BREAKING NEWS

ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಧರ್ಮಸ್ಥಳಕ್ಕೆ ಭೇಟಿ ನೀಡಿ, ದರ್ಶನ ಪಡೆದರು.

ಧರ್ಮಸ್ಥಳ : ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಇಂದು ಧರ್ಮಸ್ಥಳಕ್ಕೆ ಭೇಟಿ ನೀಡಿ, ಮಂಜುನಾಥನ ದರ್ಶನ ಪಡೆದರು. ಈ ವೇಳೆ ಧರ್ಮಸ್ಥಳದಲ್ಲಿ ಭಕ್ತರು, ಮೋದಿ, ಮೋದಿ ಹಾಗೂ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರುರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಹಿನ್ನಲೆಯಲ್ಲಿ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಧರ್ಮಸ್ಥಳಕ್ಕೆ ಭೇಟಿ ನೀಡಿದರು. ಮೈಸೂರಿನಿಂದ ವಿಶೇಷ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಣಕ್ಕೆ ತಲುಪಿದ…

Read More

ಬಿಜೆಪಿಯಿಂದ ಮಾಜಿ ಶಾಸಕ ರಘುಪತಿ ಭಟ್ ಉಚ್ಚಾಟನೆ

ಉಡುಪಿ: ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ ಪಕ್ಷದಿಂದ ಮಾಜಿ ಶಾಸಕ ರಘುಪತಿ ಭಟ್‌ ಅವರನ್ನು ಉಚ್ಚಾಟಿಸಲಾಗಿದೆ.ಪಕ್ಷದ ಸೂಚನೆಯನ್ನು ಕಡೆಗಣಿಸಿ ಪ್ರಸಕ್ತ ವಿಧಾನ ಪರಿಷತ್‌ ಚುನಾವಣೆಗೆ ನೈರುತ್ಯ ಪದವೀಧರರ ಕ್ಷೇತ್ರದಿಂದ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪಕ್ಷದ ಮುಜುಗರಕ್ಕೆ ಕಾರಣರಾಗಿದ್ದೀರಿ. ಇದು ಪಕ್ಷದ ಶಿಸ್ತು ಉಲ್ಲಂಘನೆಯಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಆದ್ದರಿಂದ ತಮ್ಮನ್ನು ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ಜವಾಬ್ದಾರಿಗಳಿಂದ ಮುಕ್ತಗೊಳಿಸಿ 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಬಿಜೆಪಿ…

Read More

ಎಂ ಎಲ್ ಸಿ ಟಿಕೇಟ್ ಗಾಗಿ ಪತ್ರಿಕಾಗೋಷ್ಠಿ ನಡೆಸಿದ್ದ ಎಂ ಸಿ ಮುಲ್ಲಾ

ವಿಜಯಪುರ ಮುಸ್ಲಿಮರು ಕಾಂಗ್ರೆಸ್ ಪಕ್ಷಕ್ಕೆ ಆಕ್ಸಿಜನ್ ಇದ್ದ ಹಾಗೆ. ಆಕ್ಸಿಜನ್ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಜೀವ ಇಲ್ಲದ ವಸ್ತು ಇದ್ದ ಹಾಗೆ. ವಿಜಯಪುರದಲ್ಲಿ ಕಾಂಗ್ರೆಸ್ ಮುಖಂಡ ಎಮ್ ಸಿ ಮುಲ್ಲಾ ಹೇಳಿಕೆ. ಎಂ ಎಲ್ ಸಿ ಟಿಕೇಟ್ ಗಾಗಿ ಪತ್ರಿಕಾಗೋಷ್ಠಿ ನಡೆಸಿದ್ದ ಎಂ ಸಿ ಮುಲ್ಲಾ. ಪತ್ರಿಕಾ ಗೋಷ್ಠಿಯಲ್ಲಿ ಮುಸ್ಲಿಂ ಸುಮುದಾಯಕ್ಕೆ ಟಿಕೇಟ್ ನೀಡುವಂತೆ ಮನವಿ. ಒಂದು ವೇಳೆ ನಮ್ಮ ಸಮುದಾಯ ಕಡೆಗಣಿಸಿದರೆ ಮುಂಬರುವ ದಿನಗಳಲ್ಲಿ ನಿರ್ಣಯ ಕೈಗೊಳ್ಳಲಾಗುದು ಎಂದು ಎಚ್ಚರಿಕೆ.

