BREAKING NEWS

ಡಾ|ಭೀಮರಾವ ಡಿಜಿಟಲ್ ಮಾಧ್ಯಮ ಸಂಘಕ್ಕೆ ರಾಜ್ಯ ಪ್ರದಾನ ಕಾರ್ಯದರ್ಶಿಯಾಗಿ ಯಾದವಾಡ ನೇಮಕ

ಡಾ|ಭೀಮರಾವ ಡಿಜಿಟಲ್ ಮಾಧ್ಯಮ ಕಾರ್ಯನಿರತರ ಸಂಘದ ಪದಾಧಿಕಾರಿಗಳ ಸಭೆಯು ಗುರುವಾರ ಬಾಗಲಕೋಟ ನಗರದಲ್ಲಿರುವ ಸಂಘದ ಕಾರ್ಯಾಲಯದಲ್ಲಿ ಜರುಗಿತು. ಸಭೆಯಲ್ಲಿ ಸಂಘದ ಸರ್ವ ಪದಾಧಿಕಾರಿಗಳು ಸೇರಿ ಒಮ್ಮತದಿಂದ ಪತ್ರಕರ್ತ ಎಂ ಕೆ ಯಾದವಾಡ ಅವರನ್ನು ಡಾ|ಭೀಮರಾವ ಡಿಜಿಟಲ್ ಮಾಧ್ಯಮ ಕಾರ್ಯನಿರತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದರು. ಕಾರ್ಯಕ್ರಮದಲ್ಲಿ ರಾಜ್ಯ ಪ್ರದಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಎಂ ಕೆ ಯಾದವಾಡ ಅವರಿಗೆ ಸನ್ಮಾನಿಸುವ ಮೂಲಕ ಸಂಘದಲ್ಲಿ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಡಾ|ಭೀಮರಾವ ಡಿಜಿಟಲ್ ಮಾಧ್ಯಮ ಕಾರ್ಯನಿರತರ ಸಂಘದ ರಾಜ್ಯಾಧ್ಯಕ್ಷರಾದ…

Read More

ಹಾಸನಾಂಬ ದೇವಿ ಜಾತ್ರಾ ಮಹೋತ್ಸವದಲ್ಲಿ 25.59 ಕೋಟಿ ಆದಾಯ

ಹಾಸನ ಶ್ರೀ ಹಾಸನಾಂಬ ದೇವಿ ಜಾತ್ರಾ ಮಹೋತ್ಸವವು ಅ.09 ರಿಂದ ಅ.23 ರವರೆಗೆ ನಡೆದಿದ್ದು 25,59,87,327 ಕೋಟಿ ರೂ ಆದಾಯ ಸಂಗ್ರಹವಾಗಿದೆ ಎಂದು ಶ್ರೀ ಹಾಸನಾಂಬ ದೇವಾಲಯದ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಮಾರುತಿ ಅವರು ತಿಳಿಸಿದ್ದಾರೆ. 1000 ರೂ, 300 ರೂ ಟಿಕೆಟ್ ಹಾಗೂ ಲಾಡುಪ್ರಸಾದ ಮಾರಾಟದಿಂದ ಒಟ್ಟು 21,91,75,052 ರೂ ಆದಾಯ ಬಂದಿರುತ್ತದೆ. ಹುಂಡಿ ಎಣಿಕೆಯಲ್ಲಿ 3,68,12,275 ರೂಪಾಯಿ ಬಂದಿರುತ್ತದೆ. ಕಾಣಿಕೆ ರೂಪದಲ್ಲಿ 75 ಗ್ರಾಂ. 300 ಮಿಲಿ ಚಿನ್ನ, ಬೆಳ್ಳಿ 1 ಕೆ.ಜಿ 58…

Read More

ರಾಮದುರ್ಗ ತಾಲೂಕಿನ ಸುರೇಬಾನ, ಮುಳ್ಳೂರು ಗ್ರಾಮದಲ್ಲಿ ಹೆಚ್ಚಿದ ಮಟ್ಕಾ ದಂಧೆ…!

