BREAKING NEWS

ಲಿಂಗದಳ್ಳಿಯಲ್ಲಿ ಗ್ರಾಮದೇವತೆ ಜಾತ್ರಾ ಮಹೋತ್ಸವ

ವಿಜಯಪುರ: ತಾಳಿಕೋಟಿ ತಾಲೂಕಿನ ಲಿಂಗದಳ್ಳಿ ಗ್ರಾಮದಲ್ಲಿ ಗ್ರಾಮದೇವತೆ ಜಾತ್ರಾ ಮಹೋತ್ಸವವು ಶ್ರದ್ಧಾಭಕ್ತಿ ಹಾಗೂ ಸಡಗರ-ಸಂಭ್ರಮದಿಂದ ವಿಜೃಂಭಣೆಯಿಂದ ನಡೆಯಿತು.ಶುಕ್ರವಾರ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಬೆಳಿಗ್ಗೆ 6 ಗಂಟೆಗೆ ಸಾಂಪ್ರದಾಯಿಕ ಗಂಗಾಸ್ಥಳ ಮುಗಿಸಿಕೊಂಡು ಬಂದ ಬಳಿಕ, ಸಕಲ ವಾದ್ಯ ವೈಭವಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಗ್ರಾಮದೇವತೆಯ ಭವ್ಯ ರಥೋತ್ಸವ ನೆರವೇರಿತು.ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಗಮನ ಸೆಳೆದವು. ಸಾರವಾಡದ ಈಶ್ವರ ಗಾರುಡಿ ಗೊಂಬೆ ಗೆಳೆಯರ ಬಳಗ, ಬಾದಾಮಿ ತಾಲೂಕಿನ ಗೋವಿನಕೊಪ್ಪದ…

Read More

ಎಆರ್‌ಒ ಮಂಜುಳಾ ವಿರುದ್ಧ ಲೋಕಾಯುಕ್ತಕ್ಕೆ ಎನ್‌.ಆರ್‌.ರಮೇಶ್‌ ದೂರು

ಬೆಂಗಳೂರು ಮಾಜಿ ಸಚಿವ ಹಾಗೂ ಶಾಸಕ ಎಸ್‌‍.ಟಿ.ಸೋಮಶೇಖರ್‌ ಅವರ ಪರಮಾಪ್ತ ಅಶ್ವತ್ಥ್ ಎಂಬ ವ್ಯಕ್ತಿ ನಿರ್ಮಿಸಿರುವ ಅಕ್ರಮ ಬಡಾವಣೆಗೆ ಕಾನೂನು ಬಾಹಿರವಾಗಿ ಎ ಖಾತಾಗಳನ್ನು ಮಾಡಿ ಕೊಡುವ ಮೂಲಕ ಪಾಲಿಕೆಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಹೇರೋಹಳ್ಳಿ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿ ಮಂಜುಳಾ ವಿರುದ್ಧ ಬಿಜೆಪಿ ಮುಖಂಡ ಎನ್‌.ಆರ್‌.ರಮೇಶ್‌ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಯಶವಂತಪುರ ವಿಧಾನಸಭಾ ಕ್ಷೇತ್ರದ ಹೇರೋಹಳ್ಳಿ ಗ್ರಾಮದಲ್ಲಿರುವ 4.20 ಎಕರೆ ವಿಸ್ತೀರ್ಣದ ಸ್ವತ್ತಿನಲ್ಲಿ ಅಶ್ವಥ್‌ ಎಂಬಾತ ಬಿಡಿಎ ನಕ್ಷೆ ಮಂಜೂರಾತಿಯನ್ನೇ ಪಡೆಯದೆ…

