ಕಿತ್ತೂರ ರಸ್ತೆಯ ಬಸವಣಕಟ್ಟೆ ಸೇತುವೆ ಬಳಿ ನವಜಾತ ಶಿಶು ಬಿಟ್ಟು ಹೋದ ಘಟನೆ ನಡೆದಿದೆ !
ಸಮಯಕ್ಕೆ ಸರಿಯಾಗಿ ಶಿಶುವಿನ ಅಳುವಿನ ಶಬ್ದವನ್ನು ಗಮನಿಸಿ ರಕ್ಷಣೆ ಮಾಡಿದ ಕಿತ್ತೂರಿನ ಗ್ರಾಮಸ್ಥರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸುರೇಬಾನ ಸಮೀಪದ ಕಿತ್ತೂರ ನರಗುಂದ ರಸ್ತೆಯ ಬಸವಣಕಟ್ಟೆ ಸೇತುವೆ ಕೆಳಭಾಗದಲ್ಲಿ ನವಜಾತ ಶಿಶು ಬಿಟ್ಟು ಹೋದ ಘಟನೆ ಸೋಮವಾರ ಬೆಳಕಿಗೆ ಬಂದಿದೆ. ಕಿತ್ತೂರಿನ ಗ್ರಾಮಸ್ಥರು ಬೆಳಗಿನ ವೇಳೆ ಸೇತುವೆ ಸಮೀಪ ತೆರಳಿದ್ದಾಗ ಮಗುವಿನ ಅಳುವಿನ ಶಬ್ದ ಕೇಳಿಬಂದಿದೆ. ಅನುಮಾನಗೊಂಡ ಅವರು ಶಬ್ದ ಬಂದ ದಿಕ್ಕಿನಲ್ಲಿ ತೆರಳಿ ಪರಿಶೀಲಿಸಿದಾಗ, ಸೇತುವೆಯ ಕೆಳಭಾಗದಲ್ಲಿ ನವಜಾತ…