ಮಟ್ಕಾದಿಂದ ಅನೇಕ ಕುಟುಂಬಗಳು ಬೀದಿ ಪಾಲಾದರೆ, ಕೆಲ ಯುವಕರು ಮಟ್ಕಾದಿಂದ ಹಣ ಕಳೆದುಕೊಂಡು ಊರು ಬಿಟ್ಟು ಹೋಗಿರುವ ಉದಾಹರಣೆಗಳು ಇವೆ. ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸುರೇಬಾನ, ಮುಳ್ಳೂರು ಭಾಗದಲ್ಲಿನಡೆಯುತ್ತಿರುವ ಮಟ್ಕಾ ದಂಧೆಗೆ ಕಡಿವಾಣ ಯಾವಾಗ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ ? ಮಟ್ಕಾ ದಂಧೆ ನಡೆಯುತ್ತಿದ್ದರೂ ಪೊಲೀಸ್‌ ಇಲಾಖೆ ಮೌನ ವಹಿಸಿದೆ. ಮಟ್ಕಾ ದಂಧೆಯಿಂದ ಅನೇಕ ಬಡ ಕುಟುಂಬಗಳು ತೀವ್ರ ಸಂಕಷ್ಟ ಪರಿಸ್ಥಿತಿ ಎದುರಿಸುವಂತಾಗಿದೆ. ಕೆಲವರು ತಾವೇ ಮುಂದು ನಿಂತುಕೊಂಡು ಮಟ್ಕಾ ಬರೆಯುತ್ತಿರುವುದು ಕಂಡುಬಂದಿದೆ.

Read More

ಬಿಮ್ಸ್ ಆಸ್ಪತ್ರೆಗೆ ಪ್ರಾದೇಶಿಕ ಆಯುಕ್ತೆ‌ ಜಾನಕಿ ಭೇಟಿ: ಅಧಿಕಾರಿಗಳ ಸಭೆ.

ಬೆಳಗಾವಿ ಸರ್ಕಾರಿ ಆಸ್ಪತ್ರೆಗೆ ಬರುವವರು ಬಡವರು ಮತ್ತು ಅಸಹಾಯಕರು. ಅವರಿಗೆ ಉತ್ತಮವಾದ ಚಿಕಿತ್ಸೆ ಜೊತೆಗೆ ಆರೈಕೆಯು ನಮ್ಮೆಲ್ಲರ ಮೊದಲ ಆದ್ಯತೆಯಾಗಿದ್ದು, ಅವರಿಗೆ ನೀಡುವ ಚಿಕಿತ್ಸೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಬಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಎಲ್ಲ ವಿಭಾಗದಲ್ಲಿಯೂ ಉತ್ತಮವಾದ ಚಿಕಿತ್ಸೆ ನೀಡುವುದರ ಜತೆಗೆ ರೋಗಿಗಳೊಂದಿಗೆ ಸಂಯಮದಿಂದ ವರ್ತಿಸಬೇಕು ಎಂದು ಪ್ರಾದೇಶಿಕ ಆಯುಕ್ತರಾದ ಜಾನಕಿ ಕೆ.ಎಂ. ಸೂಚನೆ ನೀಡಿದರು. ಬೆಳಗಾವಿಯ ಸೂಪರ್‌ ಸ್ಪೆಷಾಲಿಟಿ ಆಸ್ಪ್ರತೆಯಲ್ಲಿ ಶುಕ್ರವಾರ ಆಡಳಿತ ಮಂಡಳಿಯ ಪ್ರಗತಿ ಪರಿಶಿಲನಾ ಸಭೆಯಲ್ಲಿ ಅವರು ಮಾತನಾಡಿದರು….

Read More

ಅಕ್ರಮ ಮಣ್ಣು ತುಂಬುವವರಿಂದ ಪತ್ರಕರ್ತರಿಗೆ ಕೊಲೆ ಬೆದರಿಕೆ ಅವಾಜ್ ಹಾಕಿದ ಚೆನ್ನಪ್ಪ ಗುದ್ದಿ

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ದಿನಾಂಕ. 12/10/2025 ರಂದು ಮಧ್ಯಾಹ್ನ 12 ಗಂಟೆ 25 ನಿಮಿಷಕ್ಕೆ ಸುರೇಬಾನ ಪೊಲೀಸ್ ಠಾಣೆಯ ಸಿಬ್ಬಂದಿಗೆ ಮುಳ್ಳೂರು ಗ್ರಾಮದಲ್ಲಿ ಅಕ್ರಮವಾಗಿ ಮಣ್ಣು ತುಂಬುವುದರ ಬಗ್ಗೆ ನಾನು ಫೋನಿನ ಮುಖಾಂತರ ಮಾಹಿತಿ ನೀಡಿದ್ದು ಇರುತ್ತದೆ. ನಾನು ನೀಡಿದ ಮಾಹಿತಿ ಆಧಾರದ ಮೇಲೆ ಸುರೇಬಾನ ಪೊಲೀಸ್ ಠಾಣೆಯ ಸಿಬ್ಬಂದಿಯಾದ ಉಮೇಶ ಅರಭಾಂವಿ ಅವರು ಮುಳ್ಳೂರು ಗ್ರಾಮಕ್ಕೆ ಹೋಗಿ ಭೇಟಿ ನೀಡಿದಾಗ ಅಲ್ಲಿ ಚೆನ್ನಪ್ಪ ಗುದ್ದಿ ಎಂಬುವರು ನಮ್ಮ ಹೊಲದಲ್ಲಿ ನಾವು ಮಣ್ಣು…