Read More

ರಾಮದುರ್ಗದಲ್ಲಿ ಸುರಿದ ಗುಡುಗು ಸಹಿತ ಮಳೆ

ರಾಮದುರ್ಗ ಪಟ್ಟಣದಲ್ಲಿ ಮಂಗಳವಾರ 20 ನಿಮಿಷ ಸುರಿದ ಮಳೆ ಜನತೆಗೆ ತಂಪನ್ನೆರೆಯಿತು. ಗುಡುಗು ಹಾಗೂ ಬಿರುಗಾಳಿ ಸಹಿತ ಸುರಿದ ಮಳೆ ಜನರಿಗೆ ಸ್ವಲ್ಪ ಸಮಾಧಾನ ನೀಡಿತು. ಕಳೆದ ಒಂದು ತಿಂಗಳಿಂದ ತಾಲ್ಲೂಕಿನಲ್ಲಿ ಪ್ರತಿದಿನ 38 ರಿಂದ40 ಡಿಗ್ರಿ ಉಷ್ಣಾಂಶ ದಾಖಲಾಗಿತ್ತು. ನೆತ್ತಿ ಸುಡುವ ಬಿಸಿಲಿಗೆ ಜನರು ಮನೆಗಳಿಂದ ಹೊರಬರಲಾರದ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಂಗಳವಾರ ಮಧ್ಯಾಹ್ನ ನಾಲ್ಕು ಗಂಟೆವರೆಗೂ ಸುಡುವ ಬಿಸಿಲು ಇತ್ತು ನಾಲ್ಕು ಗಂಟೆ ನಂತರ ಗುಡುಗು ಹಾಗೂ ಬಿರುಗಾಳಿ ಸಹಿತ ಸುರಿದ ಮಳೆ.

Read More

ಅಬಕಾರಿ ಪ್ರಕರಣಗಳಲ್ಲಿ ಜಪ್ತಾದ 11 ದ್ವೀಚಕ್ರ 01ನಾಲ್ಕುಚಕ್ರ ವಾಹನ ದಿನಾಂಕ:14/05/2026 ರಂದು ಹರಾಜು ಮಾಡಲಾಗುವುದು.

ಮಾನ್ಯ ಅಬಕಾರಿ ಉಪ ಆಯುಕ್ತರು ಬೆಳಗಾವಿ (ದಕ್ಷಿಣ) ಜಿಲ್ಲೆ ಬೆಳಗಾವಿ ರವರ ಆದೇಶದಂತೆ ಮಾನ್ಯ ಅಬಕಾರಿ ಉಪ ಅಧಿಕ್ಷಕರು ರಾಮದುರ್ಗ ಉಪ ವಿಭಾಗ ರವರ ನೇತೃತ್ವದಲ್ಲಿ ದಿನಾಂಕ:14/05/2026 ರಂದು ಅಬಕಾರಿ ಪ್ರಕರಣಗಳಲ್ಲಿ ಜಪ್ತಾದ ವಾಹನಗಳನ್ನು ಟೆಂಡರ್ ಕಂ-ಬಹಿರಂಗ ಹರಾಜು ಮಾಡಲಾಗುವುದು 11 ದ್ವೀಚಕ್ರ ವಾಹನ 01 ನಾಲ್ಕುಚಕ್ರ ಒಟ್ಟು 12 ವಾಹನಗಳನ್ನು ಸಾರ್ವಜನಿಕ ಟೆಂಡರ್ ಕಂ-ಬಹಿಂರಂಗ ಹರಾಜು ಮಾಡಲಾಗುವುದು ಆದ್ದರಿಂದ ಸಾರ್ವಜನಿಕರು ಹೆಚ್ಚಿನ ಜನಸಂಖ್ಯೆಯಲ್ಲಿ ಬಂದು ಹರಾಜಿನಲ್ಲಿ ಭಾಗವಹಿಸುವಂತೆಅಬಕಾರಿ ಇಲಾಖೆಯವರು ಹೇಳಿದರು.

Read More

ಕಟಕೋಳ ಪೊಲೀಸರು ₹21,02,560 ಲಕ್ಷ ಮೌಲ್ಯದ ಕದ್ದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ದೂರು ನೀಡಿದ 48 ಗಂಟೆಯಲ್ಲಿ ಕಟಕೋಳ ಪೊಲೀಸರಿಂದ ಮನೆ ಕಳ್ಳತನ ಪ್ರಕರಣದ ಇಬ್ಬರೂ ಆರೋಪಿತರ ಬಂಧನ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಹೊಸಕೋಟೆ ಗ್ರಾಮದ ದಿಲ್ಶಾದ ಸೈದುಸಾಬ ನದಾಫ್ ಅವರ ಮನೆಯಲ್ಲಿ ಇದ್ದ ಬಂಗಾರದ ಕಳ್ಳತನದ ಸಂಬಂಧಿಸಿದಂತೆ ಕಟಕೋಳ ಪೊಲೀಸ್ ಠಾಣಾ ಪೊಲೀಸರು ಇಬ್ಬರು ಆರೋಪಿತರನ್ನು ಬಂಧಿಸುವುದರೊಂದಿಗೆ, ಕಳ್ಳತನವಾಗಿದ್ದ 21,02,560/- ಕಿಮ್ಮತ್ತಿನ 154.6ಗ್ರಾಂ ಬಂಗಾರದ ಆಭರಣ ಹಾಗೂ 11,250/- ಕಿಮ್ಮತ್ತಿನ 45 ಗ್ರಾಂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ದಿನಾಂಕಃ 05/05/2026 ರಂದು ದಿಲ್ಶಾದ ಸೈದುಸಾಬ ನದಾಫ್ ಇವಳು…

