ತನ್ನ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಮಹಿಳಾ ಅಧಿಕಾರಿಗೆ ಶಾಸಕನ ಮಗನಿಂದ ಅವಾಚ್ಯ ಬೈಗುಳ ಮತ್ತು ಬೆದರಿಕೆ!?
ಇದರಲ್ಲಿರುವವರು ಶಿವಮೊಗ್ಗ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಎಂದು ಹೇಳಲಾಗುತ್ತಿದೆ. ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಯಲು ಬಂದ ಅವರಿಗೆ ಫೋನಿನಲ್ಲಿ ಇನ್ನೊಂದು ಕಡೆಯಿಂದ ಬೈದು ಬೆದರಿಕೆ ಹಾಕುತ್ತಿರುವವರು ಜಿಲ್ಲೆಯ ಶಾಸಕರೊಬ್ಬರ ಪುತ್ರ ಎನ್ನಲಾಗುತ್ತಿದೆ. ಆ ಪರಮಕೊಳಕ ಕ್ರಿಮಿನಲ್ ಯಾರೆಂದು ನಿಮಗೆ ಗೊತ್ತೇ? ಅಂದಹಾಗೆ, ಎಲ್ಲಿಯವರೆಗೆ ಸರ್ಕಾರಿ ಅಧಿಕಾರಿಗಳು ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ತಮ್ಮ ಕೆಲಸ ಮಾಡುವುದಿಲ್ಲವೋ ಅಲ್ಲಿಯವರೆಗೆ ಭ್ರಷ್ಟ ಮತ್ತು ಕ್ರಿಮಿನಲ್ ರಾಜಕಾರಣಿಗಳು ಅವರಿಗೆ ಬೆಲೆ ಕೊಡುವುದಿಲ್ಲ. ಈ ತರಹದ ಘಟನೆಗಳು ನಡೆಯುತ್ತಿರುತ್ತವೆ….
