ಬದುಕಿನ ಮೌಲ್ಯಗಳನ್ನು ತಮ್ಮ ಸಾಹಿತ್ಯದ ಮೂಲಕ ಗಾಢವಾಗಿ ತೋರಿಸಿಕೊಟ್ಟವರು ಬೇಂದ್ರೆ: ಡಾ. ಮಲ್ಲಿಕಾ ಘಂಟಿ
ಧಾರವಾಡ ಒಬ್ಬ ಕವಿ ಕಾಲಾನಂತರದಲ್ಲಿಯೂ ಇಂದಿನ ಯುವಕರು ಕಥೆ, ಕಾವ್ಯವನ್ನು ಕಟ್ಟುವಂತಹ ರೀತಿಯಲ್ಲಿ ಬದುಕಿದ್ದರು. ಆ ಎಲ್ಲ ಪ್ರಸಂಗಗಳು ಮಾನವೀಯ ನೆಲೆಯೊಳಗೆ ಇರುವಂತಹವುಗಳು ಮತ್ತು ಬದುಕಿನ ಮೌಲ್ಯಗಳನ್ನು ಬಹಳಷ್ಟು ಗಾಢವಾಗಿ ತಮ್ಮ ಸಾಹಿತ್ಯದ ಮೂಲಕ ತೋರಿಸಿಕೊಟ್ಟವರು ಬೇಂದ್ರೆಯವರು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಘಂಟಿ ಅವರು ಹೇಳಿದರು. ಧಾರವಾಡ ಡಾ.ದ.ರಾ.ಬೇಂದ್ರೆ ಭವನದಲ್ಲಿ ಧಾರವಾಡ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‍ದಿಂದ ವರಕವಿ ಡಾ.ದ.ರಾ.ಬೇಂದ್ರೆ ಅವರ 44 ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ…