Read More

ಕರೋಶಿ ಆಸ್ಪತ್ರೆ ಮೇಲೆ ರೇಡ್! ಹೈ-ಡೋಸ್ ಔಷಧಿ ನೀಡಿ ಮೋಸ: ನಕಲಿ ವೈದ್ಯರಿಗೆ ಡಿಎಚ್‌ಒ ಶಾಕ್‌!

ಚಿಕ್ಕೋಡಿ ತಾಲೂಕಿನ ಕರೋಶಿಯಲ್ಲಿ ನಕಲಿ ಡಾಕ್ಟರ್‌ಗಳಿಗೆ ಡಿಎಚ್‌ಒ ತಂಡ ಬಿಗ್ ಶಾಕ್ ಕೊಟ್ಟಿದೆ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಈಶ್ವರ ಗಡಾದ್ ನೇತೃತ್ವದ ಏಳು ತಂಡಗಳು ಒಂದೇ ಟೈಮ್‌ಗೆ ಗ್ರಾಮದ ಆಸ್ಪತ್ರೆ-ಕ್ಲಿನಿಕ್‌ಗಳ ಮೇಲೆ ದಾಳಿ ಮಾಡಿ ದಾಖಲೆಗಳು, ಔಷಧಿ, ಚಿಕಿತ್ಸೆ ಪದ್ಧತಿ ಎಲ್ಲವನ್ನೂ ಚೆಕ್‌ ಮಾಡಿದ್ದಾರೆ. ಕೆಲವರು ಮೆಡಿಕಲ್ ಓದಿಲ್ಲ, ಆದರೂ ಡಾಕ್ಟ‌ರ್ ಅಂತ ಕುಳಿತು ಹಾಯ್‌ಡೋಸ್ ಔಷಧಿ ಕೊಡುತ್ತಿದ್ದಾರೆ ಅಂತ ಬಂದ ದೂರು ಮೇರೆಗೆ ಈ ಆಪರೇಷನ್ ನಡೆಸಿದ್ದಾರೆ. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ನಡೆದ ಈ ದಾಳಿಯಲ್ಲಿ…

Read More

ಡ್ರೈವರ್ ಮಗನಿಗೆ ಒಲಿದ ಅದೃಷ್ಟ: ವಿಜಯ್ ಸಾರಥಿಯ ಮಗ ಶಬರಿನಾಥನ್ ಈಗ ಶಾಸಕ!

​ತಮಿಳುನಾಡು ಚುನಾವಣೆಯಲ್ಲಿ ದಳಪತಿ ವಿಜಯ್ ಅವರ ಟಿವಿಕೆ (TVK) ಪಕ್ಷ ಕೇವಲ ಗೆಲುವನ್ನಷ್ಟೇ ಸಾಧಿಸುತ್ತಿಲ್ಲ, ಹೊಸ ಇತಿಹಾಸವನ್ನೇ ಬರೆಯುತ್ತಿದೆ. ಇದರ ನಡುವೆ ಎಲ್ಲರ ಗಮನ ಸೆಳೆಯುತ್ತಿರುವುದು ವಿರುಗಂಬಕ್ಕಂ ಕ್ಷೇತ್ರದ ಅಭ್ಯರ್ಥಿ ಶಬರಿನಾಥನ್. ಈ ಯುವಕನ ಗೆಲುವಿನ ಹಾದಿ ಮತ್ತು ವಿಜಯ್ ಅವರೊಂದಿಗಿನ ನಂಟು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 30 ವರ್ಷಗಳ ನಿಷ್ಠೆಗೆ ಸಿಕ್ಕ ಬೆಲೆ​ಶಬರಿನಾಥನ್ ಅವರು ಬೇರಾರೂ ಅಲ್ಲ, ಕಳೆದ 30 ವರ್ಷಗಳಿಂದ ವಿಜಯ್ ಅವರ ನೆರಳಿನಂತೆ ಜೊತೆಗಿದ್ದ ಕಾರು ಚಾಲಕ ಮತ್ತು ಆಪ್ತ…

