ಲಿಂಗಾಯತ ಸಂಘಟನೆ ವತಿಯಿಂದ ಚಿಂತನ ಕಾರ್ಯಕ್ರಮ – ಸತಿಪತಿಯರ ಭಾಂದವ್ಯದಲ್ಲಿದೆ ಸಾಮಾಜಿಕ ಸಾಮರಸ್ಯ- ಸಾಹಿತಿ ಶ್ರೀಕಾಂತ ಶಾನವಾಡ.
ಸತಿಪತಿಯರಲ್ಲಿ ಅನ್ಯೋನ್ಯತೆ, ಸಾಮರಸ್ಯ ಭಾವನೆಯ ಬಾಂಧವ್ಯ, ಸಹಾನುಭೂತಿ, ಕುಟುಂಬದ ಕಳಕಳಿ ಇದ್ದರೆ ಅದು ಸಾಮಾಜಿಕ ಸಾಮರಸ್ಯಕ್ಕೆ ನಾಂದಿಯಾಗುತ್ತದೆ. ಆದಕಾರಣ ಸತಿಪತಿಯರ ಭಾವ ಬಂಧ ಅತಿ ಪ್ರಮುಖವಾಗಿದೆ ಎಂದು ಸಾಹಿತಿ ಶ್ರೀಕಾಂತ ಶಾನವಾಡ ರವಿವಾರ ದಿ. 22 ರಂದು ಬೆಳಗಾವಿ ನಗರದ ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆಯ ವತಿಯಿಂದ ಹಮ್ಮಿಕೊಳ್ಳಲಾದ ವಾರದ ಪ್ರಾರ್ಥನೆ ಮತ್ತು ಚಿಂತನ ಕಾರ್ಯಕ್ರಮದಲ್ಲಿ ‘ದಾಂಪತ್ಯ ಧರ್ಮ’ ವಿಷಯ ಕುರಿತು ಮಾತನಾಡಿದರು.ಇತ್ತಿಚಿನ ದಿನಗಳಲ್ಲಿ ಸಾಮಾಜಿಕ, ಕೌಟುಂಬಿಕ ಸ್ಥಿತಿ ಹದಗೆಡಲು ಭಿನ್ನಾಭಿಪ್ರಾಯಗಳೇ ಕಾರಣವಾಗಿದೆ 12ನೇ ಶತಮಾನದಲ್ಲಿ ಶರಣರ…
