BREAKING NEWS

ಬೆಳಗಾವಿ ಕಪ್ 2026′ ಟೈಕ್ವಾಂಡೋ ಸ್ಪರ್ಧೆಯಲ್ಲಿ ಶಾಲೆಯ ವಿದ್ಯಾರ್ಥಿಗಳು 18 ಪದಕಗಳನ್ನು ಗೆಲ್ಲುವ ಮೂಲಕ ಭರ್ಜರಿ ಯಶಸ್ಸು ಸಾಧಿಸಿದೆ.

ದಕ್ಷಿಣ ಮಹಾರಾಷ್ಟ್ರ ಶಿಕ್ಷಣ ಮಂಡಳಿಯ ಜ್ಯೋತಿ ಸೆಂಟ್ರಲ್ ಸ್ಕೂಲ್, ಕ್ಯಾಂಪ್ ಬೆಳಗಾವಿಟೈಕ್ವಾಂಡೋ ಸಮರಕಲೆಯಲ್ಲಿ 18 ಪದಕಗಳನ್ನು ಗೆಲ್ಲುವ ಮೂಲಕ ಭರ್ಜರಿ ಯಶಸ್ಸು ಸಾಧಿಸಿದೆ. ​’ಬೆಳಗಾವಿ ಕಪ್ 2026′ ಟೈಕ್ವಾಂಡೋ ಸ್ಪರ್ಧೆಯಲ್ಲಿ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ, ಸತತವಾಗಿ 5 ಚಿನ್ನ, 7 ಬೆಳ್ಳಿ ಹಾಗೂ 6 ಕಂಸದ (ಬ್ರಾಂಜ್) ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ‘ಕ್ಯೊರುಗಿ’ (Kyorugi) ಮತ್ತು ‘ಪೂಮ್ಸೆ’ (Poomsae) ವಿಭಾಗಗಳಲ್ಲಿ ವಿದ್ಯಾರ್ಥಿಗಳು ತಮ್ಮ ಕೌಶಲ್ಯ ಮೆರೆದು ಅದ್ಭುತವಾಗಿ ಪ್ರದರ್ಶನ ನೀಡಿದ್ದಾರೆ.​ಸಾಧಕರ ವಿವರ:​ಮಾಸ್ಟರ್ ಗೀತೇಶ ಜಾಗೃತ: U-8…

Read More

ಚೆನ್ನೈನಲ್ಲಿ ನಡೆಯಲಿರುವ ರಾಷ್ಟ್ರೀಯ ಸ್ಪರ್ಧೆಗೆ ಜ್ಯೋತಿ ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿಗಳು ಆಯ್ಕೆ

ರಾಜ್ಯಮಟ್ಟದ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ; ​ದಕ್ಷಿಣ ಮಹಾರಾಷ್ಟ್ರ ಶಿಕ್ಷಣ ಮಂಡಳಿಯ ಜ್ಯೋತಿ ಸೆಂಟ್ರಲ್ ಸ್ಕೂಲ್, ಕ್ಯಾಂಪ್, ಬೆಳಗಾವಿಯ ವಿದ್ಯಾರ್ಥಿಗಳು ರಾಜ್ಯಮಟ್ಟದ ಗಾಯನ ಸ್ಪರ್ಧೆಯಲ್ಲಿ ಅದ್ಭುತ ಸಾಧನೆ ಮಾಡುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ. ​ಭಾರತ ವಿಕಾಸ ಪರಿಷತ ವತಿಯಿಂದ ಸಿಂಧನೂರಿನಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಗಾಯನ ಸ್ಪರ್ಧೆಯಲ್ಲಿ ಶಾಲೆಯ ವಿದ್ಯಾರ್ಥಿಗಳು ಹಿಂದಿ ಗೀತೆ, ಸಂಸ್ಕೃತ ಗೀತೆ ಮತ್ತು ಜಾನಪದ ಗೀತೆ ವಿಭಾಗಗಳಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಈ ವಿದ್ಯಾರ್ಥಿಗಳ ತ್ರಿವಳಿ ತಂಡವು ತಮ್ಮ ಅತ್ಯುತ್ತಮ ಗಾಯನ ಕಲೆಯ…