Read More

ಹೆಚ್ಚುವರಿಯಾಗಿ ನೀಡುತ್ತಿರುವ ಐದು ಕೆಜಿ ಅಕ್ಕಿ ಬದಲು ಇಂದಿರಾ ಆಹಾರ ಕಿಟ್ ವಿತರಣೆ : ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ.

ಬೆಂಗಳೂರು: ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಒಟ್ಟು 10 ಕೆಜಿ ಅಕ್ಕಿ ನೀಡುತ್ತಿದ್ದು, ಇನ್ನುಮುಂದೆ ಹೆಚ್ಚುವರಿಯಾಗಿ ನೀಡುತ್ತಿರುವ ಐದು ಕೆಜಿ ಅಕ್ಕಿ ಬದಲು ಇಂದಿರಾ ಆಹಾರ ಕಿಟ್ ವಿತರಣೆ ಮಾಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ್ ಅವರು, ಅನ್ನಭಾಗ್ಯ ಅಕ್ಕಿಯ ಅಕ್ರಮ ಸಾಗಾಟ, ಕಳ್ಳತನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದಿರಾ ಆಹಾರ ಕಿಟ್ ನೀಡಲು…

Read More

ಪತ್ರಕರ್ತ ಬಸವರಾಜ ಕಾನಗೊಂಡ ಅಪಘಾತ ಅಲ್ಲ! ಇದೊಂದು ಕೊಲೆ

ಜಮಖಂಡಿ ತಾಲೂಕಿನ ಮಧುರ ಖಂಡಿ ಗ್ರಾಮದ ಬಳಿ ಪತ್ರಕರ್ತ ಬಸವರಾಜ ಕಾನಗೊಂಡ ಅಪಘಾತ ಅಲ್ಲ, ಇದೊಂದು ಕೊಲೆ ಎನ್ನುವುದು ಖಚಿತ ಪಡಿಸಿಕೊಂಡು 24 ಗಂಟೆಯಲ್ಲಿ ಪೋಲಿಸರು ಪತ್ತೆ ಮಾಡಿ. ಪಡಿತರ ಅಕ್ಕಿಯ ಅಕ್ರಮ ದಂಧೆಕೋರ ಅಶ್ವಾಕ್ ಸುಲೇಮಾನ್ ಮುಲ್ಲಾ, ನಂದೇಶ್ವರ ಮಾಹಾದೇವ ಪಾವಡಿ, ಮಹೇಶ ಶ್ರೀಶೈಲ್ ಪಾವಡಿ, ಮೂವರು ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ. ಜಮಖಂಡಿ ತಾಲೂಕಿನ ಮಧುರಖಂಡಿ ಗ್ರಾಮದ ಬಳಿ ಸಂಜೆ ಬೈಕ್ನಲ್ಲಿ ತೆರಳುತ್ತಿದ್ದ ಆಲಗೂರ ಗ್ರಾಮದ ಬಸವರಾಜ ಕಾನಗೊಂಡ ವಯಸ್ಸು 40 ವರ್ಷ…

Read More

ಬೀದರ್ | ಅಕ್ರಮವಾಗಿ ಸಾಗಿಸುತಿದ್ದ 1 ಲಕ್ಷ 36 ಸಾವಿರ ರೂ. ಮೌಲ್ಯದ 40 ಕ್ವಿಂಟಲ್ ಪಡಿತರ ಅಕ್ಕಿ ವಶ.

ಬೀದರ್ : ಅಕ್ರಮವಾಗಿ ಸಾಗಿಸುತಿದ್ದ 1 ಲಕ್ಷ 36 ಸಾವಿರ ರೂ. ಮೌಲ್ಯದ 40 ಕ್ವಿಂಟಲ್ ಪಡಿತರ ಅಕ್ಕಿ ಹಾಗೂ ಅಕ್ಕಿ ಸಾಗಿಸುತಿದ್ದ ಒಂದು ಬುಲೆರೋ ವಾಹನವನ್ನು ಬಸವಕಲ್ಯಾಣ ಪೊಲೀಸರು ವಶಕ್ಕೆ ಪಡೆದು, ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬಸವಕಲ್ಯಾಣ ಪಟ್ಟಣದ ಅಡತ್ ಬಜಾರನಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುವ ಸಲುವಾಗಿ ವಾಹನದಲ್ಲಿ ಸಾಗಿಸುತ್ತಿರುವ ಖಚಿತ ಮಾಹಿತಿ ತಿಳಿದು, ಆಹಾರ ನಿರೀಕ್ಷಕ ನಾಗರಾಜ್ ಪಾಟೀಲ್ ಅವರ ಸಮಕ್ಷಮದಲ್ಲಿ ಪಿಎಸ್ಐ ಚಂದ್ರಶೇಖರ್ ನಾರಾಯಣಪೂರೆ ಮತ್ತು…

