BREAKING NEWS

ರಾಮದುರ್ಗದಲ್ಲಿ ಸಂಭ್ರಮದಿಂದ ಗಣೇಶ ಹಬ್ಬ ಆಚರಣೆ.

ರಾಮದುರ್ಗ ತಾಲೂಕಿನಾದ್ಯಂತ ಸೇರಿದಂತೆ ಗಣೇಶ ಹಬ್ಬವನ್ನು ಬುಧವಾರ ಸಂಭ್ರಮದಿಂದ ಆಚರಿಸಲಾಯಿತು. ಜನರು ಮನೆಗಳಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಿದರು. ಹಾಗೆಯೇ ಕೆಲವು ಆಯ್ದ ಸ್ಥಳಗಳಲ್ಲಿ ಯುವಕರು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ನಗರಾದ್ಯಂತ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಈ ಬಾರಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಸ್ಥಳಗಳಲ್ಲಿ ಪೊಲೀಸರು ಹೆಚ್ಚಿನ ನಿಗಾವಹಿಸಿದ್ದಾರೆ. ಪ್ರತಿಷ್ಠಾಪನೆ : ಪಟ್ಟಣದ ವಾಜಪೇಯಿ ನಗರ, ಗಾಂಧಿನಗರ, ವಡ್ಡರ ಓಣಿ, ಮಡ್ಡಿಓಣಿ, ಜುನೀಪೇಠ, ಈಟಿಓಣಿ, ನವೀಪೇಠ, ರಾಧಾಪೂರಪೇಠ, ಕಾಶಿಪೇಠ,ನಾರಾಯಣಪೇಠ, ನಿಂಗಾಪೂರಪೇಠ, ಬಾಣಕಾರಪೇಠ, ತೇರಬಜಾರ, ನಾಗಪ್ಪನಕಟ್ಟಿಯಾನಂಪೇಠ,…

Read More

ಚಿಲಮೂರ ಗ್ರಾಮದ ಸರ್ಕಾರಿ ಶಾಲೆಯ ಶಾಲಾ ಸುಧಾರಣಾ ಸಮಿತಿ ರಚನೆ

ಚಿಲಮೂರ ಗ್ರಾಮದ ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ನೂತನವಾಗಿ ಶಾಲಾ ಸುಧಾರಣಾ ಸಮಿತಿಯನ್ನು ಚೀಟಿ ಎತ್ತುವ ಮೂಲಕ ಸದಸ್ಯರನ್ನು ಆಯ್ಕೆ ಮಾಡಲಾಯಿತು, ಊರಿನ ಗ್ರಾಮಸ್ಥರ ಸಮ್ಮುಖದಲ್ಲಿ ಹತ್ತು ಜನ ಪುರುಷ ಸದಸ್ಯರು ಎಂಟು ಜನ ಮಹಿಳಾ ಸದಸ್ಯರು ಆಯ್ಕೆ ಮಾಡುವ ಕಾರ್ಯಕ್ರಮವು ನಡೆದಿದ್ದು, ಸದಸ್ಯರನ್ನು ಆಯ್ಕೆಮಾಡಿಕೊಂಡು, ಸಮಿತಿಯ ಅಧ್ಯಕ್ಷರನ್ನಾಗಿ ಶ್ರೀ ಫಕೀರಪ್ಪ ಯಮನಪ್ಪ ದಳವಾಯಿ, ಉಪಾಧ್ಯಕ್ಷರನ್ನಾಗಿ ಶ್ರೀಮತಿ ಫಕೀರವ ಭೀಮಪ್ಪ ರೊಟ್ಟಿ, ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು, ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ನೋಡಲ್ ಅಧಿಕಾರಿಗಳು ಶಾಲಾ…

Read More

ಗೌರಿ ಗಣೇಶ ಮತ್ತು ಈದ್‌ ಮಿಲಾದ್‌ ಹಬ್ಬದ ನಿಮಿತ್ತ ರಾಮದುರ್ಗ ಪಟ್ಟಣದಲ್ಲಿ ಡಿ.ವಾಯ್.ಎಸ್. ಪಿ. ಚಿದಂಬರ ಮಡಿವಾಳರ ನೇತೃತ್ವದಲ್ಲಿ ಪೊಲೀಸ್ ಪಥಸಂಚಲನ

