ಎಇಇ ತಿಪ್ಪೇಸ್ವಾಮಿ ಬಳಿ ₹2.14 ಕೋಟಿ ಅಕ್ರಮ ಆಸ್ತಿ ಪತ್ತೆ, ಲೋಕಾಯುಕ್ತ ದಾಳಿ
ಬಳ್ಳಾರಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಮೇಲೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಪಂಚಾಯತ್ ರಾಜ್ ಇಲಾಖೆಯ ಎಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಎಇಇ) ವೆಶ್ಗಾರ ತಿಪ್ಪೇಸ್ವಾಮಿ ಅವರ ಮನೆ ಮತ್ತು ಕಚೇರಿ ಸೇರಿ ಒಟ್ಟು 3 ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ದಾಳಿ ನಡೆಸಿದರು. ತಿಪ್ಪೇಸ್ವಾಮಿ ಅವರು ₹2.14 ಕೋಟಿಯಷ್ಟು ಅಕ್ರಮ ಆಸ್ತಿ ಹೊಂದಿದ್ದು, ಇದು ಅವರ ಕಾನೂನುಬದ್ಧ ಆದಾಯಕ್ಕಿಂತ ಶೇ 174.01ರಷ್ಟು ಅಧಿಕ ಎಂದು ತಿಳಿದುಬಂದಿದೆ. ಅವರ ಬಳಿ ಒಟ್ಟು…
