ರಾಮದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಸ್ಸಿ ಎಸ್ಟಿ ಕುಂದು ಕೊರತೆ ಸಭೆ DYSP ಚಿದಂಬರ ಮಡಿವಾಳರ ಇವರ ಉಪಸ್ಥಿಯಲ್ಲಿ ನಡೆಯಿತು.
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಮಂಗಳವಾರ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಂದು–ಕೊರತೆ ಸಭೆಯು ರಾಮದುರ್ಗ ಪೋಲೀಸ್ ಉಪಾಧೀಕ್ಷಕರು ಉಪ ವಿಭಾಗ ರಾಮದುರ್ಗದ (DYSP) ಚಿದಂಬರ ವಿ ಮಡಿವಾಳರ ಇವರ ಉಪಸ್ಥಿಯಲ್ಲಿ ನಡೆಯಿತು. ಎಸ್ಸಿ/ಎಸ್ಟಿ ಕುಂದುಕೊರತೆ ಸಭೆಗಳು, ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯದವರ ದೈನಂದಿನ ಸಮಸ್ಯೆಗಳು, ಭೂ ವಿವಾದಗಳು, ಪೊಲೀಸ್ ದೂರುಗಳು, ಮತ್ತು ಜಮೀನು ವಿವಾದಗಳು, ಜಾತಿ ನಿಂದನೆ ಪ್ರಕರಣಗಳು, ಮೂಲಭೂತ ಸೌಕರ್ಯಗಳ ಕೊರತೆ, ಮತ್ತು ಸರ್ಕಾರಿ ಸೌಲಭ್ಯಗಳನ್ನು ಪಡೆಯುವಲ್ಲಿನ ಸಮಸ್ಯೆಗಳು,…
