ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಜಿಲ್ಲಾಡಳಿತದಿಂದ ಐತಿಹಾಸಿಕ ಬೆಟ್ಟ ಹತ್ತುವ ಕಾರ್ಯಕ್ರಮ
ಬಳ್ಳಾರಿ ಹರ್ ಘರ್ ತಿರಂಗಾ ಅಭಿಯಾನದಂ ಅಂಗವಾಗಿ ಮಂಗಳವಾರ ಜಿಲ್ಲಾಡಳಿತ ವತಿಯಿಂದ ನಗರದ ಐತಿಹಾಸಿಕ ಬೆಟ್ಟದ ಮೇಲೆ ಹಮ್ಮಿಕೊಂಡಿದ್ದ ರಾಷ್ಟ್ರಧ್ವಜಾರೋಹಣ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಮಹಮ್ಮದ್.ಎನ್ ಝುಬೇರ್ ಭಾಗವಹಿಸಿ ಅವರು ಮಾತನಾಡಿದರು.ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ಎಷ್ಟೋ ಮಹಾನುಭಾವರು ಮತ್ತು ಮಹನಿಯರು ತಮ್ಮ ಪ್ರಾಣವನ್ನು ಮುಡಿಪಾಗಿಟ್ಟಿದ್ದಾರೆ. ಮಹಾನುಭಾವರ ತ್ಯಾಗ ಬಲಿದಾನಗಳ ಪ್ರತೀಕವೇ ಸ್ವಾತಂತ್ರ್ಯವಾಗಿದ್ದು ವಿದ್ಯಾರ್ಥಿಗಳು ಸ್ವಾತಂತ್ರ ಹೋರಾಟಗಾರರ ಮೌಲ್ಯ ಬೆಳೆಸಿಕೊಂಡು, ದೇಶ ಪ್ರೇಮ ಮೈಗೂಡಿಸಿಕೊಳ್ಳಬೇಕು ಎಂದರು.ವಿಶ್ವದಲ್ಲಿಯೇ ಭಾರತವು ಅತೀ ಹೆಚ್ಚು ಯುವಕರನ್ನು ಒಳಗೊಂಡಂತಹ ದೇಶವಾಗಿದೆ. ಯುವಕರು ತಮ್ಮ ಯೌವ್ವನವನ್ನು…
