BREAKING NEWS

ಬೆಳಗಾವಿಯಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಆಹಾರ ಸಚಿವ ಕೆ. ಎಚ್.ಮುನಿಯಪ್ಪ ಉದ್ಘಾಟಿಸಿದರು.

ಬೆಳಗಾವಿಯ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಏರ್ಪಡಿಸಲಾದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಆಹಾರ ಸಚಿವ ಕೆ ಎಚ್ ಮುನಿಯಪ್ಪ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಗ್ರಾಹಕರು ಯಾವುದೇ ರೀತಿಯಾಗಿ ಮೋಸ ಹೋಗಬಾರದು, ತಮ್ಮ ಕುಂದುಕೊರತೆಗಳನ್ನು ಸರಿ ಪಡಿಸಿಕೊಳ್ಳುವ ಜವಾಬ್ದಾರಿಯನ್ನು ಹೊಂದಿರಬೇಕು ನಾವು ನಿಮ್ಮ ಜೊತೆಗೆ ಸದಾಕಾಲ ಇರುತ್ತೇವೆ ಎಂದು ಹೇಳಿದರು. ಬೆಳಗಾವಿ ಆಹಾರ ಇಲಾಖೆಯ ಉಪನಿರ್ದೇಶಕರಾದ ಶ್ರೀ ಮಲ್ಲಿಕಾರ್ಜುನ ನಾಯ್ಕ್ ಹಾಗೂ ಸಹಾಯಕ ನಿರ್ದೇಶಕರಾದ ಶ್ರೀ ಅವಿನಾಶ ಬೆಲ್ಲದ ಹಾಗೂ…

Read More

ಡಿ.27ರಂದು ಬೆಟಗೇರಿಯಲ್ಲಿ 27ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ ಹಿಮಕೇದಾರ ಪೀಠದ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ಜರಗುವುದು

ಬೆಟಗೇರಿ:ಗ್ರಾಮದ ಓಂ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯವರ ಆಶ್ರಯದಲ್ಲಿ 27ನೇ ವರ್ಷದ ಓಂ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ, ಅನ್ನಸಂತರ್ಪನೆ, ಉತ್ತರಾಖಂಡ ಶ್ರೀಮದ ಹಿಮವತ್ ಕೇದಾರ ವೈರಾಗ್ಯ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ರಾವಲ್ ಪದವಿ ವಿಭೂಷಿತ ಭೀಮಾಶಂಕರಲಿಂಗ ಶಿವಾಚಾರ್ಯ ಭಗತ್ಪಾದರು ಅಡ್ಡಪಲ್ಲಕ್ಕಿ ಉತ್ಸವ, ದಾನಿಗಳಿಗೆ ಸತ್ಕಾರ ಸಮಾರಂಭ ಹಾಗೂ ಧರ್ಮಸಭೆ ಡಿ.27ರಂದು ಸ್ಥಳೀಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸನ್ನಿದಾನದಲ್ಲಿ ನಡೆಯಲಿದೆ.ಅಂದು ಮುಂಜಾನೆ 10 ಗಂಟೆಗೆ ಸುತ್ತಲಿನ ಹಲವು ನಗರ ಪಟ್ಟಣ, ಹಳ್ಳಿಗಳಿಂದ ಆಗಮಿಸಿದ…

Read More

ಡಿ.27 ರಂದು ಸುವರ್ಣ ವಿಧಾನ ಸೌಧದಲ್ಲಿಮಹಾತ್ಮಾ ಗಾಂಧೀಜಿಯವರ ಪುತ್ಥಳಿ ಅನಾವರಣ ಸಮಾರಂಭದ ಪೂರ್ವಸಿದ್ಧತೆಗಳನ್ನು ಸಚಿವ ಎಚ್.ಕೆ.ಪಾಟೀಲ ಪರಿಶೀಲಿಸಿದರು.