Read More

ಖಾಸಗಿ ಶಾಲೆಗಳ ದುಬಾರಿ ಶುಲ್ಕ ಹಾಗೂ ಡೊನೇಷನ್ ಹಾವಳಿಗೆ ಹೈರಾಣಾದ ಪೋಷಕರು

ಬೆಂಗಳೂರು: ಕೋವಿಡ್ -19 ಸಾಂಕ್ರಾಮಿಕ ರೋಗದ ನಂತರ ಎರಡಂಕಿಗಳ ಹೆಚ್ಚಳವನ್ನು ಕಂಡಿರುವ ಹೊಸ ಶೈಕ್ಷಣಿಕ ವರ್ಷವು ಸಮೀಪಿಸುತ್ತಿದ್ದಂತೆ, ಪೋಷಕರು ಹೆಚ್ಚಿದ ಶುಲ್ಕದ ಹೊರೆಯನ್ನು ಎದುರಿಸುತ್ತಿದ್ದಾರೆ. ಇದು ಶಾಲಾ ವೆಚ್ಚಗಳು ಮಾತ್ರವಲ್ಲದೆ ಇತರ ವಾರ್ಷಿಕ ಶೈಕ್ಷಣಿಕ ವೆಚ್ಚಗಳು ಸಹ ತೀವ್ರ ಹೆಚ್ಚಳವನ್ನು ಕಂಡಿವೆ. ಲೋಕಲ್ ಸರ್ಕಲ್ಸ್ ನಡೆಸಿದ ಸಮೀಕ್ಷೆಯ ಪ್ರಕಾರ, ಶ್ರೇಣಿ -1 ಮತ್ತು 2 ನಗರಗಳಲ್ಲಿ, ಪ್ರಮುಖ ಖಾಸಗಿ ಶಾಲೆಗಳ ವಾರ್ಷಿಕ ಶುಲ್ಕವು ಒಂದು ಲಕ್ಷದಿಂದ 4 ಲಕ್ಷ ರೂ.ಗಳವರೆಗೆ ಮತ್ತು ಶ್ರೇಣಿ -3 ಮತ್ತು 4…

Read More

ಈಶಾನ್ಯ ಪದವಿಧರ ಕ್ಷೇತ್ರದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಗೆಲುವು : ಜ್ಯೋತಿ

ಕೊಪ್ಪಳ: ಕರ್ನಾಟಕ ವಿಧಾನ ಪರಿಷತ್ತಿಗೆ ಈಶಾನ್ಯ ಪದವಿಧರ ಕ್ಷೇತ್ರಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಹಾಲಿ ಪರಿಷತ್ ಸದಸ್ಯ ಚಂದ್ರಶೇಖರ್ ಪಾಟೀಲ್ (ಚಂಪಾ) ಅವರು ಮತ್ತೊಮ್ಮೆ ಗೆಲ್ಲುವದು ಗ್ಯಾರಂಟಿ ಎಂದು ಕಾಂಗ್ರೆಸ್ ಮುಖಂಡೆ ಜ್ಯೋತಿ ಎಂ. ಗೊಂಡಬಾಳ ಹೇಳಿದರು.ಅವರು ನಗರದ ವಕೀಲರು, ಪದವಿಧರರನ್ನು ಭೇಟಿ ಮಾಡಿ ಕಾಂಗ್ರೆಸ್ ಪರವಾಗಿ ಮತಯಾಚನೆ ಮಾಡಿ ಮಾತನಾಡಿದರು. ಚಂದ್ರಶೇಖರ್ ಪಾಟೀಲ್ ಅವರಿಗೆ ಅಪಾರ ಅನುಭವವಿದ್ದು, ಒಂದು ಬಾರಿ ಸದಸ್ಯರಾಗಿ ಉತ್ತಮ ಕೆಲಸ ನಿರ್ವಹಿಸಿದ್ದಾರೆ, ಪದವಿಧರರ ಹಲವು ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ, ಪರಿಷತ್ನಲ್ಲಿ ಅತಿ ಹೆಚ್ಚಿನ ಪ್ರಶ್ನೆಗಳನ್ನು…

Read More

ಚರಂಡಿ ನೀರು ಶುದ್ಧಿಕರಣ ಘಟಕದಲ್ಲಿ ಬಾಲಕರ ಬಿದ್ದು ಸಾವನಪ್ಪಿರುವ ಪ್ರಕರಣ: ನಗರದ ಡಿಸಿ ಕಚೇರಿ ಎದುರು ಪ್ರತಿಭಟನೆ