Read More

ಮರೆಯಲಾಗದ ಮಹನೀಯರು” ಉಪನ್ಯಾಸ ಮಾಲಿಕೆಯ ಹತ್ತನೆಯ ತಿಂಗಳ ಕಾರ್ಯಕ್ರಮ

ಬೆಳಗಾವಿ ” ಕನ್ನಡ ನೆಲದ ಪುಲ್ಲೆನಗೆ ಪರಮ ಪಾವನ ತುಲಸಿ, ಕನ್ನಡದ ನೆಲದ ನೀರ್ವೊನಲೆನಗೆ ದೇವನದಿ ಎಂದು ಹಾಡಿದ ಕವಿ ಸಾಲಿ ರಾಮಚಂದ್ರರಾಯರ ಕನ್ನಡ ಪ್ರೇಮ ಅಸದೃಶವಾದುದಾಗಿತ್ತು. ಬಡತನದ ಬದುಕಿನಲ್ಲಿಯೂ ಸ್ವಾಭಿಮಾನದಿಂದ ಬದುಕಿದ ಅವರದು ಋಷಿಸದೃಶ ವ್ಯಕ್ತಿತ್ವವಾಗಿತ್ತು” ಎಂದು ಹಿರಿಯ ಲೇಖಕಿ ಡಾ. ವಿದ್ಯಾ ಕುಂದರಗಿ ಅವರಿಲ್ಲಿ ಹೇಳಿದರು. ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಹಾಗೂ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತುಗಳ ಆಶ್ರಯದಲ್ಲಿಂದು ನಡೆದ “ಮರೆಯಲಾಗದ ಮಹನೀಯರು” ಉಪನ್ಯಾಸ ಮಾಲಿಕೆಯ ಹತ್ತನೆಯ ತಿಂಗಳ ಕಾರ್ಯಕ್ರಮದಲ್ಲಿ ಖ್ಯಾತ…

Read More

ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಜಾಣಗೆರೆ ವೆಂಕಟರಾಮಯ್ಯ ಅಭ್ಯರ್ಥಿತನ

ಕನ್ನಡ ಭಾಷೆ,ನಾಡಿನ ಸಾಂಸ್ಕೃತಿಕ ಸ್ವಾಭಿಮಾನ ಹಾಗೂ ಕನ್ನಡ ಸಾಹಿತ್ಯದ ಸರ್ವಾಂಗೀಣ ಬೆಳವಣಿಗೆಯ ಮಹದಾಸೆಯಿಂದ  ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಶ್ರಯ ಮತ್ತು ಪ್ರೇರಣೆಯಲ್ಲಿ ೧೯೧೫ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಯಿತು. ಕನ್ನಡ ನಾಡಿನ ವಿವಿಧ ಭಾಗಗಳಲ್ಲಿ ಚದುರಿಹೋಗಿದ್ದ ಕನ್ನಡದ ಮನಸ್ಸುಗಳನ್ನು ಒಂದೇ ವೇದಿಕೆಯಡಿ ಒಗ್ಗೂಡಿಸಿ, ಕನ್ನಡ ಭಾಷೆ–ಸಾಹಿತ್ಯ–ಸಂಸ್ಕೃತಿಯ ಬೆಳವಣಿಗೆಗೆ ಶ್ರಮಿಸುವುದು ಪರಿಷತ್ತಿನ ಮೂಲ ಆಶಯವಾಗಿತ್ತು. ಒಂದು ಶತಮಾನಕ್ಕೂ ಹೆಚ್ಚು ಕಾಲ ಕನ್ನಡಿಗರ ಭಾವನೆಗಳಿಗೆ, ಆಶಯಗಳಿಗೆ ಹಾಗೂ ಭಾಷಾ–ಸಾಂಸ್ಕೃತಿಕ ಹಕ್ಕುಗಳಿಗೆ ಪ್ರಾತಿನಿಧಿಕ ಧ್ವನಿಯಾಗಿ ಪರಿಷತ್ತು ನಡೆದುಕೊಂಡು ಬಂದಿದೆ. ಕನ್ನಡ…

