ರಾಮದುರ್ಗ ಟೌನ್ ಅಂಚೆ ಕಚೇರಿಯನ್ನು ವಿಲೀನಗೊಳಿಸದಂತೆ ವಿಜಯ ಸೇನಾ ಸಮಿತಿ ಹಾಗೂ ಸಾಮಾಜಿಕ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದರು.
ರಾಮದುರ್ಗ ಪಟ್ಟಣದ ಪುರಸಭೆ ಮುಂದೆ ಇರುವ ವಾಣಿಜ್ಯ ಮಲ್ಲಿಗೆಗಳ ನಂ.5 ರಲ್ಲಿ ಇದ್ದಂತಹ ರಾಮದುರ್ಗ ಟೌನ್ (ಪೋಸ್ಟ ಆಫೀಸ್ ) ಅಂಚೆ ಕಚೇರಿಯನ್ನು ವಿಲೀನಗೊಳಿಸದಂತೆ ಸಾರ್ವಜನಿಕರು ಮನವಿಯನ್ನು ಸಲ್ಲಿಸಿದರು ಕೂಡ ಅಧಿಕಾರಿಗಳು ಮನವಿಗೆ ಸ್ಪಂದನೆ ನೀಡದೆ ತಮ್ಮ ಕೆಲಸವನ್ನು ಮುಂದುವರಿಸಿ ರಾಮದುರ್ಗ ಟೌನ್ ಪೋಸ್ಟ್ ಆಫೀಸ್ ಅನ್ನು ರಾಮದುರ್ಗ ಪ್ರಧಾನ ಅಂಚೆ ಕಚೇರಿಗೆ ಸೇರ್ಪಡೆ ಮಾಡಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದು ಇದನ್ನು ಗಮನಿಸಿ ವಿಜಯ ಸೇನಾ ಸಮಿತಿಯ ಸಂಸ್ಥಾಪಕರಾದ ವಿಜಯ ನಾಯಕ ಹಾಗೂ ಸಾಮಾಜಿಕ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದರು….
