ಶ್ರೀ ಜಿ. ಜಿ. ಚೋಪ್ರಾ ಸರಕಾರಿ ಪದವಿ ಪೂರ್ವ ಕಾಲೇಜು ಸವದತ್ತಿ
ನಶೆ ಮುಕ್ತ ಭಾರತ ಅಭಿಯಾನದ ಅಡಿಯಲ್ಲಿ ಸ್ಥಳೀಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮತ್ತು ಶ್ರೀ. ಜಿ.ಜಿ.ಚೋಪ್ರಾ ಸರಕಾರಿ ಪದವಿ ಪೂರ್ವ ಕಾಲೇಜಿನ ಸಹಯೋಗದೊಂದಿಗೆ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ನಶೆ ಮುಕ್ತ ಪ್ರತಿಜ್ಞೆ ವಿಧಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ರಾಜಯೋಗಿಣಿ ಬ್ರಹ್ಮಕುಮಾರಿ ರಾಜೇಶ್ವರಿ ಅಕ್ಕನವರು ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಸಮಯದಲ್ಲಿ ತಮ್ಮ ಭವಿಷ್ಯದ ಬಗ್ಗೆ ಯೋಚಿಸಬೇಕೆ ವಿನಃ ತಮಗೆ ನಶೆಯನ್ನುoಟು ಮಾಡುವ ಚಟಗಳಿಂದ ದೂರ ಇರಬೇಕು. ಪ್ರಾರಂಭದಲ್ಲಿದ್ದ ಹವ್ಯಾಸಗಳು ನಂತರ ಚಟಗಳಾಗಿ ಮಾರ್ಪಟ್ಟು…