ವಿಜಯಪುರ ಚರಂಡಿ ನೀರು ಶುದ್ಧಿಕರಣ ಘಟಕದಲ್ಲಿ ಬಾಲಕರ ಬಿದ್ದು ಸಾವನಪ್ಪಿರುವ ಪ್ರಕರಣ. ಮೃತ ಬಾಲಕರ ಕುಟುಂಬಕ್ಕೆ ಪರಿಹಾರ ನೀಡಲು ವಿಳಂಬ ಹಿನ್ನೆಲೆ. ನಗರದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಗೌಳಿ ಸಮಾಜದ ಮುಖಂಡರು. ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಗೆ ಮನವಿ ಸಲ್ಲಿಸಿದ ಗೌಳಿ ಸಮಾಜದ ಮುಖಂಡರು. ಮಹಾನಗರ ಪಾಲಿಕೆ ಆಯುಕ್ತರು ಪರಿಹಾರ ಘೋಷಣೆಗೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪ. ಕೇಳಿದರೆ ನೀತಿ ಸಂಹಿತೆ ಜಾರಿ ಇದೆ ಎಂದು ಸಬೂಬು ಹೇಳಿ ಕಳುಹಿಸುತ್ತಿರುವ ಆಯುಕ್ತರು. ಬೇರೆ…

Read More

ಹೂವಿನಹಡಗಲಿ:ಶ್ರೀಗ್ರಾಮದೇವತೆ ಊರಮ್ಮದೇವಿ ಉತ್ಸವ

ವಿಜಯನಗರ ಜಿಲ್ಲೆ ಹೂವಿನ ಹಡಗಲಿ:ಪಟ್ಟಣದ ಗ್ರಾಮ ದೇವತೆ ಶ್ರೀಊರಮ್ಮ ದೇವಿಯ ರಥೊತ್ಸವ, ಗುರುವಾರ ವಿಜೃಂಭಣೆಯಿಂದ ಜರುಗಿತು. ಧಾರ್ಮಿಕ ನಿಯಮಾನುಸಾರ ದೇವಿ ಚೌತಿ ಮನೆಯ ಮುಂಭಾಗದಲ್ಲಿ, ಎಲ್ಲಾ ಕಾರ್ಯಕ್ರಮಗಳನ್ನು ಜರುಗಿಸಿದ ನಂತರ ದೇವಿಯ ಉತ್ಸವಕ್ಕೆ ಚಾಲನೆ ನೀಡಲ‍ಾಯಿತು. ಸಂಪ್ರದಾಯದಂತೆ ಬೆನ್ನುಗೋಡೆಯಿಂದ ಪಟ್ಟಣದ ಗೌಡರ ಮನೆ, ಬಣಕಾರ, ಶಾನಬೋಗರ ಮನೆ, ಹಾಗೂ ಪ್ರಮುಖ ದೇವಾಲಯಗಳಿಗೆ ತೆರಳಿದ ದೇವಿ ಉತ್ಸವ ಮೂರ್ತಿಗೆ ಉಡಿ ತುಂಬಲಾಯಿತು. ಪಟ್ಟಣದ ಗೋಣಿ ಬಸವೇಶ್ವರ ದೇವಸ್ಥಾನದಿಂದ, ವಾಲಿಯರ ಓಣಿಯ ಮೂಲಕ ಬಂದ ದೇವಿ ಉತ್ಸವ ಮೂರ್ತಿಯು ಚೌತಿ…

Read More

ಛಾಯಾಗ್ರಾಹಕನ ಮೇಲೆ ಹಲ್ಲೆ ಖಂಡಿಸಿ ಬೈಕ ರ್ಯಾಲಿ ಮೂಲಕ ಪ್ರತಿಭಟನೆ ಮಾಡಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ರಾಮದುರ್ಗ ವೃತ್ತಿ ನಿರತ ಛಾಯಾಗ್ರಾಹಕರ ಮೇಲಿನ ಹಲ್ಲೆಯನ್ನು ತೀವ್ರವಾಗಿ ಖಂಡಿಸಿ ರಾಮದುರ್ಗ ತಾಲೂಕ ವೃತ್ತಿನಿರತ ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಅಸೋಸಿಯೇಷನ್ ರಾಮದುರ್ಗ ಸಂಘದ ಪದಾಧಿಕಾರಿಗಳು ಶುಕ್ರವಾರ ಬೈಕ ರ್ಯಾಲಿ ಮೂಲಕ ಪ್ರತಿಭಟನೆ ಮಾಡಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಬೆಂಗಳೂರಿನ ಶಿವಾಜಿನಗರದ ಶೈಮ್ಸ್ ಕಲ್ಯಾಣ ಮಂಟಪದಲ್ಲಿವೃತ್ತಿ ನಿರತ ಛಾಯಾಗ್ರಾಹಕನ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗಳನ್ನುಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.ವೃತ್ತಿ ನಿರತ ಛಾಯಾಗ್ರಾಹಕರ ಕ್ಯಾಮೆರಾ ಪರಿಕರ ಕಳ್ಳತನ, ಸ್ಪುಡಿಯೋಗಳಲ್ಲಿ ಕಳ್ಳತನ ಮತ್ತು ಛಾಯಾಗ್ರಾಹಕರನ್ನು ರಸ್ತೆಗೆ ಅಡ್ಡಗಟ್ಟಿ ಪರಿಕರಗಳನ್ನು ವಶ…

