ಸರ್ಕಾರಿ ಶಾಲೆಗಳನ್ನು ಕಗ್ಗೊಲೆ ಮಾಡುತ್ತಿರುವ ಸರ್ಕಾರ..!
ಒಂದು ಕೆಪಿಎಸ್ ಶಾಲೆಯನ್ನು ಸ್ಥಾಪಿಸುವುದು ಎಂದರೆ, ಅದರ ಸುತ್ತಲ 5 ಕಿ.ಮೀ. ವ್ಯಾಪ್ತಿಯಲ್ಲಿ ಬರುವ 8-10 ಸರಕಾರಿ ಶಾಲೆಗಳನ್ನು ಕೊಂದು ಸಮಾಧಿ ಮಾಡುವುದು ಎಂದೇ ಅರ್ಥ! ಜೊತೆಗೆ ಅಲ್ಲಿನ ಅಂಗನವಾಡಿ ಕೇಂದ್ರಗಳೂ ಶಾಶ್ವತವಾಗಿ ಮುಚ್ಚಲ್ಪಡುತ್ತವೆ. ಇದಕ್ಕೆ 2018-19ರಿಂದ ವರ್ಷವರ್ಷವೂ ಅಲ್ಲಲ್ಲಿ ಪ್ರಾರಂಭವಾಗಿ ಇದುವರೆಗೆ ಕಾರ್ಯನಿರ್ವಹಿಸುತ್ತಿರುವ 308 ಕೆಪಿಎಸ್ ಶಾಲೆಗಳ ಉದಾಹರಣೆಗಳಿವೆ. ಇವುಗಳ ಹುಟ್ಟಿನಿಂದಾಗಿ ಸುತ್ತಲ ಹಳ್ಳಿಗಳ- ಮಕ್ಕಳ ಕೊರತೆ ಇಲ್ಲದಿದ್ದ ಸರಕಾರಿ ಶಾಲೆಗಳು ಕೂಡ ಶಾಶ್ವತವಾಗಿ ಮುಚ್ಚಿಕೊಂಡಿವೆ. ಅಲ್ಲಲ್ಲ-ಬಲವಂತದಿಂದ ಮುಚ್ಚಿಸಿ, ಅಲ್ಲಿಂದ ಮಕ್ಕಳನ್ನು ಈ ಕೇಂದ್ರೀಕೃತ ಕೆಪಿಎಸ್…
