BREAKING NEWS

ಮಾಜಿ ಶಾಸಕ ಮಹದೇವಪ್ಪ ಯಾದವಾಡ ಅವರಿಗೆ ಜಿಲ್ಲಾ ಪಂಚಾಯಿತಿ ಭಾಗದಲ್ಲಿ ಪ್ರಚಾರಕ್ಕೆ ಬಿಡದ ಬಿಜೆಪಿ ಕಾರ್ಯಕರ್ತರು

ರಾಮದುರ್ಗ: ಹುಲಕುಂದ ಜಿಲ್ಲಾ ಪಂಚಾಯತ್ ಭಾಗದಲ್ಲಿ ಲೋಕಸಭಾ ಚುನಾವಣೆ ಪ್ರಚಾರಕ್ಕೆ ಬೆಳಗಾವಿ ಲೋಕಸಭಾ ಬಿಜೆಪಿ ಅಭ್ಯರ್ಥಿಯಾದ ಜಗದೀಶ್ ಶೆಟ್ಟರ ಜೋತೆಗೆ ಮಾಜಿ ಶಾಸಕ,ಮಹಾದೇವಪ್ಪ ಯಾದವಾಡ ಚುನಾವಣೆ ಪ್ರಚಾರಕ್ಕೆ ತರಳಿದರು, ಈ ಸಂದರ್ಭದಲ್ಲಿ ರಾಮದುರ್ಗ ತಾಲೂಕಿನ ಹುಲಕುಂದ ಜಿಲ್ಲಾ ಪಂಚಾಯತ್ ಭಾಗದ ಬಿಜೆಪಿ ಕಾರ್ಯಕರ್ತರು ನಾವು ಯಾರ ಪರವಾಗಿಯೂ ಇಲ್ಲ ಕೇವಲ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರಿಗೆ ಮಾತ್ರ ವಿರೋಧ ಮಾಡುತ್ತಿದ್ದೇವೆ ಎಂದು ಹೇಳಿ ಪ್ರಚಾರಕ್ಕೆ ಬಿಡದ ಬಿಜೆಪಿ ಕಾರ್ಯಕರ್ತರು ಗಾಡಿ ತಡೆದು ಲೋಕಸಭಾ ಚುನಾವಣೆ ಪ್ರಚಾರ ಬಿಜೆಪಿ…

Read More

ಗದಗದಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ 8 ಜನರ ಬಂಧನ

ಗದಗದಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಘಟನೆ ಸಂಬಂಧ 8 ಜನ ಆರೋಪಿಗಳನ್ನು 48 ಗಂಟೆಗಳ ಒಳಗಾಗಿ ಬಂಧಿಸಿದ್ದೇವೆ ಎಂದು ಗದಗ ಉತ್ತರ ವಲಯ ಐಜಿಪಿ ವಿಕಾಸ್ ಕುಮಾರ್ ತಿಳಿಸಿದ್ದಾರೆ. ಗದಗ ಎಸ್ ಪಿ ಬಿಎಸ್ ನೇಮಗೌಡ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ.ಘಟನೆ ಸಂಬಂಧ ಪ್ರಮುಖ ಆರೋಪಿ ವಿನಾಯಕ್ ಬಾಕಳೆ ಸೇರಿದಂತೆ, ಇತರ ಆರೋಪಿಗಳಾದ ಫೈರೋಜ್ ಖಾಜಿ, ಜಿಶಾನ್ ಖಾಜಿ, ಮೀರಜ್ ಮೂಲದ ಸಾಹಿಲ್, ಸೋಹೆಲ್ ಖಾಜಿ, ಸುಲ್ತಾನ್ ಶೇಖ್,…

Read More

ಒಂದೇ ಕುಟುಂಬದ ಆರು ಮಂದಿ ನದಿಯಲ್ಲಿ ಮುಳುಗಿ ಸಾವು.

