ಕರಸೇವಕರಾದ ಗೋವಿಂದ ಮೋಡಕ ಹಾಗೂ ಮಲ್ಲಿಕಾರ್ಜುನ ಭಾವಿಕಟ್ಟಿ ಅವರನ್ನು ಸನ್ಮಾನಿಸಲಾಯಿತು.
ರಾಮದುರ್ಗ ಪಟ್ಟಣದ ಪಟಕೋಟ ಗಲ್ಲಿಯ ಅಂಜನೇಯನ ದೇವಸ್ಥಾನದಲ್ಲಿ ಕರಸೇವಕರಾದ ಗೋವಿಂದ ಮೋಡಕ ಹಾಗೂ ಮಲ್ಲಿಕಾರ್ಜುನ ಭಾವಿಕಟ್ಟಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಜನೇವರಿ 22 ರಂದು ಅಯ್ಯೋಧೆ ರಾಮ ಮಂದಿರ ಉದ್ಘಾಟನೆ ಹಾಗೂ ಪ್ರಾಣ ಪ್ರತಿಷ್ಠಾಪಣೆ ಹಿನ್ನಲೆ ರಾಮದುರ್ಗದಲ್ಲಿ ಹಿಂದೂ ಕಾರ್ಯಕರ್ತ ಸಂಭ್ರಮ ಮುಗಿಲು ಮುಟ್ಟಿತ್ತು. ಈ ಹಿನ್ನಲೆ ರಾಮದುರ್ಗ ಪಟ್ಟಣದ ಲಕ್ಷ್ಮೀ ನರಸಿಂಹ ದೇವಸ್ಥಾನ, ಶ್ರೀ ರಾಘವೇಂದ್ರ ಸ್ವಾಮೀಗಳ ಮಠ ಹಾಗೂ ಅಂಜನೇಯ ದೇವಸ್ಥಾನದಲ್ಲಿ ವಿವಿಧ ಪೂಜಾ ಕಾರ್ಯಕ್ರಮದ ಜೊತೆಗೆ ರಾಮ ನಾಮ ಜಪ ಹನುಮಾನ ಚಾಲೀಸ…
