BREAKING NEWS

ಬೆಳಗಾವಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ

ಬೆಳಗಾವಿ, ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದಲ್ಲಿ ಯಾವುದೇ ಲೋಪಗಳಿಗೆ ಆಸ್ಪದ ನೀಡದೆ ಪಾರದರ್ಶಕತೆಯಿಂದ ಕೈಗೊಳ್ಳುವಂತೆ ಕಾರ್ಯದರ್ಶಿಗಳು ಸಹಕಾರ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಸಂಜಯ ಶೆಟ್ಟಣ್ಣವರ ಅವರು ಸೂಚಿಸಿದರು. ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಶನಿವಾರ ಜರುಗಿದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಶೀಲನೆ ಪ್ರಕ್ರಿಯೆ ರಾಜ್ಯಾದ್ಯಂತ ಪ್ರಾರಂಭವಾಗಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಜೂನ್ 30 ರಿಂದ ಅಕ್ಟೋಬರ್ 7 ರವರೆಗೆ ಜರುಗಲಿರುವ…

Read More

ಬೀಳಗಿಯಲ್ಲಿ ಅಕ್ರಮ ಪಡಿತರ ಅಕ್ಕಿ ಸಾಗಾಟ : 4005 ಕೆ.ಜಿ ಅಕ್ಕಿ ವಶ

ಬೀಳಗಿ: ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿ ಹಾಗೂ ಅದಕ್ಕೆ ಬಳಸಿದ ವಾಹನವನ್ನು ಮಂಗಳವಾರ ಆಹಾರ ಇಲಾಖೆಯ ಶಿರಸ್ತೇದಾರ ಹಾಗೂ ನಿರೀಕ್ಷಕರು ತಾಲ್ಲೂಕಿನ ಸುನಗ ತಾಂಡಾ 1 ಗ್ರಾಮದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಆಹಾರ ಇಲಾಖೆಯ ಸಂತೋಷ ರಬಕವಿ, ಶಿರಸ್ತೇದಾರರಾದ ಅನ್ವರ ಸನದಿ, ಶಶಿಧರ ಭಜಂತ್ರಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು, ವಾಹನ ಚಾಲಕ ಪರಾರಿಯಾಗಿದ್ದಾನೆ. ಒಟ್ಟು 91 ಚೀಲಗಳಲ್ಲಿ 4005 ಕೆ.ಜಿ ಅಕ್ಕಿ ಇದ್ದವು. ಮುಂದಿನ ಕ್ರಮಕ್ಕಾಗಿ ಬೊಲೆರೋ ವಾಹನ ಹಾಗೂ ಅದರಲ್ಲಿರುವ ಅಕ್ಕಿಯ ಚೀಲಗಳನ್ನು ಪೊಲೀಸ್…

Read More

ರೋಣ ಅಕ್ರಮ ಪಡಿತರ ಅಕ್ಕಿ ಸಾಗಾಟ : 6 ಕ್ವಿಂಟಲ್ 10 ಕೆಜಿ ಅಕ್ಕಿ ವಶ

ಗದಗ ಜಿಲ್ಲೆ ರೋಣ-ನರಗುಂದ ರಸ್ತೆಯ ಬಸಲಾಪುರ ಕ್ರಾಸ್ ಬಳಿ ಅಕ್ರಮವಾಗಿ ಸಾಗಿಸುತ್ತಿದ್ದ ಅಕ್ಕಿಯನ್ನು ಆಹಾರ ನಿರೀಕ್ಷಕಿ ಸುವರ್ಣ ಜಮ್ಮನಕಟ್ಟಿ ಅವರ ನೇತೃತ್ವದ ತಂಡವು ದಾಳಿ ನಡೆಸಿ ಜಪ್ತಿ ಮಾಡಿದೆ. 18/06/2026 ರಂದು ರಾತ್ರಿ ಚಿಕ್ಕಮನ್ನೂರಿನಿಂದ ರೋಣದ ಕಡೆಗೆ ಅಟೋದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ, ಆಹಾರ ನಿರೀಕ್ಷಕಿ ಸುವರ್ಣ ಜಮ್ಮನಕಟ್ಟಿ ಅವರು ದಾಳಿ ನಡೆಸಿದರು. ಪರಿಶೀಲನೆ ನಡೆಸಿದಾಗ ಆಟೋದಲ್ಲಿ ಪಡಿತರ ಅಕ್ಕಿ ತುಂಬಿದ 15 ಚೀಲಗಳು ಪತ್ತೆಯಾಗಿವೆ. ತಲಾ 41 ಕೆಜಿ…

Read More

ಸವದತ್ತಿ ಪೊಲೀಸ್ ಠಾಣೆ ಆವರಣದಲ್ಲಿ ಮೊಹರಂ ಹಬ್ಬದ ಪೂರ್ವಭಾವಿ ಶಾಂತಿ ಸಭೆ.