ಮಕ್ಕಳು ಸೇರಿ ಒಂದೇ ಕುಟುಂಬದ ಆರು ಪ್ರವಾಸಿಗರು‌‌ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವಂತಹ ಹೃದಯ ವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಅಕ್ವಾಡ ಗ್ರಾಮದ ಬಳಿ ಕಾಳಿ ನದಿಯಲ್ಲಿ ನಡೆದಿದೆ.40 ವರ್ಷದ ನಝೀರ್ ಅಹ್ಮದ್, 38 ವರ್ಷದ ರೇಷಾ ಉನ್ನಿಸಾ, 15 ವರ್ಷದ ಇಫ್ರಾ‌ ಅಹ್ಮದ್, 12 ವರ್ಷದ ಅಬೀದ್ ಅಹ್ಮದ್, 10 ವರ್ಷದ ಅಲ್ಛೀಯಾ ಅಹ್ಮದ್ ಮತ್ತು 6 ವರ್ಷದ ಮೋಹಿನ್ ಮೃತರು. ಹುಬ್ಬಳ್ಳಿಯ ಈಶ್ವರ ನಗರದ ನಿವಾಸಿಗಳು. ಪ್ರವಾಸಕ್ಕೆ ತೆರಳಿದ್ದಾಗ ಅಹ್ಮದ್ ಕುಟುಂಬ…

Read More

ಡಾ. ಬಿ. ಆರ್ ಅಂಬೇಡ್ಕರ್ ರವರ ಚರಿತ್ರೆ.

ಡಾ ಬಿ. ಆರ್ ಅಂಬೇಡ್ಕರ್ ರವರು 14ನೇ ಏಪ್ರಿಲ್ 1891 ಮಧ್ಯಪ್ರದೇಶದ ಮಾಹೋ ಎಂಬ ಮಿಲಿಟರಿ ಕ್ಯಾಂಪ್ ನಲ್ಲಿ ಹುಟ್ಟಿದರು. ಅಂಬೇಡ್ಕರ್ ರವರು ಮೂಲತಃ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಖೇಡಾ ತಾಲ್ಲೂಕಿನ ಅಂಬೆವಾಡ ಗ್ರಾಮದವರು. ಇವರು ಮಹಾರ‍ಜಾತಿಯಲ್ಲಿ ಹುಟ್ಟಿದರು. ಈ ಜಾತಿಯವರು ಹೆಚ್ಚಿನ ಜನ ಬ್ರಿಟಿಷ್ ಸರ್ಕಾರದ ಮಿಲಿಟರಿ ಸೇವೆಯಲ್ಲಿ ಉದ್ಯೋಗಕ್ಕಾಗಿ ಸೇರುತ್ತಿದ್ದರು. ಇವರ ಅಜ್ಜ ಮಾಲೋಜಿ ಸಕ್ವಾಲ್, ಇವರು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಬೋಂಬೆ ಸೇನೆಯಲ್ಲಿ ಸೇರಿದರು, ಹವಾಲ್ದಾರರಾಗಿ ನಿವೃತ್ತಿ ಹೊಂದಿದ್ದರು. ಇವರು ಆ…

Read More

ಮೃತ ನೇಹಾ ಹಿರೇಮಠ ಕುಟುಂಬಕ್ಕೆ ಸಾಂತ್ವನ ಹೇಳಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್…!!

