ಶಾಸಕ ಅಶೋಕ ಪಟ್ಟಣ ಅವರು ಉಚಿತವಾಗಿ ಕೊಡುಗೆ ನೀಡಿದ ಸ್ಕೂಲ್ ಬ್ಯಾಗ್ ಹಾಗೂ ನೋಟ್ ಬುಕ್ಸ್ಗಳನ್ನು ವಿದ್ಯಾರ್ಥಿಗಳಿಗೆ ವಿಶ್ವಭಾರತಿ ಪ.ಪೂ ಕಾಲೇಜಿನಲ್ಲಿ ನ್ಯಾಯವಾದಿ ಜಮುನಾ ಪಟ್ಟಣ ಅವರು ವಿತರಿಸಿದರು.
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ವಿಶ್ವಭಾರತಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ಹಾಗೂ ನೋಟ್‌ಬುಕ್ಸ್ಗಳನ್ನು ನ್ಯಾಯವಾದಿ ಜಮುನಾ ಪ್ರದೀಪ ಪಟ್ಟಣ ವಿತರಿಸಿ ಮಾತನಾಡಿದರು ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗಲೆಂದು ಶಾಸಕರಾದ ಅಶೋಕ ಪಟ್ಟಣ ಅವರು ಒಂದನೇ ತರಗತಿಯಿಂದ ಪದವಿ ಹಂತದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತವಾಗಿ ಸ್ಕೂಲ್ ಬ್ಯಾಗ್ ಹಾಗೂ ನೋಟ್ ಬುಕ್ಸ್ ನೀಡುತ್ತಿದ್ದಾರೆ. ಶಿಕ್ಷಣದಿಂದಲೆ ದೇಶದ ಪ್ರಗತಿ ಸಾಧ್ಯವಿದೆ. ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸರಕಾರ ಅನೇಕ ಯೋಜನೆಗಳನ್ನು ರೂಪಿಸಿದ್ದು. ಅವುಗಳ ಸದುಪಯೋಗ ಪಡಿಸಿಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು…