Read More

ಮಾಜಿ ಸಚಿವರಾದ ಎಚ್ ಆಂಜನೇಯ ರವರಿಗೆ MLC ಸ್ಥಾನ ನೀಡಲು ಕರ್ನಾಟಕ ಮಾದಿಗರ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀಶೈಲ ರತ್ನಾಕರ್ ಆಗ್ರಹ

ರಾಜ್ಯದಲ್ಲಿ ಜೂನ್ 17ರಂದು ನಿವೃತ್ತಿ ಹೊಂದಲಿರುವ 11 ಒಐಆ ಸ್ಥಾನಗಳಿಗೆ ಕಾಂಗ್ರೆಸ್ ಪಕ್ಷವು ಭರ್ತಿ ಮಾಡುತ್ತಿರುವ ಖಾಲಿ ಇರುವ ಸ್ಥಾನಕ್ಕೆ ನಾಡ ಕಂಡ ಅಪ್ರತಿಮ ನಾಯಕ ಶೋಷಿತರ ದಮನಿತರ ದಲಿತರ ಗಟ್ಟಿ- ಧ್ವನಿ ಸ್ವಾಭಿಮಾನದ ದೈತ್ಯ, ಸರ್ವಜನಾಂಗದ ನಾಯಕ,ದೇವದಾಸಿ ತಾಯಂದಿರಿಗೆ ತಿಂಗಳ ಮಾಶಾಸನ, ದೇವದಾಸಿ ತಾಯಂದಿರ ಮಕ್ಕಳಿಗೆ ಮದುವೆಗೆ ಪ್ರೋತ್ಸಾಹ ಧನ,ಹೆಚಿನ ವಿದ್ಯಾಭ್ಯಾಸ ಮಾಡಲು ವಿದೇಶಕ್ಕೆ ಹೋಗಲು ಪ್ರೋತ್ಸಾಹ ನೀಡಲು ಯೋಜನೆ ಜಾರಿಗೆ ತಂದವರು ಮತ್ತು ಮೊರಾರ್ಜಿ ದೇಸಾಯಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ,…

Read More

ಕುಡಿಯುವ ನೀರು, ಮೇವು, ಬೀಜ-ಗೊಬ್ಬರ ಕೊರತೆ ಆಗದಂತೆ ಎಚ್ಚರಿಕೆ ವಹಿಸಲು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸೂಚನೆ

ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಬರ ನಿರ್ವಹಣೆ ಹಾಗೂ ಮಳೆಗಾಲ ಪೂರ್ವಭಾವಿ ಸಿದ್ಧತೆ ಕುರಿತ ಸಭೆಯಲ್ಲಿ ಅವರು ಮಾತನಾಡಿದರು. ಬೇಸಿಗೆ ಹಿನ್ನೆಲೆಯಲ್ಲಿ ಸದ್ಯಕ್ಕೆ ಬರಗಾಲದ ಪರಿಸ್ಥಿತಿ ಇದ್ದರೂ ಈ ಬಾರಿ ಉತ್ತಮ‌ ಮಳೆಯ ಮುನ್ಸೂಚನೆ ಇರುವುದರಿಂದ ರೈತರಿಗೆ ಸಕಾಲಕ್ಕೆ ಬೀಜ-ಗೊಬ್ಬರ ಪೂರೈಸಲು ಸಿದ್ಧತೆ ಮಾಡಿಕೊಳ್ಳಬೇಕು. ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಬೇಕು ಈ ಬಾರಿ ಉತ್ತಮ‌ ಮಳೆಯಾಗುವ ನಿರೀಕ್ಷೆ ಇರುವುದರಿಂದ ನೀರು ಸರಾಗವಾಗಿ ಹರಿದು ಹೋಗಲು ಅನುಕೂಲವಾಗುವಂತೆ ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ…

Read More