ರಾಮದುರ್ಗ ಪಟ್ಟಣದಲ್ಲಿ ವಿಜಯ ಸೇನಾ ಸಮಿತಿ ವತಿಯಿಂದ ವಿಶೇಷವಾಗಿ ರಕ್ಷಾ ಸಂಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಗಣೇಶ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಸಹೋದರ–ಸಹೋದರಿಯರ ಬಾಂಧವ್ಯವನ್ನು ಸಾರುವ ರಕ್ಷಾ ಸಂಸ್ಕಾರ ನೆರವೇರಿಸಲಾಯಿತು. ಸಹೋದರಿಯರು ಮೊದಲು ಸಹೋದರರ ಹಣೆಗೆ ಕುಂಕುಮದ ತಿಲಕವಿಟ್ಟು, ದೀಪದಿಂದ ಆರತಿ ಬೆಳಗಿ ಶುಭ ಹಾರೈಸಿದರು. ಬಳಿಕ ಸಹೋದರನ ಬಲಗೈ ಮಣಿಕಟ್ಟಿಗೆ ಪವಿತ್ರವಾದ ರಾಖಿಯನ್ನು ಕಟ್ಟಿ ಸಹೋದರತ್ವದ ಸಂಕೇತವನ್ನು ಮೆರೆದರು. ರಕ್ಷಾ ಸಂಸ್ಕಾರವು ಕೇವಲ ರಕ್ತಸಂಬಂಧಕ್ಕೆ ಸೀಮಿತವಲ್ಲ. ಸಮಾಜದಲ್ಲಿ ಪರಸ್ಪರ ಗೌರವ, ಪ್ರೀತಿ, ಸಹೋದರತ್ವ ಮತ್ತು ಸಾಮರಸ್ಯವನ್ನು ಬೆಳೆಸುವ ಸಾಮಾಜಿಕ ಸಂಸ್ಕಾರವಾಗಿದೆ. ವಿಜಯ ಸೇನಾ ಸಮಿತಿ ವತಿಯಿಂದ…
