ಕೂಡ್ಲಿಗಿ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸ್ ರು – ಇಬ್ಬರ ಬಂಧನ ಸಾಮಾಗ್ರಿ ಜಪ್ತಿ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಈಚಲಬೊಮ್ಮನಹಳ್ಳಿ ಹೊರವಲಯದಲ್ಲಿರುವ, ಶ್ರೀ ಉಡುಸಲಮ್ಮ ದೇವಿ ದೇವಸ್ಥಾನ ಕಳ್ಳತನ ಪ್ರಕರಣವನ್ನು. ಕೂಡ್ಲಿಗಿ ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮತ್ತು ಬಂಧಿತರು ಕಳ್ಳತನ ಮಾಡಿದ್ದ, ಒಟ್ಟು 1.95.839ರೂ ಬೆಲೆಯ ಸಾಮಾಗ್ರಿಗಳನ್ನು ಜಪ್ತಿ ಮಾಡಿದ್ದಾರೆ. ಸಂಬಂಧಿಸಿದಂತೆ ಪೊಲೀಸ್ ಠಾಣಾಧಿಕಾರಿ ಸಿಪಿಐ ಸುರೇಶ ತಳವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಳ್ಳತನ ಮಾಡಿದ್ದ ಹೂವಿಹಡಗಲಿ ತಾಲೂಕಿನ, ಕೆಂಚಮಲ್ಲನಹಳ್ಳಿ ಯ ಹಡಪದ ವೀರೇಶ. ಕೂಡ್ಲಿಗಿ ತಾಲೂಕಿನ ಪಾಲಯ್ಯನಕೋಟೆಯ, ಹನುಮಂತಪ್ಪ ಎಂದು ಗುರುತಿಸಲಾಗಿದೆ. ಕಳ್ಳತನ ಪ್ರಕರಣ ನ 23…