ಬೆಳಗಾವಿ ಜಿಲ್ಲೆ ಸವದತ್ತಿ ನಗರದಪೊಲೀಸ್ ಠಾಣೆ ಆವರಣದಲ್ಲಿಮುಂಬರುವ ಮೊಹರಂ ಹಬ್ಬವನ್ನು ಶಾಂತಿಯುತ ಹಾಗೂ ಸೌಹಾರ್ದಯುತವಾಗಿ ಆಚರಿಸುವ ನಿಟ್ಟಿನಲ್ಲಿ ಪೂರ್ವಭಾವಿ ಶಾಂತಿ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಮುಖಂಡರು ಭಾಗವಹಿಸಿ, ಕೋಮು ಸೌಹಾರ್ದತೆಯನ್ನು ಎತ್ತಿಹಿಡಿಯುವ ಮೂಲಕ ಈ ಬಾರಿ ಹಬ್ಬವನ್ನು ಸಂಪ್ರದಾಯದಂತೆ ಸಾಮರಸ್ಯದಿಂದ ಆಚರಿಸಲು ಒಮ್ಮತದಿಂದ ನಿರ್ಧರಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಪಿಐ ಸುರೇಶ ಬೆಂಡೆಗುಂಬಳ ಅವರು, ಸವದತ್ತಿ ನಗರವು ದಶಕಗಳಿಂದ ಹಿಂದೂ ಮುಸ್ಲಿಂ ಬಾಂಧವ್ಯ ಮತ್ತು ಐಕ್ಯತೆಗೆ ಹೆಸರಾಗಿದೆ. ಇಲ್ಲಿನ ಜನರು ಎಲ್ಲ ಹಬ್ಬಗಳನ್ನು…

Read More

ಮುಧೋಳ ಜೆಕೆ ಸಿಮೆಂಟ್‌ ಕಾರ್ಖಾನೆ ವಿರುದ್ಧ ಅಹೋರಾತ್ರಿ ಧರಣಿ | ಅಕ್ರಮ ಗಣಿಗಾರಿಕೆ, ಬೆಳೆಹಾನಿಗೆ ರೈತರ ಸಮರನ್ಯಾಯ ಸಿಗುವವರೆಗೂ ಹೋರಾಟ

ಮುಧೋಳ ಅಕ್ರಮ ಗಣಿಗಾರಿಕೆ ತಡೆಗಟ್ಟಬೇಕು, ಬೆಳೆಹಾನಿಗೆ ರೈತರಿಗೆ’ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿ ಉತ್ತರ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ತಾಲೂಕಿನ ಮುದ್ದಾಪುರದಲ್ಲಿರುವ ಜೆಕೆ ಸಿಮೆಂಟ್ ಕಾರ್ಖಾನೆಯ ಎದುರು ಸೋಮವಾರ ಅಹೋರಾತ್ರಿ ಧರಣಿ ಆರಂಭಿಸಲಾಯಿತು. ಉತ್ತರ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಶಂಕರಗೌಡ ಹಿರೇಗೌಡರ ಮಾತನಾಡಿ, ಕಾರ್ಖಾನೆಯಿಂದ ಹೊರಸೂಸುವ ಧೂಳಿನಿಂದಾಗಿ ಸುತ್ತಮುತ್ತಲಿನ ರೈತರ ಬೆಳೆಗಳು ಸಂಪೂರ್ಣ ನಾಶವಾಗುತ್ತಿವೆ. ಕಬ್ಬಿನಂತಹ ಬೆಳೆಗಳ ಮೇಲೆ ಧೂಳಿನ ಪದರ ಬಿದ್ದು ಇಳುವರಿ ಕುಂಠಿತವಾಗುತ್ತಿದೆ. ಇದರ ಜೊತೆಗೆ, ಕಾರ್ಖಾನೆಯು…

Read More

ಆಲಮೇಲ ಮೊಹರಂ ಹಬ್ಬದ ಪ್ರಯುಕ್ತ ಶಾಂತಿ ಸಭೆ ಶಾಂತಿ ಮತ್ತು ಸೌಹಾರ್ದತೆ ಯಿಂದ ಹಬ್ಬ ಆಚರಿಸಲು – ಪಿ.ಎಸ್.ಐ ಅರವಿಂದ್ರ ಅಂಗಡಿ ಕರೆ.

