ಮಹಿಳೆಯರ ಉಚಿತ ಪ್ರಯಾಣಕ್ಕೆ ಮೊಬೈಲ್‍ದಲ್ಲಿ ಆಧಾರ ಕಾರ್ಡ ಫೋಟೊ, ಪಿಡಿಎಫ್ ಪ್ರತಿ ಇದ್ದರೂ ಸಾಕು; ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ಪಾಟೀಲ
ಸಾರಿಗೆ ಇಲಾಖೆ ಅಧಿಕಾರಿಗಳು ಆಧಾರ್ ಕಾರ್ಡ್‍ನ ಭೌತಿಕ ಪ್ರತಿಯನ್ನು ಕೊಂಡೊಯ್ಯಬೇಕಂತಿಲ್ಲ. ಮಹಿಳೆಯರ ಮೊಬೈಲ್ ಮೊಬೈಲದಲ್ಲಿ ಆಧಾರ್‍ನ ಡಿಜಿಟಲ್ ನಕಲು ಅಥವಾ ಆಧಾರ್ ವೆಬ್‍ಸೈಟ್‍ನಿಂದ ಡೌನ್‍ಲೋಡ್ ಮಾಡಿದ ಆಧಾರ್ ಪಿಡಿಎಫ್‍ನ್ನು ಕಂಡಕ್ಟರ್‍ಗೆ ತೋರಿಸಬಹುದು. ಇದು ಮಹಿಳೆಯರಿಗೆ ಮತ್ತಷ್ಟು ಅನುಕೂಲವನ್ನು ಕಲ್ಪಿಸಿಕೊಡಲಾಗುತ್ತದೆ ಎಂದು ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ಪಾಟೀಲ ಅವರು ಹೇಳಿದರು. ಧಾರವಾಡ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಮಹಿಳೆಯರಿಗೆ ಉಚಿತ…
