ಮೋದಿ ಗೆಲುವಿಗೆ ಶ್ರಮಿಸುವುದಾಗಿ ಜಗದೀಶ ಶೆಟ್ಟರ್ ಪ್ರತಿಜ್ಞೆ.
ಬೆಳಗಾವಿ : ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಸ್ಥಳೀಯ ಮುಖಂಡರು ಮತ್ತು ಬೆಂಬಲಿಗರು ಆತ್ಮೀಯವಾಗಿ ಸ್ವಾಗತಿಸಿದಕ್ಕೆ ಕೃತಜ್ಞತೆ ಸಲ್ಲಿಸಿ, ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗೆ ತಮ್ಮ ಬದ್ಧತೆಯನ್ನು ಇರುತ್ತದೆ ಎಂದು ದೃಢಪಡಿಸಿದರು. ಬೆಳಗಾವಿಗೆ ಚಿರಪರಿಚಿತರಾಗಿರುವ ನಾನು ಜಿಲ್ಲೆಯ ಎಲ್ಲಾ ಪ್ರಮುಖ ಬಿಜೆಪಿಯ ನಾಯಕರುಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕೋವಿಡ್ -19, ಪ್ರವಾಹದಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಸಮರ್ಪಕವಾದ ಸೇವೆ ಸಲ್ಲಿಸುವ ಅವಕಾಶ ಭಾಗ್ಯ ನನ್ನದಾಗಿತ್ತು ಎಂದರು. ಬೆಳಗಾವಿಗೆ ತಮ್ಮ ನಿಷ್ಠೆಯನ್ನು ಪ್ರತಿಪಾದಿಸಿದ ಜಗದೀಶ ಶೆಟ್ಟರ ನಗರದಲ್ಲಿ ಮನೆ ನಿರ್ಮಿಸಲು ವಾಗ್ದಾನ ಮಾಡಿದರಲ್ಲದೆ…