ಆಲಮೇಲ ಪಟ್ಟಣದ ಪೋಲಿಸ್ ಠಾಣೆ ಅವರಣದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯನ್ನು ಆಲಮೇಲ ಠಾಣೆಯ ಪಿ.ಎಸ್.ಐ ಅರವಿಂದ್ರ ಅಂಗಡಿ ಇವರ ಅಧ್ಯಕ್ಷತೆಯಲ್ಲಿ ಶಾಂತಿ ಸಭೆಯನ್ನು ಜರಗಿತು.ಪಿ.ಎಸ್.ಐ ಅರವಿಂದ್ರ ಅಂಗಡಿ ಮಾತನಾಡಿ.ಮುಂಬರುವ ಮೊಹರಂ ಹಬ್ಬವನ್ನು ಶಾಂತಿ ಸೌಹಾರ್ದತೆ ಆಚರಣೆ ಮಾಡಬೇಕು ಯಾವುದೇ ಆಂತರಿಕ ಘಟನೆ ನಡೆಯದಂತೆ ಕಾನೂನು ಪರಿಪಾಲನೆ ಯಿಂದ ಯಾವುದೇ ಹಿಂದೂ ಮುಸ್ಲಿಂ ಹಬ್ಬವನ್ನಾಗಲಿ ಶಾಂತಿಯುತವಾಗಿ ಎಲ್ಲರೂ ಸೋದರಂತೆ ಭಾವನೆಗಳನ್ನು ಇಟ್ಟುಕೊಂಡು ಹಬ್ಬವನ್ನು ಆಚರಣೆ ಮಾಡಬೇಕು ಎಂದು ಹೇಳಿದರು ಆಲಮೇಲ ತಾಲೂಕಿನಾದ್ಯಂತ ವಿವಿಧ ಗ್ರಾಮಗಳಲ್ಲಿ ಅಂದಾಜು 36…

Read More

ಸವದತ್ತಿ ತಾಲೂಕಿನಲ್ಲಿ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದ ಜಿಪಂ ಸಿಇಒ ರಾಹುಲ್ ಶಿಂಧೆ

ಬೆಳಗಾವಿ: ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಶಿಂಧೆ ಅವರು ಬುಧವಾರ ಸವದತ್ತಿ ತಾಲೂಕಿನ ವಿವಿಧೆಡೆ ಭೇಟಿ ನೀಡಿ, ವಿವಿಧ ಇಲಾಖೆಯ ಕಾಮಗಾರಿಗಳನ್ನು ಪರಿಶೀಲನೆ ಮಾಡಿದರು. ತಾಲೂಕಿನ ಉಗರಗೋಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ಭೇಟಿ ನೀಡಿ, ವಿವಿಧ ಯೋಜನೆಗಳಡಿ ಕೈಗೊಂಡಿರುವ ಕಾಮಗಾರಿಗಳನ್ನು ಪರಿಶೀಲಿಸಿದರು. ಯಲ್ಲಮ್ಮ ತಾಂಡೆ ಗ್ರಾಮದಲ್ಲಿ 2025-26ನೇ ಸಾಲಿನ CMIDP ಯೋಜನೆಯಡಿ ಕೈಗೊಂಡಿರುವ ರಸ್ತೆ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿ, ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ…