ಬೆಳಗಾವಿ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆ ವಹಿಸಿದ್ದ 1924ರ ಕಾಂಗ್ರೇಸ್ ಅಧಿವೇಶನಕ್ಕೆ ನೂರು ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶತಮಾನೊತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಮಹಾತ್ಮಾ ಗಾಂಧೀಜಿಯವರ ತತ್ವಾದರ್ಶಗಳನ್ನು ದೇಶದ ಪ್ರತಿಯೊಬ್ಬರಿಗೆ ಪರಿಚಯಿಸುವ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಪ್ರವಾಸೊದ್ಯಮ ಇಲಾಖೆ ಸಚಿವರಾದ ಎಚ್.ಕೆ.ಪಾಟೀಲ ಅವರು ತಿಳಿಸಿದರು. ಬೆಳಗಾವಿ ಸುವರ್ಣ ಸೌಧ ಆವರಣದಲ್ಲಿ ಬುಧವಾರ ಮಹಾತ್ಮಾ ಗಾಂಧೀಜಿಯವರ ಪುತ್ಥಳಿ ಅನಾವರಣ ಸಮಾರಂಭದ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿ ಅವರು‌ ಮಾತನಾಡಿದರು. ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924ರಲ್ಲಿ ಜರುಗಿದ ಅಧಿವೇಶನ ಕೇವಲ ಪಕ್ಷದ ಅಧಿವೇಶನವಾಗಿರದೇ,…

Read More

ಉಭಯ ಮಾಧ್ಯಮ ಶಾಲೆಯ ೭ನೇ ತರಗತಿ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬಿಳ್ಕೋಡುವ ಸಮಾರಂಭ

ಬೆಟಗೇರಿ: ಕಲಿಕೆ ನಿಂತ ನೀರಾಗದೇ ಹರಿಯುವ ನೀರಿನಂತಿರಬೇಕು. ಶಾಲಾ ಶಿಕ್ಷಕರು ಮಕ್ಕಳಿಗೆ ನಿತ್ಯ ಹೊಸತನದ ಅನುಭವ ನೀಡಬೇಕು ಎಂದು ಬೆಟಗೇರಿ ತಾಪಂ ಮಾಜಿ ಸದಸ್ಯ ಈರಪ್ಪ ದೇಯಣ್ಣವರ ಹೇಳಿದರು.ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಚೈತನ್ಯ ಗ್ರುಪ್ಸ್ನ ಬೆಟಗೇರಿ ಕೃಷ್ಣಶರ್ಮ ಚೈತನ್ಯ ಕನ್ನಡ ಮಾಧ್ಯಮ ಮತ್ತು ಶ್ರೀಮತಿ ಸತ್ತೆವ್ವ ದೇಯಣ್ಣವರ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ನಡೆದ ಉಭಯ ಮಾಧ್ಯಮ ಶಾಲೆಯ ೭ನೇ ತರಗತಿ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬಿಳ್ಕೋಡುವ ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ…

Read More

ಮಹಾತ್ಮಾ ಗಾಂಧೀಜಿ ಪುತ್ಥಳಿ ಅನಾವರಣ ಸಮಾರಂಭ ಡಿಸೆಂಬರ್ 27 ರಂದು ನಡೆಯಲಿದ್ದು ಸ್ವಾತಂತ್ರ್ಯ ಯೋಧರ ಮನೆಗಳಿಗೆ ತೆರಳಿ ಆಹ್ವಾನ ನೀಡಿದ ಸಚಿವ ಎಚ್.ಕೆ.ಪಾಟೀಲ