ಗೌರಿ ಗಣೇಶ ಮತ್ತು ಈದ್‌ ಮಿಲಾದ್‌ ಹಬ್ಬದ ನಿಮಿತ್ತ ರಾಮದುರ್ಗ ಪಟ್ಟಣದಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳುವ ನಿಟ್ಟಿನಲ್ಲಿ ಪಟ್ಟಣದ ಡಿ.ವಾಯ್.ಎಸ್. ಪಿ. ಚಿದಂಬರ ಮಡಿವಾಳರ ನೇತೃತ್ವದಲ್ಲಿ ಪೊಲೀಸರು ಮಂಗಳವಾರ ಪಥಸಂಚಲನ ನಡೆಸಿದರು. ಈ ಸಂದರ್ಭದಲ್ಲಿ ರಾಮದುರ್ಗ ಪೊಲೀಸ್ ಠಾಣೆಯ ಪಿಎಸ್‌ಐ ಸವಿತಾ ಮುನ್ಯಾಳ ,ಕಟಕೋಳ ಪೋಲಿಸ್ ಠಾಣೆಯ ಪಿಎಸ್ಐ ಬಸವರಾಜ್ ಕೊನ್ನೋರೆ, ಸುರೇಬಾನ ಪೊಲೀಸ್ ಠಾಣೆಯ ಪಿಎಸ್ಐ ಶಿವಾಜಿ ಪವಾರ, ಹಾಗೂ ಪೋಲಿಸ್ ಸಿಬ್ಬಂದಿಗಳು ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು

Read More

ಬೆಳಗಾವಿಗೆ ಆಗಸ್ಟ್ 6 ರಂದು ಲೋಕಾಯುಕ್ತರು ಬಂದಮೇಲೆ ಕಚೇರಿಗಳಲ್ಲಿ ಎದ್ದು ಕಾಣುವ ಲೋಕಾಯುಕ್ತ ನಾಮಫಲಕಗಳು

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ವಿವಿಧ ಕಚೇರಿಗಳಲ್ಲಿ ಎದ್ದು ಕಾಣುತ್ತಿರುವ ಲೋಕಾಯುಕ್ತ ನಾಮಫಲಕದ ಬೋರ್ಡುಗಳು ಈ ಹಿಂದೆ ಲೋಕಾಯುಕ್ತರನ್ನು ಸಂಪರ್ಕಿಸಬೇಕಾದರೆ ಆನ್ಲೈನ್ ನಲ್ಲಿ ವಿಳಾಸ ಹಾಗೂ ಮೊಬೈಲ್ ನಂಬರ್ ಅನ್ನು ಹುಡುಕಬೇಕಾಗಿತ್ತು ಆದರೆ ಇವಾಗ ಬೆಳಗಾವಿ ಜಿಲ್ಲೆಗೆ ಆಗಸ್ಟ್ 6 ರಂದು ಲೋಕಾಯುಕ್ತರಾದ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರು ಬರುತ್ತಿದ್ದಂತೆ ಬೆಳಗಾವಿ ಜಿಲ್ಲೆಯ ತಾಲೂಕಿನ ಆದಂತ ಲೋಕಾಯುಕ್ತ ನಾಮಫಲಕದ ಬೋರ್ಡುಗಳು ಎದ್ದು ಕಾಣುತ್ತೇವೆ. ಇದರಿಂದ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಿದೆ

Read More

ಇಟ್ನಾಳ ಗ್ರಾಮದ ಶ್ರೀ ಬಸವೇಶ್ವರ ಜಾತ್ರೆ

ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕ, ಇಟ್ನಾಳ ಗ್ರಾಮದ ಶ್ರೀ ಬಸವೇಶ್ವರ ಜಾತ್ರೆಯ ಹಾಗೂ ರಥೋತ್ಸವದ ನಿಮಿತ್ಯವಾಗಿ “ಧರ್ಮ ಚಿಂತನಗೋಷ್ಠಿ” ಉದ್ಘಾಟನಾ ಸಮಾರಂಭದಲ್ಲಿ ಶ್ರೀ ವಿರೂಪಾಕ್ಷಣ್ಣಾ ಮಾಮನಿಯವರ ಸುಪುತ್ರನಾದ ಶ್ರೇಯಸ್ ಮಾಮನಿ ಅವರು ಭಾಗಿಯಾಗಿ, ಸನ್ಮಾನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಪರಮ ಪೂಜ್ಯರು, ಹುಬ್ಬಳ್ಳಿ-ಧಾರವಾಡ ಬಿಜೆಪಿ ಮುಖಂಡರು ಶ್ರೀ ಸಂಕಲ್ಪ ಶೆಟ್ಟರ, ಶ್ರೀ ಪಂಚನಗೌಡ ದ್ಯಾಮನಗೌಡ್ರ, ಶ್ರೀ ಈರಣ್ಣ ಚಂದರಗಿ, ಶ್ರೀ ವಿನಯಕುಮಾರ ದೇಸಾಯಿ, ಶ್ರೀ ಶಿವಾನಂದ ಪಟ್ಟಣಶೆಟ್ಟಿ, ಶ್ರೀ ಡಿ. ಡಿ. ಹಾದಿಮನಿ, ಶ್ರೀ ರುದ್ರಣ್ಣ ಚಂದರಗಿ,…

