ಸವದತ್ತಿ ಅಂತರಾಷ್ಟ್ರೀಯ ಯುವ ದಿನ” ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ.
ಸವದತ್ತಿ ತಾಲೂಕಾ ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕಃ 12-08-2026 ರಂದು ಶ್ರೀ. ಜಿ.ಜಿ.ಚೋಪ್ರಾ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ “ಅಂತರಾಷ್ಟ್ರೀಯ ಯುವ ದಿನ” ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಹವ್ಮಿುಕೊಳ್ಳಲಾಗಿತ್ತು. ಸಹಾಯಕ ಸರ್ಕಾರಿ ಅಭಿಯೋಜಕರಾದ ಎಮ್.ಎಸ್.ಸನ್ನಲಿಂಗನವರ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಫಾಟನೆ ನೆರವೇರಿಸಿದರು ನಂತರ ಮಾತನಾಡಿದ ಅವರು ನಮ್ಮನ್ನು ನಾವು ರಕ್ಷಿಸಿಕೊಳ್ಳಲು ರಚಿಸಿಕೊಂಡಂತಹವುಗಳೇ ಕಾನೂನುಗಳು. ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಿದರೆ ಅಪರಾಧಗಳಿಗೆ ಪ್ರಾಥಮಿಕ ಹಂತದಲ್ಲಿ…