ಶತಮಾನೋತ್ಸವದ ಸಮಿತಿಯ ಅಧ್ಯಕ್ಷ ಹಾಗೂ ರಾಜ್ಯದ ಕಾನೂನು ಮತ್ತು ಸಂಸದಿಯ ವ್ಯವಹಾರಗಳ ಖಾತೆ ಸಚಿವ ಎಚ್.ಕೆ ಪಾಟೀಲರು ಸಾಂಕೇತಿಕವಾಗಿ ಸ್ವಾತಂತ್ರ‍್ಯ ಯೋಧರ ಮನೆಗಳಿಗೆ ತೆರಳಿ ಸುವರ್ಣ ಸೌಧದ ಮುಂದೆ ಪ್ರತಿಷ್ಠಾಪಿಸಲಾಗಿರುವ ಮಹಾತ್ಮ ಗಾಂಧೀ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಕುಟುಂಬ ಸಮೇತ ಆಗಮಿಸಲು ಆಹ್ವಾನ ನೀಡಿದರು. ರಾಮತೀರ್ಥನಗರದಲ್ಲಿ ಇರುವ ಅಣ್ಣು ಗುರೂಜಿ ಅವರ ಮನೆಗೆ, ಹನುಮಾನ ನಗರದಲ್ಲಿರುವ ವಿಠ್ಠಲರಾವ್ ಯಾಳಗಿ ಹಾಗೂ 1924 ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ರೂವಾರಿ ಶ್ರೀಗಂಗಾಧರರಾವ್ ದೇಶಪಾಂಡೆ ಅವರ ಮನೆಗಳಿಗೆ ಖುದ್ದಾಗಿ ಭೇಟಿ…

Read More

ಸಚಿವ ಈಶ್ವರ್ ಖಂಡ್ರೆರವರಿಂದ ವೀರಶೈವ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳಿಗೆ ಆದೇಶ ಪತ್ರ ವಿತರಣೆ

ಬಳ್ಳಾರಿ ನಗರದ ಮಾಜಿ ವಿಧಾನ ಪರಿಷತ್ ಸದಸ್ಯರು ವೀರಶೈವ ಮಹಾಸಭಾದ ಹಿರಿಯ ನಾಯಕರಾದ ಎನ್. ತಿಪ್ಪಣ್ಣ ಅವರ ನಿವಾಸದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿಗಳು ಹಾಗೂ ಅರಣ್ಯ ಪರಿಸರ ಇಲಾಖೆಯ ಸಚಿವರಾದ ಈಶ್ವ‌ರ್ ಖಂಡ್ರೆ ಅವರು ಆಗಮಿಸಿ ಬಳ್ಳಾರಿಯ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಬಳ್ಳಾರಿ ಘಟಕದ ಪದಾಧಿಕಾರಿಗಳು ನೇಮಕವಾಗಿದ್ದರಿಂದ, ಇವರಿಗೆ ಅಖಿಲ ಭಾರತ ವೀರಶೈವ ಮಹಾಸಭಾದ ನಿಕಟಪೂರ್ವ ಉಪಾಧ್ಯಕ್ಷರು ಹಾಗೂ ರಾಜ್ಯ ಘಟಕದ ಅಧ್ಯಕ್ಷರಾದ ಎನ್.ತಿಪ್ಪಣ್ಣ ಅವರು…

