ಹಕ್ಕಿಪಿಕ್ಕಿ ಕಾಲೋನಿಯ ಗರ್ಭೀಣಿ ಸ್ತ್ರೀಯರಿಗೆ ಮತ್ತು ಮಕ್ಕಳಿಗೆ ಮೊಟ್ಟೆ,ಊಟ ವಿತರಿಸದ ಅಂಗನವಾಡಿ ಕಾರ್ಯಕರ್ತೆ ವಜಾ ಗೊಳಿಸಲು ಕ್ರಮ
ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಹಕ್ಕಿಪಿಕ್ಕಿ ಅಂಗನವಾಡಿ ಕೇಂದ್ರಕ್ಕೆ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌದರಿರವರು ಸೆ.11 ರಂದು ಅಧಿಕೃತ ಪ್ರವಾಸದಲ್ಲಿ ಭೇಟಿ ನೀಡಿದ ಸಂದರ್ಭದಲ್ಲಿ ಅಂಗನವಾಡಿಯಿAದ “ಸಮಗ್ರ ಶಿಶು ಅಭಿವೃದ್ಧಿ ಯೋಜನೆ” ಯಡಿಯಲ್ಲಿ ಗರ್ಭೀಣಿ ಸ್ತ್ರೀಯರಿಗೆ ಹಾಗೂ ಮಕ್ಕಳಿಗೆ ಮೊಟ್ಟೆ, ಬಿಸಿಊಟ ವಿತರಿಸದೇ ಇರುವುದು ಕಂಡು ಬಂದಿರುತ್ತದೆ. ಮೊಟ್ಟೆ ವಿತರಣೆ ಬಗ್ಗೆ ಅಧ್ಯಕ್ಷರು ಅಂಗನವಾಡಿ ಕಾರ್ಯಕರ್ತೆಯಾದ ಆಲುವೇಲಮ್ಮ ರವರನ್ನು ಪ್ರಶ್ನಿಸಿರುತ್ತಾರೆ, ಮಹಿಳೆಯರು ಪೌಷ್ಟಿಕಾಂಶದ ಪದಾರ್ಥಗಳನ್ನು ವಿತರಿಸದೇ ಇರುವುದನ್ನು ಆಯೋಗದ ಅಧ್ಯಕ್ಷರ ಗಮನಕ್ಕೆ ತಂದಿರುತ್ತಾರೆ.ಈ…