Read More

ಬಾಗಲಕೋಟೆ 21866 ಮತಗಳ ಅಂತರದಿಂದ ಕಾಂಗ್ರೆಸ್‌ ಅಭ್ಯರ್ಥಿ ಉಮೇಶ್ ಮೇಟಿ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಬಾಗಲಕೋಟೆ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ 21866 ಮತಗಳ ಅಂತರದಿಂದ ಕಾಂಗ್ರೆಸ್‌ ಅಭ್ಯರ್ಥಿ ಉಮೇಶ್ ಮೇಟಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕೊನೆಯ 23ನೇ ಸುತ್ತಿನಲ್ಲಿ 21866 ಮತಗಳ ಅಂತರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉಮೇಶ ಮೇಟಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಒಟ್ಟು 97941 ಮತಗಳನ್ನು ಪಡೆಯುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ 76075 ಮತಗಳನ್ನು ಪಡೆಯುವ ಮೂಲಕ ಸೋತಿದ್ದಾರೆ. ಮತ ಎಣಿಕೆ ಕೇಂದ್ರದ ಹೊರಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು…

Read More

ಗ್ರಾಮೀಣ ಭಾಗಕ್ಕೆ ಉತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸಲು ಕ್ರಮ: ಸಚಿವ ರಾಮಲಿಂಗಾರೆಡ್ಡಿ

ಬೆಳಗಾವಿ ರಾಜ್ಯ ಸರಕಾರದ ವತಿಯಿಂದ ಅನೇಕ ಜನಪರ‌‌ ಯೋಜನೆಗಳನ್ನು ಜಾರಿಗೊಳಿಸುವುದರ ಮೂಲಕ ರಾಜ್ಯದ ಜನರ ಜೀವನ‌ಮಟ್ಟ ಸುಧಾರಿಸುವ ಕಾರ್ಯವಾಗುತ್ತಿದೆ. ಚನ್ನಮ್ಮ‌ ಕಿತ್ತೂರಿನಲ್ಲಿ ಉದ್ಘಾಟನೆಗೊಂಡಂತಹ ಹೊಸ ಬಸ್ ಘಟಕದಿಂದ ಈ ಭಾಗದ ಗ್ರಾಮೀಣ ಜನರಿಗೆ ಉತ್ತಮ ಸಾರಿಗೆ ವ್ಯವಸ್ಥೆಗೆ ಅನುಕೂಲವಾಗಲಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಹೇಳಿದರು. ಚನ್ನಮ್ಮನ‌ ಕಿತ್ತೂರು ನೂತನ ಬಸ್ ಘಟಕದ ಆವರಣದಲ್ಲಿ ಸೋಮವಾರ ಚನ್ನಮ್ಮನ‌ಕಿತ್ತೂರು ನೂತನ‌ ಬಸ್ ಘಟಕ‌ ಉದ್ಘಾಟಿಸಿ, ಹೊಸ ಬಸ್ ಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಚನ್ನಮ್ಮನ…

Read More

ಶ್ರೀ ಲಿಂಗರಾಜ ಮಾಜಿ ಮತ್ತು ಹಾಲಿ ಸೈನಿಕರ ಸಂಘ (ರಿ) ಶಿರಸಂಗಿ ಉದ್ಘಾಟನಾ ಸಮಾರಂಭ

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಇನಾಂಗೋವನಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೇ 1 ರಂದು ಶುಕ್ರವಾರ ಶ್ರೀ ಲಿಂಗರಾಜ ಮಾಜಿ ಮತ್ತು ಹಾಲಿ ಸೈನಿಕರ ಸಂಘ (ರಿ) ಶಿರಸಂಗಿ ಉದ್ಘಾಟನಾ ಹಾಗೂ ನಿವೃತ್ತಿ ಸನ್ಮಾನ ಸಮಾರಂಭವನ್ನು ವೇದಿಕೆ ಮೇಲೆ ಇದ್ದಂತ ಎಲ್ಲಾ ಗಣ್ಯರಿಂದ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಲಾಯಿತು. ರಾಮಚಂದ್ರ ಶಿರಸಪ್ಪ ಪತ್ತಾರ ನಿವೃತ್ತ ಸೈನಿಕರು ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಸತತ 24 ವರ್ಷಗಳ ಕಾಲ ಭಾರತೀಯ…

Read More