ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕನ್ನಡ ಪರ ಸಂಘಟನೆಗಳಿಂದ ಮುರುಗೋಡ ವನ್ನು ತಾಲೂಕ ಕೇಂದ್ರವನ್ನಾಗಿ ಮಾಡಬೇಕೆಂದು ಪ್ರತಿಭಟಿಸಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕು ಮುರಗೋಡ ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕನ್ನಡ ಪರ ಕಾರ್ಮಿಕ ಪರ ದಲಿತಪರ ಹಾಗೂ ರೈತ ಪರ ಸಂಘಟನೆಗಳು ಮತ್ತು ಪರಮಪೂಜ್ಯ ನೀಲಕಂಠ ಶ್ರೀಗಳ ಹಾಗೂ ಪಟ್ಟಣದ ಗುರು ಹಿರಿಯರ ಜೊತೆಗೂಡಿ ಮುರಗೋಡ ಪಟ್ಟಣದ ಹೊಸ ನಿಲ್ದಾಣ ಹತ್ತಿರ ರಸ್ತೆ ಬಂದು ಮಾಡಿ ಮುರುಗೋಡ ವನ್ನು ತಾಲೂಕ ಕೇಂದ್ರವನ್ನಾಗಿ ಮಾಡಬೇಕೆಂದು ಪ್ರತಿಭಟಿಸಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು ಕಳೆದ 42 ವರ್ಷಗಳಿಂದ ತಾಲೂಕು ರಚನೆ ಹೋರಾಟ ಆರಂಭಿಸಿ ಹಲವಾರು…