Read More

ಜಯ ಕರ್ನಾಟಕ ರಕ್ಷಣಾ ಸೇನೆಯ ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷರಾಗಿ ಈರಣ್ಣ ಹಡಪದ ಸಣ್ಣೂರ ಆಯ್ಕೆ

ಕಲಬುರಗಿ: ಜಯ ಕರ್ನಾಟಕ ರಕ್ಷಣಾ ಸೇನೆಯ ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷರಾಗಿ ಈರಣ್ಣ ಹಡಪದ ಸಣ್ಣೂರ ಅವರನ್ನು ನೇಮಕ ಮಾಡಲಾಗಿದೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಯ ಕರ್ನಾಟಕ ರಕ್ಷಣಾ ಸೇನೆಯ ರಾಜ್ಯಾಧ್ಯಕ್ಷರಾದ ಶ್ರೀ ಕೆ.ಸಿ. ರಾಜಪ್ಪ ಅವರು ಈರಣ್ಣ ಹಡಪದ ಸಣ್ಣೂರ ಅವರನ್ನು ಕಲ್ಯಾಣ ಕರ್ನಾಟಕ ವಿಭಾಗೀಯ ಅಧ್ಯಕ್ಷರಾಗಿ ನೇಮಕ ಮಾಡಿ ಆದೇಶ ಪತ್ರವನ್ನು ನೀಡಿದರು. ಈ ಸಂದರ್ಭದಲ್ಲಿ ಯಾದಗಿರಿ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಜಲ್ಲಪ್ಪಗೋಳು, ಕಲಬುರಗಿ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಎಸ್. ಕಿಳ್ಳಿ, ವಿಜಯಪುರ ಜಿಲ್ಲಾಧ್ಯಕ್ಷರಾದ ರಾಜು ಕೋಟ್ಯಾಳ,…

Read More

ರಾಮದುರ್ಗ ಆಯುರ್ವೇದ ಆಸ್ಪತ್ರೆಯಲ್ಲಿ ಉಚಿತ ಕೀಲು, ಮೂಳೆ ಹಾಗೂ ‘ವಯೋಮಿತ್ರ’ ಆರೋಗ್ಯ ಶಿಬಿರ ಯಶಸ್ವಿ

ಬೆಳಗಾವಿ ಜಿಲ್ಲೆ ​ರಾಮದುರ್ಗ ಪಟ್ಟಣದ ನಾರಾಯಣ ಪೇಠೆಯಲ್ಲಿರುವ ತಾಲ್ಲೂಕು ಆಯುರ್ವೇದ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಆಯುಷ್ ಅಭಿಯಾನದ (NAM) ಅಡಿಯಲ್ಲಿ ವಿಶೇಷ ಉಚಿತ ಆರೋಗ್ಯ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು.​ಈ ಶಿಬಿರದಲ್ಲಿ ಕೀಲು ಮತ್ತು ಮೂಳೆ ವ್ಯಾಧಿಗಳಿಂದ ಬಳಲುತ್ತಿರುವವರಿಗೆ ಹಾಗೂ ಹಿರಿಯ ನಾಗರಿಕರ ಆರೋಗ್ಯ ರಕ್ಷಣೆಗಾಗಿ ‘ವಯೋಮಿತ್ರ’ ಯೋಜನೆ ಅಡಿಯಲ್ಲಿ ಉಚಿತ ತಪಾಸಣೆ ಮತ್ತು ಚಿಕಿತ್ಸೆಯನ್ನು ನೀಡಲಾಯಿತು.​ಶಿಬಿರದ ಮುಖ್ಯಾಂಶಗಳು:​ಉಚಿತ ತಪಾಸಣೆ ಹಾಗೂ ಸಲಹೆ: ಮೂಳೆ ಸವೆತ, ಕೀಲು ನೋವು, ಬೆನ್ನು ನೋವು ಮತ್ತು ನರಗಳ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಆಸ್ಪತ್ರೆಯ…