Read More

18 ಲಕ್ಷ ವೆಚ್ಚದಲ್ಲಿ ಕೊರಕೊಪ್ಪ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಭೂಮಿ ಪೂಜಾ ಕಾರ್ಯಕ್ರಮವನ್ನು ಶಾಸಕ ವಿಶ್ವಾಸ್ ವಸಂತ ವೈದ್ಯ ನೆರವೇರಿಸಿದರು.

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನಕೊರಕೊಪ್ಪ ಗ್ರಾಮದಲ್ಲಿ, 2024-2025ನೇ ಸಾಲಿನ ಕಾಲೋನಿ ಅಭಿವೃದ್ಧಿ/ಪ್ರಗತಿ ಕಾಲೋನಿ ಯೋಜನೆಯಡಿ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ 18 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಯ ಭೂಮಿ ಪೂಜಾ ಕಾರ್ಯಕ್ರಮವನ್ನು ಶಾಸಕ ವಿಶ್ವಾಸ್ ವಸಂತ ವೈದ್ಯ ನೆರವೇರಿಸಿ ಅವರ ಮಾತನಾಡಿದರು.ಗ್ರಾಮೀಣ ಭಾಗದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಿ, ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಉತ್ತಮ ರಸ್ತೆ ಸಂಪರ್ಕ ಒದಗಿಸುವ ಉದ್ದೇಶದಿಂದ ಈ ಯೋಜನೆ ಕೈಗೊಳ್ಳಲಾಗಿದೆ. ಈ ಹೊಸ ರಸ್ತೆಯಿಂದಾಗಿ ಸ್ಥಳೀಯ ನಿವಾಸಿಗಳಿಗೆ ಓಡಾಟ…

Read More

ಬಟಕುರ್ಕಿ ಲೋಕಾಪುರ ರಸ್ತೆ ಮಧ್ಯ ಡಿವೈಡರ್‌ಗೆ ಬೈಕ್ ಡಿಕ್ಕಿ ಸವಾರ ಸ್ಥಳದಲ್ಲೇ ಸಾವು

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಬಟಕುರ್ಕಿ ಲೋಕಾಪುರ ರಸ್ತೆ ಮಧ್ಯೆ ಬೈಕ್ ಸವಾರ ಡಿವೈಡರಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬಟಕುರ್ಕಿ ಗ್ರಾಮದಲ್ಲಿ ನಡೆದಿದೆ. ಹಿರೋ ಸ್ಟೆಂಡರ ಪ್ಲಸ್ ಮೋಟಾರ ಸೈಕಲ್ಲ kA69 J2167 ನೇದ್ದರ ವಾಹನದಲ್ಲಿ ಇಬ್ಬರು ಕೂಡಿಕೊಂಡು ಲೋಕಾಪೂರದಿಂದ ಬಟಕುರ್ಕಿ ಕಡೆಗೆ ಹೋಗುವಾಗ ರಸ್ತೆ ಮದ್ಯೆ ಇರುವ ಡೈವಡರಗೆ ಹಾಯಿಸಿ ಕೆಳಗೆ ಬಿದ್ದು ತನ್ನ ತಲೆಗೆ.ಗದ್ದಕ್ಕೆ ಹಾಗೂ ಬಲಗಾಲ ಮೊಣಕಾಲಿಗೆ, ಭಾರಿಗಾಯ ಪಡಿಸಿಕೊಂಡು ಸ್ಥಳದಲ್ಲಿಯೇ ರವಿ ನಿಂಗಪ್ಪ ಬೂದಿ ವಯಾ: 29 ವರ್ಷ…

Read More

ಒಳ ಮೀಸಲಾತಿ ಅನುಷ್ಠಾನ ವರದಿಯನ್ನು ರಾಜ್ಯ ಸರ್ಕಾರವು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ.

