ಜಿಲ್ಲೆಯ ಎಲ್ಲ ರೈತರು ಫ್ರೂಟ್ಸ್ ಐಡಿ ಮತ್ತು ನೋಂದಣಿ ಸಂಖ್ಯೆ ಹೊಂದುವುದು ಹಾಗೂ ತಮ್ಮ ಎಲ್ಲ ಭೂ ಹಿಡುವಳಿಗಳನ್ನು ಫ್ರೂಟ್ಸ್ ತಂತ್ರಾಂಶಕ್ಕೆ ಜೋಡಣೆ ಮಾಡುವುದು ಕಡ್ಡಾಯ:ಜಿಲ್ಲಾಧಿಕಾರಿ ಸ್ನೇಹಲ್ ಆರ್.
ಧಾರವಾಡ ಫ್ರೂಟ್ಸ್ ತಂತ್ರಾಂಶದಲ್ಲಿ ಈಗಾಗಲೇ ಧಾರವಾಡ ಜಿಲ್ಲೆಯಲ್ಲಿ 2.42 ಲಕ್ಷ ರೈತರು ನೋಂದಾಯಿಸಿಕೊಂಡಿದ್ದು, ಅದರಲ್ಲಿ 1.66 ಲಕ್ಷ ರೈತರು ಭೂ ಹಿಡುವಳಿಗಳನ್ನು ಹೊಂದಿರುತ್ತಾರೆ. ಜಿಲ್ಲೆಯಲ್ಲಿನ ಎಲ್ಲಾ ಭೂಹಿಡುವಳಿ ಹೊಂದಿರುವ ರೈತರನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸುವುದು ಮತ್ತು ಫ್ರೂಟ್ಸ್ ನೋಂದಣಿ ಸಂಖ್ಯೆ (ಎಫ್‍ಐಡಿ) ಗಳಿಗೆ ರೈತರ ಎಲ್ಲಾ ಭೂ ಹಿಡುವಳಿಗಳನ್ನು ಜೋಡಣೆ ಮಾಡುವುದು ಅವಶ್ಯವಿರುತ್ತದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ ಫ್ರೂಟ್ಸ್ (State…
