ವಧುವನ್ನು ಅಪಹರಣ ಮಾಡಲು ಯತ್ನಿಸಿದ ಘಟನೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.
ವರನ ಕಣ್ಣಿಗೆ ಮೆಣಸಿನ ಪುಡಿ ಹಾಕಿ ವಧುವನ್ನು ಅಪಹರಣ ಮಾಡಲು ಯತ್ನಿಸಿದ ಘಟನೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.ವಧುವನ್ನು ಎಳೆದೊಯ್ಯಲು ಯತ್ನಿಸಿದ್ದು ಆಕೆಯ ಹೆತ್ತವರೇ ಆಗಿದ್ದಾರೆ. ಘಟನೆಯ ವೀಡಿಯೊ ವೈರಲ್ ಆಗಿದ್ದು, ವಧುವನ್ನು ಆಕೆಯ ಚೀರಾಟದ ನಡುವೆಯೇ ಎಳೆದಾಡಿರುವುದು ಕಂಡುಬರುತ್ತದೆ.ವರನ ಕುಟುಂಬಸ್ಥರ ಮೇಲೂ ವಧುವಿನ ಮನೆಯವರು ಮೆಣಸಿನ ಪುಡಿ ಎರಚಿ ಹಲ್ಲೆ ಮಾಡಿದ್ದಾರೆ. ವರನ ಸಂಬಂಧಿಕರು ಅಸ್ತವ್ಯಸ್ತರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.ಆಂಧ್ರಪ್ರದೇಶದ ನರಸರಾವ್‌ಪೇಟೆಯ ಕಾಲೇಜೊಂದರಲ್ಲಿ ಪಶುವೈದ್ಯಕೀಯ ವಿಜ್ಞಾನದಲ್ಲಿ ಡಿಪ್ಲೊಮಾ ಓದುತ್ತಿದ್ದಾಗ ಸ್ನೇಹಾ…