Read More

ರಾಮದುರ್ಗ ಅಕ್ರಮ ಗಾಂಜಾ ಸಾಗಾಟ : 180 ಗ್ರಾಂ ಗಾಂಜಾ ವಶ; ವ್ಯಕ್ತಿ ಬಂಧನ

ರಾಮದುರ್ಗ : ಗಾಂಜಾ ಮಾರಾಟ ಮಾಡಲು ಯತ್ನಿಸಿದ ಆರೋಪದ ಮೇಲೆ ನವೀನ ಲಕ್ಷ್ಮಣ ಹೆದ್ದೆರಿ ಸಾ: ಕೆರೂರ ತಾಲೂಕು ಬಾದಾಮಿ ವ್ಯಕ್ತಿಯನ್ನು ರಾಮದುರ್ಗ ಪೊಲೀಸರು ಬಂಧಿಸಿ , ಆತನ ಬಳಿ ಇದ್ದ 180 ಗ್ರಾಂ ಗಾಂಜಾ ಒಂದು ಪಲ್ಸರ್ ಬೈಕ್, ಒಂದು ಸಾವಿರ ರೂ. ವನ್ನು ವಶಪಡಿಸಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಹಲಗತ್ತಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಇರುವ ಹಾದಿ ಬಸವೇಶ್ವರ ದೇವಸ್ಥಾನ ಹತ್ತಿರದಲ್ಲಿ ಬದಾಮಿ ತಾಲೂಕಿನ ಕೆರೂರ ಗ್ರಾಮದ ನವೀನ್ ಲಕ್ಷ್ಮಣ ಹೆದ್ದೆರಿ ಎಂಬ…

Read More

ಸವದತ್ತಿ, ತಾಲೂಕಾ ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ ಇವರಗಳ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸನಾ ಶಿಬಿರ

ಸವದತ್ತಿ, ತಾಲೂಕಾ ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ, ಜೆಂಟ್ಸ್ ಗ್ರುಫ್, ಜೆಂಟ್ಸ್ ಗ್ರುಫ್ ಆಫ್ ರೇಣುಕಾ ಸಹೇಲಿ, ಶಿವಸಂಜೀವಿನಿ ನೇತ್ರಾಲಯ ಇವರಗಳ ಸಂಯುಕ್ತ ಆಶ್ರಯದಲ್ಲಿ “ಉಚಿತ ಆರೋಗ್ಯ ತಪಾಸನಾ ಶಿಬಿರ, (ಮಧುಮೇಹ ಮತ್ತು ಕಣ್ಣಿನ ತಪಾಸನೆ) ಶಿಬಿರವನ್ನು ನ್ಯಾಯವಾದಿಗಳ ಸಂಘದ ಹೊಸ ಸಬಾಭವನದಲ್ಲಿ ಹವ್ಮಿುಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್‍ ನ್ಯಾಯಾಧೀಶರು ಹಾಗೂ ತಾಲೂಕಾ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾದ ಶ್ರೀ. ಸಿದ್ದರಾಮ ರವರು ಸಸಿಗೆ ನೀರೆರೆಯುವುದರ ಮೂಲಕ ಉದ್ಪಾಟನೆ ನೆರವೇರಿಸಿದರು. ನಂತರ ಮಾತನಾಡಿದ ಅವರು ಆರೋಗ್ಯವೇ…

Read More

ಸವದತ್ತಿ ನ್ಯಾಯಾಧೀಶರ ಬಿಳ್ಕೊಡುಗೆ ಸಮಾರಂಭ

ಸವದತ್ತಿಯ 2ನೇ ಹೆಚ್ಚುವರಿ ಸಿವಿಲ್‍ ನ್ಯಾಯಾಧೀಶರು ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಕೃಷ್ಣಪ್ಪ ಪಮ್ಮಾರ ರವರು, ಸಿವಿಲ್‍ ನ್ಯಾಯಧೀಶರು ಹಾಗೂ ಜೆ.ಎಂ.ಎಫ್.ಸಿ ಯರಗಟ್ಟಿ ನ್ಯಾಯಾಲಯಕ್ಕೆ ವರ್ಗಾವಣೆಯಾದ ಪ್ರಯುಕ್ತ ಸವದತ್ತಿ ನ್ಯಾಯವಾದಿಗಳ ಸಂಘದಿಂದ ನ್ಯಾಯವಾದಿಗಳ ಸಂಘದ ಹೊಸ ಸಬಾಭವನಲ್ಲಿ ಗೌರವಪೂರ್ವಕವಾಗಿ ಸತ್ಕರಿಸಿ ಬಿಳ್ಕೊಡಲಾಯಿತು. ಕಾರ್ಯಕ್ರಮದಲ್ಲಿ ಪ್ರಧಾನ ಹಿರಿಯ ಸಿವಿಲ್‍ ನ್ಯಾಯಾಧೀಶರು ಹಾಗೂ ತಾಲೂಕಾ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾದ ಸಿದ್ದರಾಮ ಟಿ, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ದೇವದಾಸ ಎಚ್. 1ನೇ ಹೆಚ್ಚುವರಿ ನ್ಯಾಯಾಧೀಶರಾದ ಅರ್ಪಿತಾ ಬಿ. ಬೆಲ್ಲದ ಮತ್ತು…

Read More