ಪೊಲೀಸ್ ಠಾಣೆಯೊಳಗೆ ಮೊಬೈಲ್ ಒಯ್ಯುವುದನ್ನು ತಡೆಯಲು ಯಾವುದೇ ಕಾನೂನಿಲ್ಲ!
ಯಾರಾದರೂ ಪೊಲೀಸ್ ಠಾಣೆಗೆ ಹೋದಾಗ ಇಲ್ಲವೇ ಅಧಿಕಾರಿಗಳನ್ನು ಭೇಟಿ ಮಾಡುವಾಗ, “ಮೊಬೈಲ್ ಸ್ವಿಚ್ ಆಫ್ ಮಾಡಿ” ಇಲ್ಲವೇ “ಮೊಬೈಲ್ ಹೊರಗೆ ಇಟ್ಟು ಬನ್ನಿ” ಎಂದು ಹೇಳುವುದನ್ನು ಕೇಳಿರಬಹುದು. ಆದರೆ, ಹೀಗೆ ತಡೆಯಲು ಅವರಿಗೆ ಅಧಿಕಾರವಿದೆಯೇ? ಆರ್‌ಟಿಐ (RTI) ಅಡಿಯಲ್ಲಿ ಬಹಿರಂಗವಾದ ದಿಟ ಇಲ್ಲಿದೆ. ಮಾಹಿತಿ ಹಕ್ಕು ಅರ್ಜಿಗೆ, ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರ (DG & IGP) ಕಚೇರಿಯೇ ಅಧಿಕೃತವಾಗಿ ಬದಲು ನೀಡಿದೆ. “ಸಾರ್ವಜನಿಕರು ಪೊಲೀಸ್ ಅಧಿಕಾರಿಗಳ ಕಚೇರಿ ಒಳಗಡೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗುವುದನ್ನು ನಿರ್ಬಂಧಿಸಿ…
