ಹಲಗತ್ತಿ ಗ್ರಾಮದಲ್ಲಿ ಮಳೆಗೆ ಮನೆ ಕುಸಿದು ಬಿದ್ದಿದೆ. ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಹಲಗತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬೀರಲಿಂಗೇಶ್ವರ ಓಣಿಯಲ್ಲಿಪುಂಡಲೀಕ್ ತಿಮ್ಮಣ್ಣ ಶೇಡಬಾಳ ಇವರು ವಾಸವಾಗಿದ್ದ ಮನೆಯು ನಿರಂತರ ಮಳೆಗೆ ಮನೆ ಕುಸಿದು ಬಿದ್ದಿದೆ. ಸದ್ಯ ಕುಟುಂಬ ಮನೆ ಇಲ್ಲದೆ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ವಾಸವಾಗಿದ್ದಾರೆ.