Read More

ಮಾನವೀಯತೆ ಮೆರೆದ ಟೂರಿಸ್ಟ್ ಪೊಲೀಸ್ ಸಿಬ್ಬಂದಿಗಳು

ರಾಜಸ್ಥಾನದ ಜೋದಪುರ ಜಿಲ್ಲೆಯ ಸುಮಿತ್ರ ಗಂಡ ಕೃಷ್ಣ 55 ವರ್ಷದ ಭಕ್ತರು ಅಂಜನಾದ್ರಿಯ ದರ್ಶನಕ್ಕೆ ಬಂದಿದ್ದರು ದರ್ಶನ ಪಡೆದ ನಂತರ ಅವರಿಗೆ ಉಸಿರಾಟದ ತೊಂದರೆಯಾಗಿ ಶುಗರ್ ಮತ್ತು ಬಿಪಿ ಕಡಿಮೆಯಾಗಿ ಅಸ್ವಸ್ಥಗೊಂಡಿದ್ದರು ಸುದ್ದಿ ತಿಳಿದ ತಕ್ಷಣ ಪ್ರವಾಸಿ ಮಿತ್ರ,ಟೂರಿಸ್ಟ್ ಪೋಲೀಸರಾದ ನಿರುಪಾದಿ ಭೋವಿ ಹಾಗೂ ಹನುಮಂತಪ್ಪ ಬಿ ಹಾಗೂ ದೇವಸ್ಥಾನದ ಸಿಬ್ಬಂದಿ, ಹನುಮಂತ, ಸಂತೋಷ, ಸಿದ್ದು, ಪರಶುರಾಮ ಹಾಗೂ ಮುತ್ತಣ್ಣ ಸೇರಿ ಬೆಟ್ಟದ ಮೇಲೆ ಪ್ರತಮ ಚಿಕಿತ್ಸೆ ನೀಡಿ ಸ್ಟಚ್ಚರ್ ಮೂಲಕ ಬೆಟ್ಟದ ಮೇಲಿಂದ ಕೆಳಗಡೆ ತೆಗೆದುಕೊಂಡು…

Read More

ಕೊಟ್ಟೂರು:ಚೆಕ್ ಡ್ಯ‍ಾಂ ಕಾಮಗಾರಿ ಕಳಪೆ, ತನಿಖೆ ಮಾಡಿ-ಇಒಗೆ ರೈತ ಮುಖಂಡ ಒತ್ತಾಯ

ವಿಜಯನಗರ ಜಿಲ್ಲೆ ಕೊಟ್ಟೂರು:ತಾಲೂಕಿನ ನಾಗರಕಟ್ಟೆ ಹಾಗೂ ಕೆಐನಹಳ್ಳಿ ವ್ಯಾಪ್ತಿಯ, ಹಳ್ಳಗಳ ಬದುವಿನಲ್ಲಿ ಕೃಷಿ ಚೆಕ್ ಡ್ಯಾಂ ನಿರ್ಮಾಣದಲ್ಲಿ. ಭಾರೀ ಅವ್ಯವಹಾರ ನಡೆದಿದೆ ತನಿಖೆ ಮಾಡಿ ಎಂದು, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೋಡಿಹಳ್ಳಿ ಭರ್ಮಣ್ಣ ದೂರಿದ್ದಾರೆ. ಹಳೇ ಚೆಕ್ ಡ್ಯಾಂನ ಕಲ್ಲುಗಳನ್ನೇ ಬಳಸಲಾಗಿದೆ, ಪಕ್ಕದಲ್ಲಿನ ಹಳ್ಳವನ್ನೆ ಅಗೆದು ಬಗೆದು. ಕನಿಷ್ಠ ದರ್ಜೆಯ ಮರಳನ್ನು ಹಾಗೂ ಕಡಿಮೆ ದರ್ಜೆಯ ಸಾಮಾಗ್ರಿಗಳನ್ನು ಬಳಸಲಾಗಿದ್ದು, ಈ ಚೆಕ್ ಡ್ಯಾಂಗಳನ್ನು ಅವೈಜ್ಞಾನಿಕ ರೀತಿಯಲ್ಲಿ ತುಂಬಾ ದುರ್ಭಲರೀತಿಯಲ್ಲಿ ನಿರ್ಮಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಸಂಬಂಧಿಸಿದಂತೆ…