Read More

ಬೆಳಗಾವಿ ಕರ್ನಾಟಕ ರಾಜ್ಯೋತ್ಸವ-2026 ಪೂರ್ವಭಾವಿ ಸಭೆ.

ಪ್ರತಿ ವರ್ಷದಂತೆ ಈ ಬಾರಿಯೂ ನ.1 ರಂದು ಕರ್ನಾಟಕ ರಾಜ್ಯೋತ್ಸವ ಆಚರಣೆಯನ್ನು ವಿಜೃಂಭಣೆ ಹಾಗೂ ಮಾದರಿ ರಾಜ್ಯೋತ್ಸವ ಆಚರಿಸಲು ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಿಳಿಸಿದರು. ಬೆಳಗಾವಿ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಗುರುವಾರ ಜರುಗಿದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ವಹಿಸಿ ಅವರು ಮಾತನಾಡಿದರು. ನ.1 ರಂದು ಕರ್ನಾಟಕ ರಾಜ್ಯೋತ್ಸವವನ್ನು ಬೆಳಗಾವಿಯಲ್ಲಿ ಅತೀ ವಿಜೃಂಭಣೆಯಿಂದ ಆಚರಿಸಲಾಗುವುದು. ರಾಜ್ಯೋತ್ಸವದ ಹಿನ್ನಲೆಯಲ್ಲಿ ಬೆಳಗಾವಿ ನಗರದಲ್ಲಿ ವಿದ್ಯುತ್ ದೀಪಾಲಂಕಾರಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ…

Read More

ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಅವರಿಗೆ ಹಡಪದ ಅಪ್ಪಣ್ಣ ಸಮಾಜದ ವಿವಿಧ ಬೇಡಿಕೆಗಳ ಕುರಿತು ಮನವಿ

ಕಲಬುರಗಿ: ನಗರದ ಸೂಪರ್ ಮಾರ್ಕೆಟ್‌ನಲ್ಲಿರುವ ಚೇಂಬರ್ ಆಫ್ ಕಾಮರ್ಸ್ ಕಚೇರಿಯಲ್ಲಿ ಹಿಂದುಳಿದ ವರ್ಗಗಳ (OBC) ಮೋರ್ಚಾದ ರಾಜ್ಯಾಧ್ಯಕ್ಷರು ಹಾಗೂ ಬಿಜೆಪಿ ಎಂ.ಎಲ್.ಸಿ. ರಘು ಕೌಟಿಲ್ಯ ಅವರನ್ನು ಕಲಬುರಗಿ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜದ ವತಿಯಿಂದ ಸನ್ಮಾನಿಸಿ, ಪುಷ್ಪಗುಚ್ಛ ನೀಡಿ ಅಭಿನಂದನೆ ಸಲ್ಲಿಸಲಾಯಿತು.ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಬೇಡಿಕೆಗಳು ಹಾಗೂ ಸಮಸ್ಯೆಗಳನ್ನು ಒಳಗೊಂಡ ಮನವಿ ಪತ್ರವನ್ನು ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಹಡಪದ ಅಪ್ಪಣ್ಣ ಸಮಾಜದ ಪ್ರತ್ಯೇಕ ಅಭಿವೃದ್ಧಿ ನಿಗಮದ ಕುರಿತು ಚರ್ಚಿಸಲಾಯಿತು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿ…

