ವ್ಯಾಪಕ ಮಳೆಯ ಮುನ್ಸೂಚನೆ; ತಮ್ಮ ಕೇಂದ್ರ ಸ್ಥಾನ ಬಿಡದಂತೆ ಜಿಲ್ಲೆಯ ಎಲ್ಲ ಅಧಿಕಾರಿ, ಸಿಬ್ಬಂದಿಗಳಿಗೆ ಡಿ.ಸಿ. ಆದೇಶ
ಧಾರವಾಡ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಧಾರವಾಡ ಜಿಲ್ಲೆಯಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಇದ್ದು, (ರೆಡ್ ಅಲರ್ಟ್) ಬಾರಿ ಮಳೆಯಿಂದ ನೆರೆಹಾವಳಿ, ಜನ ಜಾನುವಾರು, ಜೀವ ಹಾನಿ, ರಸ್ತೆ ಹಾನಿ, ಸೇತುವೆ ಹಾನಿ, ಸಾರ್ವಜನಿಕ ಆಸ್ತಿ ಹಾನಿಗಳಿಂದ, ನಾಗರಿಕ ಮೂಲಭೂತ ಸೌಕರ್ಯಕ್ಕೆ ತೊಂದರೆ ಉಂಟಾಗದಂತೆ ಕ್ರಮ ವಹಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಕಡ್ಡಾಯವಾಗಿ ತಮ್ಮ ತಮ್ಮ ಸ್ಥಾನದಲ್ಲಿದ್ದು ಮಳೆ ಹಾನಿಯಿಂದ ತೊಂದರೆಗೀಡಾದ ಸಾರ್ವಜನಿಕರ ಮೂಲಭೂತ ಸೌಕರ್ಯಗಳನ್ನು ತುರ್ತಾಗಿ ಸರಿಪಡಿಸಿ ಕ್ರಮ ವಹಿಸುವುದು ಅವಶ್ಯಕತೆವಿರುತ್ತದೆ…