Read More

ಅಕ್ರಮವಾಗಿ ಸಾಗಿಸುತ್ತಿದ್ದ 4,750 ಕೆಜಿ ಪಡಿತರ ಅಕ್ಕಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯವರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.

ಪಡಿತರ ಅಕ್ಕಿ ಅಕ್ರಮ ಸಾಗಣೆ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿತಹಸೀಲ್ದಾರ್ ಎಂ.ಎಸ್ .ತನ್ಮಯ್ ಸೂಚನೆಯಂತೆ ಪೊಲೀಸ್ ಇಲಾಖೆಯ ಸಹಕಾರದಲ್ಲಿ ಜಂಟಿ ಕಾರ್ಯಾಚರಣೆ ನಡೆಸಲಾಯಿತು. ಗುಂಡ್ಲುಪೇಟೆ ಪಟ್ಟಣದ ಹಳ್ಳದಕೇರಿ ಬಳಿ ಸರಕು ಸಾಗಣೆ ವಾಹನವನ್ನು ಪರಿಶೀಲಿಸುವ ಸಲುವಾಗಿ ತಡೆಯಲಾಯಿತು. ಈ ವೇಳೆ ಚಾಲಕ ಸರಕು ತುಂಬಿದ್ದ ಲಾರಿಯನ್ನು ಬಿಟ್ಟು ಚಾಲಕ ಪರಾರಿಯಾದ. ಬಳಿಕ ಪರಿಶೀಲನೆ ನಡೆಸಿದಾಗ ವಾಹನದಲ್ಲಿ 4,750 ಕೆಜಿ ಪಡಿತರ ಅಕ್ಕಿಯನ್ನು ಪ್ಲಾಸ್ಟಿಕ್ ಚೀಲದಲ್ಲಿತುಂಬಿ ತಮಿಳುನಾಡಿಗೆ ಸಾಗಿಸಲಾಗುತ್ತಿತ್ತು. ನಂತರ ವಾಹನ ಸಹಿತ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆಯಲಾಯಿತು….

Read More

ಕಲಬುರಗಿ | ಸಂಘವೊಂದರ ನೋಂದಣಿ ಮಾಡುವುದಕ್ಕಾಗಿ ಲಂಚದ ಬೇಡಿಕೆಯಿಟ್ಟು, 5 ಸಾವಿರ ರೂಪಾಯಿ ಹಣ ಪಡೆಯುತ್ತಿರುವಾಗಲೇ ಅಧಿಕಾರಿಗಳಿಬ್ಬರು ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.

ಕಲಬುರಗಿ: ಸಂಘವೊಂದರ ನೋಂದಣಿ ಮಾಡುವುದಕ್ಕಾಗಿ ಲಂಚದ ಬೇಡಿಕೆಯಿಟ್ಟು, 5 ಸಾವಿರ ರೂಪಾಯಿ ಹಣ ಪಡೆಯುತ್ತಿರುವಾಗಲೇ ಅಧಿಕಾರಿಗಳಿಬ್ಬರು ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಬುಧವಾರ ಸೇಡಂ ಪಟ್ಟಣದಲ್ಲಿ ನಡೆದಿದೆ. ಬೀರಲಿಂಗೇಶ್ವರ ಹೊಸ ಕೋಳಿ ಸಾಕಾಣಿಕೆ ಮಾಡೋದಕ್ಕೆ ಹಾಗೂ ಮಾರಾಟಗಾರರ ಸಹಕಾರಿ ಸಂಘದ ನೊಂದಣಿಗೆ ಅಧಿಕಾರಿ ಮಲ್ಲಿಕಾರ್ಜುನ್ ಅವರು 10 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಈ ಕುರಿತು ಬೀರಪ್ಪ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡಿದ ಮೇರೆಗೆ ಲೋಕಾ ಪೊಲೀಸರು ದಾಳಿ ನಡೆಸಿ,…

Read More