ಅರಣ್ಯ ಇಲಾಖೆಯ ಸಿಬ್ಬಂದಿಗೆ ನಿರ್ಮಿಸಿದ ನೂತನ ವಸತಿ ಗೃಹಗಳ ಕಟ್ಟಡವನ್ನು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಉದ್ಘಾಟಿಸಿದರು.
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಎಂಎಲ್‌ಬಿಸಿ ಅರಣ್ಯ ಇಲಾಖೆಯ ಆವರಣದಲ್ಲಿ ವಲಯ ಅರಣ್ಯ ಅಧಿಕಾರಿಗಳ ಕಛೇರಿ, ಪ್ರಾದೇಶಿಕ ಅರಣ್ಯ ವಲಯ ರಾಮದುರ್ಗ ಸಿಬ್ಬಂದಿಗಳಿಗೆೆ ನೂತನವಾಗಿ ನಿರ್ಮಿಸಿದ ವನ ಸಮೃದ್ಧಿ ನಿವಾಸ ಕಟ್ಟಡವನ್ನು ವಿಧಾನಸಭೆ ಮುಖ್ಯ ಸಚೇತಕ ಹಾಗೂ ಶಾಸಕ ಅಶೋಕ ಪಟ್ಟಣ ಉದ್ಘಾಟಿಸಿ ಅವರು ಮಾತನಾಡಿದರು.ವಿನಾಕಾರಣ ಅರಣ್ಯ ಪ್ರದೇಶಗಳು ಹಾಳಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ ಅವರು, ಪರಿಸರದ ಬಗೆ ವಿಶೇಷ ಕಾಳಜಿ ವಹಿಸಿ, ಈ ಹಿಂದೆ ಕಡಿಯುತ್ತಿರುವ ಮರಗಳನ್ನು ತಡೆದಿದ್ದೇನೆ. ಅರಣ್ಯ ನಾಶದಿಂದ ವಣ್ಯ ಜೀವಿಗಳು ನಾಡು…
