ನೋದು ಹೋಗಿಬಿಟ್ಟಿದೆ. ಸಣ್ಣಪುಟ್ಟ ಕಾರ್ಯಕ್ರಮಗಳು, ಪಾಸ್‌ಪೋರ್ಟ್ ಸೈಜ್ ಫೋಟೋಗಳು…

Read More

ರಾಮದುರ್ಗದಲ್ಲಿ ಶಾಂತಿಯಿಂದ ಈದ್ ಮಿಲಾದ್ ಆಚರಿಸಿ : ಸಿಪಿಐ ವಿನಾಯಕ್ ಬಡಿಗೇರ

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಪೊಲೀಸ್ ಠಾಣೆ ಅವರಣದಲ್ಲಿ ಶನಿವಾರ ಈದ್ ಮಿಲಾದ್ ಹಬ್ಬದ ಪ್ರಯುಕ್ತ ವಿವಿಧ ಸಮಾಜದ ಮುಖಂಡರ ಸಮ್ಮುಖದಲ್ಲಿ ಜರುಗಿದ ಶಾಂತಿ ಪಾಲನಾ ಸಭೆಯ ಅಧ್ಯಕ್ಷತೆಯನ್ನು ಸಿಪಿಐ ವಿನಾಯಕ್ ಬಡಿಗೇರ್ ವಹಿಸಿ ಅವರು ಮಾತನಾಡಿದರು. ಪ್ರವಾದಿ ಮಹಮ್ಮದ ಅವರ ಸಂದೇಶ ಸಾರಲು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜರುಗುವ ಧಾರ್ಮಿಕ ಮೆರವಣಿಗೆಯನ್ನು ಅರ್ಥಪೂರ್ಣವಾಗಿ ನೆರವೇರಿಸಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವನ್ನು ಕಲ್ಪಿಸದೇ ಈದ್ ಮಿಲಾದ್ ಹಬ್ಬವನ್ನು ಪ್ರತಿಯೊಬ್ಬರೂ ಶಾಂತ ರೀತಿಯಿಂದ ಸೌಹಾರ್ದಯುತವಾಗಿ ಆಚರಣೆ ಮಾಡಬೇಕು.ಹಬ್ಬಗಳನ್ನು ಶಾಂತಿಯಿಂದ…

Read More

₹8.04 ಕೋಟಿ ವೆಚ್ಚದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗೆ ಹೊಸ ರೂಪ-ರೋಬೋಟಿಕ್ ಮತ್ತು ಭಾಷಾ ಪ್ರಯೋಗಾಲಯ ಉದ್ಘಾಟನೆ

ಬೆಳಗಾವಿ ನಗರದ ಕಾಕತಿವೇಸ್ ನಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆ(ಸರದಾರ ಪ್ರೌಢಶಾಲೆ)ಯ ಮೂಲಸೌಕರ್ಯ ಬಲಪಡಿಸುವುದರ ಜತೆಗೆ, ವಿದ್ಯಾರ್ಥಿಗಳಿಗೆ ಆಧುನಿಕ ಹಾಗೂ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ರೋಬೋಟಿಕ್, ಭಾಷಾ ಹಾಗೂ ವರ್ಚುವಲ್ ಪ್ರಯೋಗಾಲಯಗಳನ್ನು ಶಾಸಕ ಆಸಿಫ್(ರಾಜು) ಸೇಠ್ ಅವರು ಶನಿವಾರ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ 2025-26ನೇ ಸಾಲಿನ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿರುವ ಕಾಮಗಾರಿಗಳ ಪೈಕಿ ₹5 ಕೋಟಿ ವೆಚ್ಚದಲ್ಲಿ ನೂತನ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಭೂಮಿಪೂಜೆ ಕೂಡ ನೆರವೇರಿಸಲಾಯಿತು. ನಂತರ ಮಾತನಾಡಿದ ಶಾಸಕ ಸೇಠ್ ಅವರು, ಶಾಸಕ…

Read More

ಪುನರ್ವಸತಿಗಾಗಿ ದೇವದಾಸಿ ತಾಯಂದಿರ ಬೃಹತ್ ಪ್ರತಿಭಟನೆ

ಬೆಂಗಳೂರು ಸರ್ಕಾರದ ಭರವಸೆಗಳು ಹಾಗೂ ಬಜೆಟ್ ಘೋಷಣೆಗಳು ಅನುಷ್ಠಾನಗೊಳ್ಳದೆ ವರ್ಷಗಳು ಕಳೆದರೂ ತಮ್ಮ ಬದುಕಿನಲ್ಲಿ ಬದಲಾವಣೆ ಕಾಣದ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಾಜಿ ದೇವದಾಸಿ ತಾಯಂದಿರು ಗುರುವಾರ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ವಿಮುಕ್ತ ದೇವದಾಸಿ ತಾಯಂದಿರ ಮಹಾ ಒಕ್ಕೂಟದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಮಹಿಳೆಯರು ತಮ್ಮ ಹಕ್ಕು, ಗೌರವ ಮತ್ತು ಸಾಮಾಜಿಕ ಭದ್ರತೆಗಾಗಿ ಸರ್ಕಾರದ ವಿರುದ್ಧ ಧ್ವನಿ ಎತ್ತಿದರು. ಸಾವಿರಾರು ಮಹಿಳೆಯರ ಬೃಹತ್ ಸಮಾವೇಶದಿಂದ ಫ್ರೀಡಂ ಪಾರ್ಕ್ ಹೋರಾಟದ ಕೇಂದ್ರಬಿಂದುವಾಗಿತ್ತು….

Read More