Read More

“ಸಮಾಧಾನ” ಅದ್ಭುತ ಕೃತಿ ಹೊರಹೊಮ್ಮಿದೆ : ಶಾನವಾಡ

ಬೆಳಗಾವಿ: ತನ್ಮಯ ಚಿಂತನ ಚಾವಡಿ ರಾಮತೀರ್ಥನಗರ ಶ್ರೀ ಮಹದೇವ ಕೆಂಪಿಗೌಡ್ರ ಅವರ ನಿವಾಸದಲ್ಲಿ ಹಮ್ಮಿಕೊಂಡಿದ್ದ ಹಿರಿಯ ಸಾಹಿತಿಗಳಾದ ಸ. ರಾ. ಸುಳಕೂಡೆ ಅವರು ರಚಿಸಿದ ‘ಸಮಾಧಾನ’ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ತನ್ಮಯ ಚಿಂತನ ಚಾವಡಿ ಸಂಚಾಲಕರಾದ ಅಶೋಕ ಉಳ್ಳಾಗಡ್ಡಿ ಅವರು ಪ್ರಾಥಮಿಕವಾಗಿ ಮಾತನಾಡಿ, ಕಳೆದ 5 ವರ್ಷಗಳಿಂದ ನಾವು ನಾಡು ನುಡಿ ಹಾಗೂ ಸಾಹಿತ್ಯ ಸೇವೆಯನ್ನು ಮಾಡುತ್ತಾ ಬಂದಿದ್ದೇವೆ ಎಂದು ಹೇಳಿದರು. ಹಿರಿಯ ಸಾಹಿತಿಗಳು ಹಾಗೂ ವಿದ್ವಾಂಸರಾದ ಯು.ಎನ್. ಸಂಗನಾಳಮಠ ಅವರು ಪುಸ್ತಕ ಬಿಡುಗಡೆ ಮಾಡಿ,…

Read More

ಪ್ರಕೃತಿಯನ್ನು ಪ್ರೀತಿಸಿದ ಜನಪದಕ್ಕೂ ಶರಣತತ್ವಕ್ಕೂ ಸಾಮ್ಯತೆಯಿದೆ : ಡಾ.ರಾಜೇಶ್ವರಿ ಹಿರೇಮಠ

ಬೆಳಗಾವಿ ವಚನ ಪಿತಾಮಹ ಡಾ.ಫ. ಗು. ಹಳಕಟ್ಟಿ ಭವನ ಮಹಾಂತೇಶ ನಗರ ಬೆಳಗಾವಿಯಲ್ಲಿ ಲಿಂಗಾಯತ ಸಂಘಟನೆಯಿಂದ ವಿಶ್ವದಾಖಲೆ ಪ್ರಶಸ್ತಿ ಪುರಸ್ಕೃತರಾದ ಡಾ.ರಾಜೇಶ್ವರಿ ಹಿರೇಮಠ ಅವರು ʼಜಾನಪದ ಸಿರಿʼ ಎಂಬ ವಿಷಯ ಕುರಿತು ಉಪನ್ಯಾಸ ಮಂಡಿಸಿದರು. ಸುರೇಶ ನರಗುoದ ಅವರ ಪ್ರಾಥ೯ನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೂರೆಯಿತು. ಆರಂಭದಲ್ಲಿ ಶoಕರ ಗುಡಸ, ಆನoದ ಕರಕಿ, ದ್ರಾಕ್ಷಾಯಣಿ ಪೂಜಾರ, ಜಯಶ್ರೀ ಚವಲಗಿ ವಚನ ವಿಶ್ಲೇಷನೆ ಮಾಡಿದರು. ಶಿವಕುಮಾರ ಅವರು ಮುಖ್ಯ ಅತಿಥಿಗಳ ಪರಿಚಯ ಭಾಷಣ ಮಾಡಿದರು. ಕಾರ್ಯಕ್ರಮದ ವಿಶೇಷ ವಿಶೇಷ ಅತಿಥಿಯಾಗಿ…

Read More