ಬೆಳಗಾವಿ ನಗರದ ಖಡೇ ಬಜಾರಿನಲ್ಲಿ ಗ್ಯಾಸ ಸಿಲಿಂಡರ್ ಸ್ಪೋಟ ಯಾವುದೇ ಪ್ರಾಣ ಹಾನಿ ಇಲ್ಲ.
ಬೆಳಗಾವಿ : ಗ್ಯಾಸ ಅಂಗಡಿಯಲ್ಲಿ ಸುಮಾರು 7 ಗ್ಯಾಸ ಸ್ಪೋಟಗೊಂಡು ಬೆಂಕಿ ಅವಗಡ ಸಂಭವಿಸಿದ ಘಟನೆ ನಗರದ ಖಡೇ ಬಜಾರಿನಲ್ಲಿ ನಡೆದಿದೆ. ಖಡೇ ಬಜಾರದ ಬಳಿ ಇರುವ ಪೈ ಶೋರೂಮ್ ಪಕ್ಕದಲ್ಲಿರುವ ಅಂಗಡಿಯಲ್ಲಿ ಈ ಘಟನೆ ನಡೆದು ಕೆಲಹೊತ್ತು ಸುತ್ತಮುತ್ತಲಿನ ಜನ ಅತಂಕಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿ ಘಟನೆ ವಿವರಿಸಿದ ಹಿನ್ನಲೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಾರ್ಕೆಟ್ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಘಟನೆಯಲ್ಲಿ ಯಾವುದೇ…
