ಕಟಕೋಳ ಪೊಲೀಸರು ₹21,02,560 ಲಕ್ಷ ಮೌಲ್ಯದ ಕದ್ದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ದೂರು ನೀಡಿದ 48 ಗಂಟೆಯಲ್ಲಿ ಕಟಕೋಳ ಪೊಲೀಸರಿಂದ ಮನೆ ಕಳ್ಳತನ ಪ್ರಕರಣದ ಇಬ್ಬರೂ ಆರೋಪಿತರ ಬಂಧನ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಹೊಸಕೋಟೆ ಗ್ರಾಮದ ದಿಲ್ಶಾದ ಸೈದುಸಾಬ ನದಾಫ್ ಅವರ ಮನೆಯಲ್ಲಿ ಇದ್ದ ಬಂಗಾರದ ಕಳ್ಳತನದ ಸಂಬಂಧಿಸಿದಂತೆ ಕಟಕೋಳ ಪೊಲೀಸ್ ಠಾಣಾ ಪೊಲೀಸರು ಇಬ್ಬರು ಆರೋಪಿತರನ್ನು ಬಂಧಿಸುವುದರೊಂದಿಗೆ, ಕಳ್ಳತನವಾಗಿದ್ದ 21,02,560/- ಕಿಮ್ಮತ್ತಿನ 154.6ಗ್ರಾಂ ಬಂಗಾರದ ಆಭರಣ ಹಾಗೂ 11,250/- ಕಿಮ್ಮತ್ತಿನ 45 ಗ್ರಾಂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ದಿನಾಂಕಃ 05/05/2026 ರಂದು ದಿಲ್ಶಾದ ಸೈದುಸಾಬ ನದಾಫ್ ಇವಳು…