ಹುಬ್ಬಳ್ಳಿಯ ಬಿಡ್ನಾಳದ ನೇಹಾ ಹಿರೇಮಠ ಅವರ ನಿವಾಸಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಶನಿವಾರ ಭೇಟಿ ನೀಡಿದರು. ನೇಹಾ ಹಿರೇಮಠ ತಂದೆ ನಿರಂಜನ್ ಹಾಗೂ ಕುಟುಂಬ ಸದಸ್ಯರಿಗೆ ಸಚಿವರು ಸಾಂತ್ವನ ಹೇಳಿದರು.ಬಳಿಕ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ನೇಹಾ ಕುಟುಂಬಸ್ಥರ ದುಃಖದಲ್ಲಿ ನಾನು ಭಾಗಿಯಾಗಿದ್ದೇನೆ. ನೇಹಾ ಪಾಲಕರು ತಮ್ಮ ದುಃಖವನ್ನು ಹಂಚಿಕೊಂಡಿದ್ದಾರೆ‌. ದೊಡ್ಡ ಸಮಾಜ ನಾವೆಲ್ಲಾ ಜೊತೆಯಲ್ಲಿ ಇರ್ತೀವಿ ಅಂತ ಹೇಳಿದ್ದೇನೆ. ನಿಷ್ಪಕ್ಷಪಾತವಾಗಿ ತನಿಖೆ ನಡೆಯಲಿದೆ ಎಂದು ಸಚಿವರು ಹೇಳಿದರು ‌ಇಂಥ ಘಟನೆ…

Read More

ನೂತನ ಶಿಶು ಪಾಲನ ಕೇಂದ್ರವನ್ನು ಗ್ರಾ ಪಂ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸಿ.ಕೆ.ಕೊಪ್ಪದ ಚಾಲನೆ ನೀಡಿದರು

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಗೂಡಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂತನ ಶಿಶುಪಾಲ ಕೇಂದ್ರವನ್ನು ಮಕ್ಕಳಿಗೆ ಹಾಲನ್ನು ವಿತ್ತರಿಸುವ ಮೂಲಕ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಶ್ರೀಮತಿ ಸಿ.ಕೆ.ಕೊಪ್ಪದ ಅವರು ಚಾಲನೆ ನೀಡಿ ಮಾತನಾಡಿದರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಉದ್ಯೋಗ ಕಾರ್ಡ್ ಹೊಂದಿರುವ ಕುಟುಂಬಗಳ 7 ತಿಂಗಳಿಂದ 3 ವರ್ಷದೊಳಗಿನ ಮಕ್ಕಳಿಗೆ ಶಿಶು ಪಾಲನಾ ಕೇಂದ್ರದಲ್ಲಿ ಸುರಕ್ಷತೆ, ಶಾಲಾ ಪೂರ್ವ ಶಿಕ್ಷಣ, ಪೌಷ್ಟಿಕ ಆಹಾರ ಸೌಲಭ್ಯ ಒದಗಿಸಲು ನಿರ್ಧರಿಸಲಾಗಿದೆ. ಇದರಿಂದ…

Read More

ಬೈಕ್ ಮತ್ತು ಟಾಟಾ ಗುಡ್ಸ್ ವಾಹನ ಮಧ್ಯ ಭೀಕರ ರಸ್ತೆ ಅಪಘಾತ ಇಬ್ಬರ ಬೈಕ್ ಸವರಾರು ಸ್ಥಳದಲ್ಲಿ ಸಾವು.

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಬಟಕುರ್ಕಿ ಹತ್ತಿರ ಬೈಕ್ ಮತ್ತು ಟಾಟಾ ಗುಡ್ಸ್ ವಾಹನ ಮಧ್ಯ ಭೀಕರ ರಸ್ತೆ ಅಪಘಾತ ಇಬ್ಬರ ಬೈಕ್ ಸವರಾರು ಸ್ಥಳದಲ್ಲಿ ಸಾವು. ಶಿವಾನಂದ ಹೊಳೆಬಸಪ್ಪ ಖಾನಾಪುರ ಸಾಕಿನ ಆನೆಗುದ್ದಿ ಮತ್ತು,ಮಲ್ಲಪ್ಪ ಹಣಮಂತ ಕೌಜಲಗಿ ಸಾಕಿನ ಆನೆಗುದ್ದಿ ಈವರಿಬ್ಬರು ಆನೆಗುದ್ದಿಯಿಂದ ಬಜಾಜ್ ಡಿಸ್ಕವರಿ ಬೈಕನಲ್ಲಿ ವಿದ್ಯಾರ್ಥಿನಿ, ಸೌಂದರ್ಯ ಮಲ್ಲಪ್ಪ ಕೌಜಲಗಿ ಈವರಿಗೆ CET ಪರೀಕ್ಷೆಗೆಯಂದು ಕರೆದುಕೊಂಡು ಲೋಕಾಪುರಕ್ಕೆ ಹೋಗುವ ಸಂಧರ್ಭದಲ್ಲಿ ಬಟಕುರ್ಕಿ ಹತ್ತಿರ ಟಾಟಾ ಗುಡ್ಸ್ ವಾಹನ ಬೈಕಿಗೆ ಡಿಕ್ಕಿಯಾಗಿ ಭೀಕರ ರಸ್ತೆ…