Read More

ಜಿಲ್ಲೆಯ ಮೊಟ್ಟ ಮೊದಲ ಹ್ಯಾಮ್ ಸ್ಟೇಷನ್ MDRS ಸ್ಕೂಲ್ ಬೀಳಗಿಯಲ್ಲಿ ಆರಂಭ

ಅಂತರಾಷ್ಟ್ರೀಯ ಮಟ್ಟದಲ್ಲಿ ಸಂವಹನ ಮಾಡುವಂತ ಹ್ಯಾಮ್ ಸ್ಟೇಷನ್ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತೆರೆಯಲಾಗಿದೆ. ಇಲ್ಲಿನ ವಿಜ್ಞಾನ ಶಿಕ್ಷಕ ಕೃಷ್ಣಾ ಜೋಶಿ ಹಾಗೂ ಕುಮಾರಿ ರಫೀದಾ ಖಾಜಾಮೈನುದ್ದಿನ ತಹಶಿಲ್ದಾರ್ ಮತ್ತು ಕುಮಾರ್ ವಿನಯ ಬೂಸರಡ್ಡಿ ವಿದ್ಯಾರ್ಥಿಗಳು ಹ್ಯಾಮ್ ಲೈಸೆನ್ಸ್ ಪಡೆದ್ದಾರೆ, ತುರ್ತು ಸಂದರ್ಭದಲ್ಲಿ ಹಾಗೂ ಪರಿಸರದಲ್ಲಿ ಆಗುವ ಅನಾಹುತದ ಸಂದರ್ಭದಲ್ಲಿ ಸಂದೇಶ ರವಾನಿಸಲು ಉಪಯುಕ್ತವಾದ ಸಂವಹಣ ಎಂದು ವಸತಿ ಶಾಲೆಯ ಪ್ರಾಂಶುಪಾಲ ಶೇಖಪ್ಪ ಅರಸನಗಿ ಹೇಳಿದರು. ಗುರುವಾರ ಮೊರಾರ್ಜಿ ದೇಸಾಯಿ ವಸತಿ ಹ್ಯಾಮ್ ಸ್ಟೇಷನ್ ನಲ್ಲಿ…

Read More

ಕಚೇರಿಯಲ್ಲಿ ಹಿರಿಯ ವ್ಯಕ್ತಿಯನ್ನು ಗಂಟೆಗಟ್ಟಲೆ ಕಾಯಿಸಿದ ಸರ್ಕಾರಿ ನೌಕರರಿಗೆ ವಿಶಿಷ್ಟ ಶಿಕ್ಷೆ ನೀಡಿದ ಸಿಇಒ

ಸರ್ಕಾರಿ ನೌಕರರು ಕಛೇರಿಯಲ್ಲಿ ಜನರನ್ನು ಅಲೆದಾಡಿಸುವುದು, ಕಾಯುವಂತೆ ಮಾಡಿಸುವುದು ಹೊಸದೇನು ಅಲ್ಲ ಬಿಡಿ. ಹೆಚ್ಚಿನ ಕಡೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಇಲ್ಲೊಂದು ಕಡೆ ಇದೇ ರೀತಿಯ ಘಟನೆ ನಡೆದಿದ್ದು, ಸರ್ಕಾರಿ ಕಛೇರಿಯ ನೌಕರರು ಹಿರಿಯ ವ್ಯಕ್ತಿಯೊಬ್ಬರಿಗೆ ಸರಿಯಾದ ಸೇವೆಯನ್ನು ನೀಡದೆ ಅವರನ್ನು ಗಂಟೆಗಟ್ಟಲೆ ಕಾಯುವಂತೆ ಮಾಡಿದ್ದಾರೆ. ನೌಕರರ ಈ ವರ್ತನೆಯಿಂದ ಗರಂ ಆದ ಸಿಇಒ ನೀವು ಕೂಡಾ ಹೀಗೆಯೇ ನಿಂತ್ಕೊಂಡೇ ಕೆಲಸ ಮಾಡಿ ಎಂದು ಅವರಿಗೆ ಶಿಕ್ಷೆಯ ನೀಡಿದ್ದಾರೆ. ಈ ವಿಡಿಯೋ ಇದೀಗ ವೈರಲ್‌ ಆಗುತ್ತಿದೆ….

Read More