ರಾಮದುರ್ಗ ಪಟ್ಟಣದ ಶ್ರೀ ಬಿ ಆರ್ ಅಂಬೇಡ್ಕರ್ ಸರ್ಕಲ್ ನಲ್ಲಿ ಶ್ರೀ ಎಚ್ ಎಲ್ ನಾಗಮೋಹನ ದಾಸ್ ರವರ ಒಳ ಮೀಸಲಾತಿ ಅನುಷ್ಠಾನ ವರದಿಯನ್ನು ರಾಜ್ಯ ಸರ್ಕಾರವು ಒಪ್ಪಿಕೊಂಡು ಜಾರಿ ಮಾಡಲು ಸಿದ್ಧತೆ ನಡೆಸಿರುವುದನ್ನು ಬೆಂಬಲಿಸಿ ಗೋಪಾಲ್ ಮಾದರ್ ತಾಲೂಕ ಅಧ್ಯಕ್ಷರು ದಲಿತ ಸಂಘರ್ಷ ಸಮಿತಿ ರಾಮದುರ್ಗ ರವರ ನೇತೃತ್ವದಲ್ಲಿ ಸಂಭ್ರಮಾಚರಣೆಯನ್ನು. ಆಚರಿಸಲಾಯಿತು.

Read More

ರಾಮದುರ್ಗ ಪಟ್ಟಣದಲ್ಲಿ ಎಂಎಸ್ ಐ ಎಲ್ ಮಳಿಗೆಗೆ ಕನ್ನ ಹಾಕಿದ ಕದೀಮರು.

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಬೆಳಗಾವಿ ರಸ್ತೆಯಲ್ಲಿರುವ ಎಂಎಸ್ ಐ ಎಲ್ ಮಳಿಗೆಗೆ ಕನ್ನ ಹಾಕಿದ ಘಟನೆ ರಾಮದುರ್ಗ ಪಟ್ಟಣದಲ್ಲಿ ಜರುಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಮಧ್ಯ ಸೇರಿದಂತೆ ಸಿ ಸಿ ಕ್ಯಾಮರಾಗಳು ಹಾಗೂ ಡಿವಿಆರ್ ನ್ನ ಖದೀಮರು ಕದ್ದೋಯಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ರಾಮದುರ್ಗ ಪಿಎಸ್ ಐ ಸವಿತಾ ಮುನ್ಯಾಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಖದೀಮರ ಶೋಧನೆಗಾಗಿ ಜಾಲ ಬೀಸಿದ್ದಾರೆ. ಇನ್ನು ಅಂಗಡಿ ಕಳುವಿನ. ಮೌಲ್ಯ ಪೊಲೀಸ ತನಿಖೆಯಿಂದ ತಿಳಿಯಬೇಕಾಗಿದೆ

Read More

ಆಫೀಯಾ ನೇಸರಿಕರ ರವರನ್ನು ಸವದತ್ತಿ ವಕೀಲರ ಸಂಘದಿಂದ ಆತ್ಮೀಯವಾಗಿ ಬೀಳ್ಕೊಡುವ ಸಮಾರಂಭ.

ಸವದತ್ತಿ ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕ ರಾದ ಶ್ರೀಮತಿ ಆಫೀಯಾ ನೇಸರಿಕರ ಇವರು ಖಾನಾಪುರಕ್ಕೆ ವರ್ಗಾವಣೆಗೊಂಡು ಹೋಗುವಾಗ ಸವದತ್ತಿ ವಕೀಲರ ಸಂಘದಿಂದ ಆತ್ಮೀಯವಾಗಿ ಬೀಳ್ಕೊಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಜೆ ಬಿ ಮುನವಳ್ಳಿ, ಉಪಾಧ್ಯಕ್ಷರಾದ ಶೀ ಎಂ ಎಸ್ ಹುಬ್ಬಳ್ಳಿ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎಸ್ ಎಸ್ ಕಾಳಪ್ಪನವರ ಹಾಗೂ ಮಹಿಳಾ ಪ್ರತಿನಿಧಿಯಾದ ಶ್ರೀಮತಿ ಸಾವಿತ್ರಿ ಶಿಭಾರಗಟ್ಟಿ, ಮತ್ತು ಹೆಚ್ಚುವರಿ ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕ ರಾದ ಸಚಿನ್ ಅಂಗಡಿ,…

Read More