Read More

ಕರಿಸಿದ್ದೇಶ್ವರ ಹಾಗೂ ಬೀರಲಿಂಗೇಶ್ವರ ದೇವರ ಪಲ್ಲಕ್ಕಿ ಉತ್ಸವ

ರಾಮದುರ್ಗ ಪಟ್ಟಣದ ಈಟಿ ಓನೇ ಇಂದ ಕರಿಸಿದ್ದೇಶ್ವರ ಹಾಗೂ ಬೀರಲಿಂಗೇಶ್ವರ ದೇವರ ಶುಕ್ರವಾರ ಪಲ್ಲಕ್ಕಿ ಉತ್ಸವ ಅದ್ಧೂರಿಯಾಗಿ ಆಚರಿಸಲಾಯಿತು. ರಾಮದುರ್ಗ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಪಲ್ಲಕ್ಕಿ ಉತ್ಸವ ಮೆರವಣಿಗೆ ಡೊಳ್ಳು ಕುಣಿತ ಸೇರಿದವು ಕುರುಬ ಸಮುದಾಯದ ಆರಾಧ್ಯ ದೇವರಾದ ಈ ಕರಿಸಿದ್ದೇಶ್ವರ ಹಾಗೂ ಬೀರಲಿಂಗೇಶ್ವರ ದೇವರಿಗೆ ಲಿಂಗಾಯತ, ವಾಲ್ಮೀಕಿ ಸೇರಿದಂತೆ ಎಲ್ಲ ವರ್ಗದ ಜನರು ನಡೆದುಕೊಳ್ಳುತ್ತಾರೆ. ಜಾತ್ರಾ ಮಹೋತ್ಸವ ಪ್ರಯುಕ್ತ ಸಂಪ್ರದಾಯದಂತೆ ಭಜನಾ ಸೇರಿದಂತೆ ವಿವಿಧ ರೀತಿಯ ಸಾಂಸ್ಕøತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನೆರೆವೇರಿದವು

Read More

ಇಡಗಲ್ಲ ಗ್ರಾಮದಲ್ಲಿ ಲೋಕಸಭೆ ಚುನಾವಣೆಯ ಪ್ರಚಾರ ಸಭೆ

ರಾಮದುರ್ಗ ತಾಲೂಕಿನ ಇಡಗಲ್ಲ ಗ್ರಾಮದಲ್ಲಿ ವಿಧಾನಸಭಾ ಕ್ಷೇತ್ರದ ಲೋಕಸಭೆ ಚುನಾವಣೆಯ ಪ್ರಚಾರ ಕೈಗೊಂಡು ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಪರ ಪ್ರಚಾರ ಕೈಗೊಂಡು, ಮತ ಯಾಚಿಸಿದರು ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಪ್ರದೀಪ್ ಪಟ್ಟಣ, ಮಂಜುಳಾ ದೇವರೆಡ್ಡಿ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಪಾರ್ವತೆವ್ವ ಮೇಟಿ, ಸುರೇಶ್ ಪೂಜೇರ್ ಬಿ.ಎಸ್.ಪಾಟೀಲ ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು

Read More