ಡಿ.4ಕ್ಕೆ ಉತ್ತರ ಕರ್ನಾಟಕದ ಧರ್ಮಸ್ಥಳ ಖ್ಯಾತಿಯ ಗೊಡಚಿ ವೀರಭದ್ರೇಶ್ವರ ಜಾತ್ರೆ
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಗೊಡಚಿ ಗ್ರಾಮದ ಉತ್ತರ ಕರ್ನಾಟಕದ ಧರ್ಮಸ್ಥಳದ ಎಂಬ ಖ್ಯಾತಿ ಹೊಂದಿರುವ ಗೊಡಚಿ ಕ್ಷೇತ್ರದ ಶ್ರೀ ವೀರಭದ್ರೇಶ್ವರ ರಥೋತ್ಸವವು ಡಿ.4 ರಂದು ಹೊಸ್ತಿಲ ಹುಣ್ಣಿಮೆ ದಿನ ಸಂಜೆ 5-00 ಗಂಟೆಗೆ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ. ಪ್ರತಿವರ್ಷ ಜಾತ್ರೆಯ ಪ್ರಾರಂಭದ ಅಂಗವಾಗಿ ಬುಧವಾರ ದಿನಾಂಕ 26-11-2025 ರಂದು ಗೊಡಚಿ ಶ್ರೀವೀರಭದ್ರೇಶ್ವರ ದೇವಸ್ಥಾನದಿಂದ ವೀರಗಾಸೆ ವೀರಪುರವಂತರ ಸಮೇತವಾಗಿ ಪಲ್ಲಕ್ಕಿ ಉತ್ಸವವು ತೊರಗಲ್ ಶ್ರೀ ಭೂತನಾಥ ದೇವಸ್ಥಾನಕ್ಕೆ ಹೋಗಿ ಅಲ್ಲಿಯ ಜಾತ್ರೆಯ ಕಾರ್ಯಕ್ರಮಗಳನ್ನು ಮುಗಿಸಿ ಗುರುವಾರ ದಿನಾಂಕ…
